ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಸರ್ಕಾರಿ ಸಂಸ್ಥೆಗೆ ಬರೆದ ಪತ್ರವನ್ನು ಹಿಂಪಡೆಯುವಂತೆ ಜಾವಡೇಕರ್ ಅವರನ್ನು ಒತ್ತಾಯಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಅರೇಬಿಯನ್ ಸಮುದ್ರದಲ್ಲಿ 'ಕ್ಯಾರ್ ಚಂಡಮಾರುತ' ರಚನೆಯಿಂದ ಉಂಟಾದ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಹಲವೆಡೆ ಮರಗಳು ಧರೆಗೆ ಉರುಳಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಪೂರ್ವ-ಮಧ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕರ್ನಾಟಕ ಮತ್ತು ದಕ್ಷಿಣ ಕೊಂಕಣ ಕರಾವಳಿಯಲ್ಲಿ 45-55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕೆಲ ದಿನಗಳವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಕ್ಯಾರಿ ಬ್ಯಾಗುಗಳನ್ನು ನಿಷೇಧಿಸುವ ಮಸೂದೆಯನ್ನು ಕಳೆದ ತಿಂಗಳು ಗೋವಾ ವಿಧಾನಸಭೆಯು ಅಂಗೀಕರಿಸಿದೆ. ಅದರನ್ವಯ ಸರ್ಕಾರದ ಈ ನಿಯಮ ಉಲ್ಲಂಘಿಸುವವರಿಗೆ 2,500 ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಶಾಸಕರನ್ನು ಶೀಘ್ರದಲ್ಲೇ ಸಂಪುಟದಿಂದ ಕೈಬಿಡಲಾಗುವುದು ಎಂಬ ವರದಿಗಳ ಮಧ್ಯೆ, ಗೋವಾ ಫಾರ್ವರ್ಡ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಮತ್ತು ಅವರ ಇಬ್ಬರು ಪಕ್ಷದ ಶಾಸಕರು ಕಾಂಗ್ರೆಸ್ ಶಾಸಕರಾದ ಅಲೆಕ್ಸೊ ಲಾರೆಂಕೊ ರೆಜಿನಾಲ್ಡೊ ಅವರನ್ನು ಶುಕ್ರವಾರ ಪಣಜಿಯಲ್ಲಿ ಭೇಟಿಯಾದರು.
"ಗೋವಾದಲ್ಲಿ ಮದುವೆ ನೋಂದಣಿಗೆ ಮುಂಚಿತವಾಗಿ ಭವಿಷ್ಯದ ದಂಪತಿಗಳಿಗೆ ಎಚ್ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ನಾವು ಯೋಚಿಸುತ್ತಿದ್ದೇವೆ" ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.
ಭಾರತೀಯ ಕೋಸ್ಟ್ ಗಾರ್ಡ್ ಗುರುವಾರ ಗೋವಾದ ಕಾಬೊ ಡಿ ರಾಮಾ ಬೀಚ್ ಹತ್ತಿರ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದರು. ಆ ಪ್ರದೇಶದಲ್ಲಿ ವಾಯು ಚಂಡಮಾರುತದಿಂದ ಭಾರೀ ಪ್ರಭಾವ ಬೀರಿತು. 20 ವರ್ಷದ ವ್ಯಕ್ತಿ ಬಲವಾದ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದರು.
ಕಾಂಗ್ರೆಸ್ ಪಕ್ಷದಿಂದ ಅಥಾನಶಿಯಾ ಮಾನ್ಸ್ರೇಟ್ ಮತ್ತು ಬಿಜೆಪಿಯಿಂದ ಸುಭಾಶ್ ಶಿರೋಡ್ಕರ್, ದಯಾನಂದ ಸೋಪ್ಟೆ ಮತ್ತು ಜೋಶುವಾ ಡಿ ಸೋಜಾ ಕ್ರಮವಾಗಿ ಪಣಜಿ, ಶಿರೋಡಾ, ಮಾಂಡ್ರೆಮ್ ಮತ್ತು ಮಾಪುಸಾ ವಿಧಾನಸಭಾ ಕ್ಷೇತ್ರಗಳಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಈಗಾಗಲೇ ಲೋಕಸಭಾ ಚುನಾವಣೆಯ ಅರ್ಧ ಹಂತಗಳು ಇನ್ನೇನು ಮುಗಿಯುತ್ತಾ ಬಂದಿವೆ. ನಾಲ್ಕನೆ ಹಂತದ ಚುನಾವಣೆ ಸೋಮವಾರದಂದು ನಡೆಯಲಿದೆ.ಈ ಸಂದರ್ಭದಲ್ಲಿ ಬಿಜೆಪಿಕರ್ನಾಟಕ ಮತ್ತು ಗೋವಾದಲ್ಲಿನ ಕ್ಷೇತ್ರಗಳ ಉಪಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಜಲೇಶ್ ಕ್ರೂಸ್ ಟರ್ಮಿನಲ್ ನ ಅಂತಾರಾಷ್ಟ್ರೀಯ ಖ್ಯಾತಿ ಪಡೆದ 'ಕರ್ನಿಕಾ' ಕ್ರೂಸ್ ಹಡಗು ಹದಿನಾಲ್ಕು ಅಂತಸ್ತುಗಳ ಕ್ರೂಸ್ ಆಗಿದ್ದು, ಬರೋಬ್ಬರಿ 2,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಮೊದಲಿಗೆ ಸೋಮವಾರ ರಾತ್ರಿ 9 ಗಂಟೆಗೆ ಪ್ರಮಾಣವಚನ ಸಮಾರಂಭವನ್ನು ನಿಗದಿಗೊಳಿಸಲಾಗಿತ್ತು. ಆದರೆ, ಬಿಜೆಪಿ ಮೈತ್ರಿಕೂಟಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ವಿಳಂಬವಾದ ಕಾರಣ ತಡರಾತ್ರಿ ಪ್ರಮಾಣವಚನ ಸ್ವೀಕರಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.