ಮಹದಾಯಿ ನದಿ ನೀರಿಗಾಗಿ ಕೇಂದ್ರ ಸಚಿವರನ್ನು ಭೇಟಿಯಾಗಲಿರುವ ಗೋವಾ ನಿಯೋಗ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಸರ್ಕಾರಿ ಸಂಸ್ಥೆಗೆ ಬರೆದ ಪತ್ರವನ್ನು ಹಿಂಪಡೆಯುವಂತೆ ಜಾವಡೇಕರ್ ಅವರನ್ನು ಒತ್ತಾಯಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.

Last Updated : Nov 4, 2019, 11:58 AM IST
ಮಹದಾಯಿ ನದಿ ನೀರಿಗಾಗಿ ಕೇಂದ್ರ ಸಚಿವರನ್ನು ಭೇಟಿಯಾಗಲಿರುವ ಗೋವಾ ನಿಯೋಗ title=
File image

ಪಣಜಿ (ಗೋವಾ): ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುಮತಿ ನೀಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಲಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಸಾವಂತ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕಳಸಾ ಬಂಡೂರಿ ಯೋಜನೆಗೆ ಕರ್ನಾಟಕ ಸರ್ಕಾರಕ್ಕೆ ಸಮ್ಮತಿಸಿ ಬರೆದಿರುವ ಪತ್ರವನ್ನು ಹಿಂಪಡೆಯುವಂತೆ ಜಾವಡೇಕರ್ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.

"ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಥವಾ ಸುಪ್ರೀಂ ಕೋರ್ಟ್ ಆಗಿರಲಿ, ಪ್ರತಿಯೊಂದು ಸೂಕ್ತ ವೇದಿಕೆಯಲ್ಲಿಯೂ ನಾವು ಮಹಾದಾಯಿ ನದಿ ನೀರನ್ನು ಬಿಟ್ಟು ಕೊಡುವುದನ್ನು ವಿರೋಧಿಸುತ್ತೇವೆ. ಅಗತ್ಯವಿರುವ ಕಡೆ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತೇವೆ" ಎಂದು ಸಾವಂತ್ ಭಾನುವಾರ ರಾಜ್ ಭವನ ಸಮಾರಂಭದಲ್ಲಿ ಹೇಳಿದರು.

ಸೋಮವಾರ ಈ ಕುರಿತು ಮನವಿ ಮಾಡಲು ಸರ್ವ ಪಕ್ಷ ನಿಯೋಗದೊಂದಿಗೆ ರಾಷ್ಟ್ರ ರಾಜಧಾನಿಗೆ ತೆರಳುವುದಾಗಿಯೂ ಸಾವಂತ್ ಮಾಹಿತಿ ನೀಡಿದರು.

ವಾಸ್ತವವಾಗಿ, ಕೇಂದ್ರ ಪರಿಸರ ಇಲಾಖೆ ಅಕ್ಟೋಬರ್ 17 ರಂದು  ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. ಕುಡಿಯುವ ನೀರಿನ ಯೋಜನೆಗೆ ಅಗತ್ಯ ತಯಾರಿ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಈ ಪತ್ರದಲ್ಲಿ ಉಲ್ಲೇಖಿಸಿದೆ.

ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್, ಮಹದಾಯಿ ನದಿಯಿಂದ ಕಳಸಾ-ಬಂಡೂರಿ ಕುಡಿಯುವ ನೀರು ಯೋಜನೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.

"ಪರಿಸರ ಪರಿಗಣನೆಗಳಿಂದ ಅನುಮೋದನೆ ನೀಡಲಾಗಿರುವುದರಿಂದ, ಅರಣ್ಯ, ಪರಿಸರ ಮತ್ತು ಹವಾಮಾನ ಸಚಿವಾಲಯದ (MoFE) ಮಹದಾಯಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಎಂದು ಹೇಳಿ ಕಳಸಾ-ಬಂಡೂರಿ ಮೂಲಕ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಕರ್ನಾಟಕ ರಾಜ್ಯ ಯೋಜಿಸಿದೆ ಎಂದು  ಸಾವಂತ್ ತಮ್ಮ ಪತ್ರದಲ್ಲಿ ಆರೋಪಿಸಿದ್ದರು."

ಮಹದಾಯಿ ಜಲಾನಯನ ಪ್ರದೇಶದಲ್ಲಿ ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿ ಐದು ವನ್ಯಜೀವಿ ಅಭಯಾರಣ್ಯಗಳು ಮತ್ತು ಒಂದು ಪಕ್ಷಿಧಾಮವು ದುರ್ಬಲವಾಗಿದೆ ಎಂದು ಸಾವಂತ್ ಉಲ್ಲೇಖಿಸಿದ್ದರು.

"ನೀರು ಹಂಚಿಕೆಗಾಗಿ ಗೋವಾ ಮತ್ತು ಕರ್ನಾಟಕದ ನಡುವಿನ ವಿವಾದಗಳನ್ನು ಆಲಿಸಿದ್ದ ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿ 2018 ರ ಆಗಸ್ಟ್‌ನಲ್ಲಿ ತನ್ನ ತೀರ್ಪು ನೀಡಿದೆ. ಆದಾಗ್ಯೂ, ಐಎಸ್‌ಡಬ್ಲ್ಯುಡಿ ಕಾಯ್ದೆಯ ಸೆಕ್ಷನ್ 5 (3) ಪಕ್ಷಗಳು ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯಿಂದ ಸ್ಪಷ್ಟನೆ ಪಡೆಯಲು ಅವಕಾಶ ನೀಡುತ್ತದೆ. ಅದರಂತೆ, ಎಲ್ಲಾ ಮೂರು ಪಕ್ಷಗಳು ನ್ಯಾಯಮಂಡಳಿಯಿಂದ ಕೆಲವು ಸ್ಪಷ್ಟೀಕರಣಗಳನ್ನು ಕೋರಿವೆ ”ಎಂದು ಸಾವಂತ್ ಪತ್ರದಲ್ಲಿ ತಿಳಿಸಿದ್ದಾರೆ.

[With ANI Inputs]

Trending News