ಜ&ಕಾ ಸಂಧಾನಕ್ಕೆ ಐಬಿ ನಿವೃತ್ತ ಅಧಿಕಾರಿ ನೇಮಿಸಿರುವುದು ಕೇಂದ್ರ ಸರ್ಕಾರದ ವೈಫಲ್ಯ- ಮಲ್ಲಿಕಾರ್ಜುನ ಖರ್ಗೆ

                         

Last Updated : Oct 24, 2017, 12:14 PM IST
ಜ&ಕಾ ಸಂಧಾನಕ್ಕೆ ಐಬಿ ನಿವೃತ್ತ ಅಧಿಕಾರಿ ನೇಮಿಸಿರುವುದು ಕೇಂದ್ರ ಸರ್ಕಾರದ   ವೈಫಲ್ಯ- ಮಲ್ಲಿಕಾರ್ಜುನ ಖರ್ಗೆ title=

ಕಲಬುರಗಿ: ಜಮ್ಮು-ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪ್ರತ್ಯೇಕವಾದಿಗಳ ಜೊತೆ ಮಾತನಾಡಲು ಸಂಧಾನಕಾರರನ್ನು ನೇಮಿಸಿರುವುದು ನಾಚ್ಕೆಗೆದಿನ ಸಂಗತಿ. ಅಲ್ಲದೆ ಸಂಧಾನಕ್ಕೆ ಇಂಟೆಲಿಜೆನ್ಸಿ ಬ್ಯೂರೋ ನಿವೃತ್ತ ಅಧಿಕಾರಿ ದಿನೇಶ್ವರ್ ಶರ್ಮಾರನ್ನು ನೇಮಿಸಿರುವುದು ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಕಾಂಗ್ರೇಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಮತ್ತು ಕೇಂದ್ರದಲ್ಲಿ ಇವರದೇ ಸರ್ಕಾರವಿದೆ. ಆದರೂ ಜಮ್ಮು-ಕಾಶ್ಮೀರದ ಸಮಸ್ಯೆ ಇತ್ಯರ್ಥಕ್ಕೆ ಸಂಧಾನಕಾರರನ್ನು ನೇಮಿಸಿರುವುದು ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸಂಧಾನಕಾರರ ನೇಮಕದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹರಿಹೈದಿರುವ ಮಲ್ಲಿಕಾರ್ಜುನ ಖರ್ಗೆ, ಮುಂದಿನ ಬೆಳವಣಿಗೆ ಕುರಿತು ಕಾಡು ನೋಡುವುದಾಗಿ ತಿಳಿಸಿದ್ದಾರೆ.

Trending News