ನವದೆಹಲಿ: ರಾಜಸ್ತಾನದ ಅಲ್ವಾರ್ ನಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ವೇಳೆ ಕೆಲವರು ಪಾಕ್ ಪರವಾದ ಘೋಷಣೆಗಳನ್ನು ಕೂಗಿರುವ ವಿಚಾರವಾಗಿ ಜೀ ನ್ಯೂಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ವಿಚಾರವಾಗಿ ಜೀ ನ್ಯೂಸ್ ಆಕ್ಷೇಪ ವ್ಯಕ್ತಪಡಿಸಿತ್ತು.
ಆದರೆ ಈ ವಿಷಯವನ್ನು ಕಾಂಗ್ರೆಸ್ ಅಲ್ಲಗಳೆದು ಜೀ ನ್ಯೂಸ್ ತಿರುಚಿದ ವೀಡಿಯೋವೊಂದನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಸಿಧು ಇನ್ನು ಮುಂದುವರೆದು ಜೀ ನ್ಯೂಸ್ ವಿರುದ್ದ ಮಾನಹಾನಿ ಕೇಸ್ ದಾಖಲು ಮಾಡುವ ಬೆದರಿಕೆಯನ್ನು ಒಡ್ಡಿದ್ದರು.ಈ ವಿಚಾರವಾಗಿ ಮಾಧ್ಯಮಗಳಲ್ಲಿ ಜೀ ನ್ಯೂಸ್ ವಿರುದ್ದ ಕೆಲವು ಕಾಂಗ್ರೆಸ್ ನಾಯಕರು ಮತ್ತು ಕೆಲವು ಮಿಡಿಯಾ ಹೌಸ್ ಗಳು ಮತ್ತು ಪತ್ರಕರ್ತರನ್ನೋಳಗೊಂಡು ಅಭಿಯಾನ ಪ್ರಾರಂಭಿಸಿದ್ದರು.ಇನ್ನು ಕಾಂಗ್ರೆಸ್ ನಾಯಕರು ಘೋಷಣೆಗಳನ್ನು ಕೂಗಿದ ಭಾಗವನ್ನು ಹೊರತುಪಡಿಸಿದ ವಿಡಿಯೋಗಳನ್ನೂ ಟ್ವೀಟ್ ಮಾಡಿದ್ದರು.
ಇದಾದ ನಂತರ ಜೀ ನ್ಯೂಸ್ ತಂಡವು ಸಿಧು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಾಮಾನ್ಯರು ಮತ್ತು ಪತ್ರಕರ್ತರನ್ನು ಸಂಪರ್ಕಿಸಿ ಅಲ್ಲಿ ರಿಕಾರ್ಡ್ ಮಾಡಿದ್ದ ಒಟ್ಟು ಏಳು ವಿಡಿಯೋಗಳನ್ನು ಕಲೆ ಹಾಕಿತ್ತು.ಅಲ್ಲಿ ಒಬ್ಬ ಸ್ಥಳೀಯ ಪತ್ರಕರ್ತ ಸಿಧು ರ್ರ್ಯಾಲಿಯೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದನು.
ಈ ವಿಚಾರವಾಗಿ ಜೀ ನ್ಯೂಸ್ ನ ಮುಖ್ಯ ಸಂಪಾದಕ ಸುಧೀರ್ ಚೌಧರಿ ತಮ್ಮ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ವಾಗ್ದಾಳಿ ನಡೆಸಿದರು. ಸುರ್ಜೆವಾಲಾ ಫೇಕ್ ವಿಡಿಯೋ ವೊಂದನ್ನು ಪ್ರಸಾರ ಮಾಡಲಾಗಿದೆ. ರ್ಯಾಲಿಯಲ್ಲಿ ಸತ್ ಶ್ರೀ ಅಕಲ್ ಎನ್ನುವ ಘೋಷಣೆಯನ್ನು ಕೂಗಲಾಗಿದೆ ಎಂದು ಹೇಳಿದ್ದರು.ಆದರೆ ಈ ವಾದವನ್ನು ಅಲ್ಲಗಳೆದ ಸುಧೀರ್ ಚೌಧರಿ ಸುರ್ಜೆವಾಲಾರನ್ನು ಉಲ್ಲೇಖಿಸುತ್ತಾ ಫೇಕ್ ನ್ಯೂಸ್ ನ ಟ್ರ್ಯಾಪ್ ನಲ್ಲಿ ತಾವು ಬಂದಿದ್ದಿರಿ ಆದ್ದರಿಂದ ಈ ಒರಿಜಿನಲ್ ವಿಡಿಯೋವನ್ನು ಒಮ್ಮೆ ನೋಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
Dear @rssurjewala Ji I have always respected you as a politician & a person.Never thought someone as seasoned as you will fall into the trap of fake news.Sharing the original video.Take your time to watch it & feel free to retract your comments.@sherryontopp pic.twitter.com/z4oUI2XkcY
— Sudhir Chaudhary (@sudhirchaudhary) December 4, 2018
ಅಷ್ಟಕ್ಕೂ ಜೀ ನ್ಯೂ ಮೇಲೆ ಬರುತ್ತಿರುವ ಆರೋಪ ಇದೇ ಮೊದಲೇನಲ್ಲ ಈ ಹಿಂದೆ 2016 ರಲ್ಲಿ ಜೆಎನ್ಯು ನಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ವಿಚಾರವಾಗಿ ಜೀ ನ್ಯೂಸ್ ಹಲವಾರು ವಿಡೀಯೋಗಳನ್ನೂ ಪ್ರಸಾರ ಮಾಡಿತ್ತು ಮತ್ತು ಫಾರೆನ್ಸಿಕ್ ಪರೀಕ್ಷೆಯಲ್ಲಿಯೂ ಕೂಡ ಈ ವಿಡಿಯೋ ಒರ್ಜಿನಲ್ ಎನ್ನುವ ವರದಿಯನ್ನು ನೀಡಿತ್ತು.