ನವದೆಹಲಿ: ಕರೋನವೈರಸ್ ಪ್ರಕರಣಗಳ ಉಲ್ಬಣ ಹೆಚ್ಚಾಗಿರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನ ಮುಖ್ಯಸ್ಥೆ ಸೋನಿಯಾ ಗಾಂಧಿ ಇಂದು ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯಗಳ ಸಿಎಂ ಗಳೊಂದಿಗೆ ವರ್ಚುವಲ್ ಸಭೆಯನ್ನು ನಡೆಸಿದರು.ಈ ಸಭೆಯಲ್ಲಿ ರಾಹುಲ್ ಗಾಂಧೀ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.
ಈ ಸಭೆಯಲ್ಲಿ ಸೋನಿಯಾಗಾಂಧಿ ಅವರು ಪರೀಕ್ಷೆ, ಮತ್ತು ಲಸಿಕೆ ಹಾಕುವುದು ಇವೆಲ್ಲವೂ ಸರ್ಕಾರದ ಆದ್ಯತೆಯಾಗಿರಬೇಕು ಎಂದು ಹೇಳಿದರು.
ಇದನ್ನೂ ಓದಿ: ತೈಲ ಇಂಧನಗಳ ಬೆಲೆ ಹೆಚ್ಚಳ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ
'ನಾವು ಭಾರತದ ಲಸಿಕೆ ಡ್ರೈವ್ ಬಗ್ಗೆ ಮುಖ್ಯವಾಗಿ ಗಮನಹರಿಸಬೇಕು, ನಂತರ ಲಸಿಕೆಗಳನ್ನು ಮಾತ್ರ ರಫ್ತು ಮಾಡಿ ಇತರ ದೇಶಗಳಿಗೆ ಉಡುಗೊರೆಯಾಗಿ ನೀಡಬೇಕು. ಜವಾಬ್ದಾರಿಯುತ ನಡವಳಿಕೆಯ ಮೇಲೆ ನಾವು ಒತ್ತು ನೀಡಬೇಕು.ಎಲ್ಲಾ ಕಾನೂನುಗಳು ಮತ್ತು ಕೋವಿಡ್ -19 (Covid-19) ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು" ಎಂದು ಅವರು ಹೇಳಿದರು.
ಲಸಿಕೆಗಳ ರಫ್ತು ಕುರಿತು ಸೋನಿಯಾ ಗಾಂಧಿಯವರ ಹೇಳಿಕೆ ಒಂದು ದಿನದ ನಂತರ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿಗೆ ಮನವಿ ಮಾಡಿ ದೇಶೀಯ ಲಸಿಕೆ ಅಗತ್ಯತೆಗಳ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದರು.ಇದೆ ವೇಳೆ ಲಸಿಕೆ ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸೋನಿಯಾ ಗಾಂಧಿ,"ಮೋದಿ ಸರ್ಕಾರವು ಪರಿಸ್ಥಿತಿಯನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಭಾರತದಲ್ಲಿ ಲಸಿಕೆ ಕೊರತೆಯನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿದೆ" ಎಂದು ದೂರಿದರು.
ಇದನ್ನೂ ಓದಿ: ಚಿಂತೆ ಮಾಡುವ ಅಗತ್ಯವಿಲ್ಲ ಆದರೆ ಕರೋನವೈರಸ್ ಬಗ್ಗೆ ಜಾಗರೂಕರಾಗಿರಿ: ತೆಲಂಗಾಣ ಸಿಎಂ
ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ಕುರಿತು ಮಾತನಾಡಿದ ಅವರು, "ಚುನಾವಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಾಮೂಹಿಕ ಸಭೆಗಳು ಕೋವಿಡ್ ಅನ್ನು ವೇಗಗೊಳಿಸಿವೆ, ಅದಕ್ಕಾಗಿ ನಾವೆಲ್ಲರೂ ಸ್ವಲ್ಪ ಮಟ್ಟಿಗೆ ಜವಾಬ್ದಾರರಾಗಿರುತ್ತೇವೆ. ನಾವು ಈ ಜವಾಬ್ದಾರಿಯನ್ನು ಸ್ವೀಕರಿಸಬೇಕು ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ನಮ್ಮ ಮೇಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಪಂಜಾಬ್, ರಾಜಸ್ಥಾನ, ಯುಪಿ, ಉತ್ತರಾಖಂಡ, ಛತ್ತೀಸ್ಗಡ ಬಿಹಾರ ಸೇರಿದಂತೆ ಹಲವಾರು ರಾಜ್ಯಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ.
ಇದನ್ನೂ ಓದಿ: Congress: ಕಾಂಗ್ರೆಸ್ನಲ್ಲಿ ಸದ್ಯಕ್ಕಿಲ್ಲ ಎಲೆಕ್ಷನ್: ಹಾಗಾದ್ರೆ ನೂತನ ಅಧ್ಯಕ್ಷರ ಆಯ್ಕೆ ಯಾವಾಗ?
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ನಂತರ ಲಸಿಕೆಗಳ ರಫ್ತು, ಇತರ ಲಸಿಕೆಗಳ ತ್ವರಿತ ಅನುಮೋದನೆ ಮತ್ತು ಅಗತ್ಯವಿರುವ ಎಲ್ಲರಿಗೂ ಲಸಿಕೆ ತೆರೆಯುವಂತೆ ಒತ್ತಾಯಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.