ನವದೆಹಲಿ: ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ವಿವಿಧ ತಂತ್ರಗಳ ಮೂಲಕ ತಮ್ಮ ವೈಪಲ್ಯವನ್ನು ಮರೆಮಾಚಲು ಯತ್ನಿಸುತ್ತಿವೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.ಅಲ್ಲದೆ ರಾಜಕೀಯ ಲಾಭಕ್ಕಾಗಿ ವಾಜಪೇಯಿಯವರ ಸಾವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
BJP Governments in states and in the Centre are trying to hide their failures by diversionary tactics. They have not fulfilled their election promises. They are trying to use Atal ji's death for political gains: Mayawati pic.twitter.com/Y7NBSseR4o
— ANI UP (@ANINewsUP) September 16, 2018
ಇದೇ ಸಂದರ್ಭದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು " ನಮಗೆ ಯಾವುದೇ ಚುನಾವಣೆ ಇರಲಿ ನಮಗೆ ಬೇಕಾದಷ್ಟು ಸೀಟುಗಳು ಸಿಕ್ಕರೆ ಮಾತ್ರ ನಾವು ಮೈತ್ರಿಕೂಟಕ್ಕೆ ಒಪ್ಪಿಕೊಳ್ಳುತ್ತೇವೆ ಇಲ್ಲದೆ ಹೋದರೆ ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ತಿಳಿಸಿದರು.
We will agree to alliance anywhere & in any election only when we get a respectable share of seats, otherwise BSP will contest alone: Former UP CM Mayawati pic.twitter.com/iiFuuvde6h
— ANI UP (@ANINewsUP) September 16, 2018
ಭೀಮ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ "ಚಿಕ್ಕಮ್ಮ" ಎಂದು ಕರೆದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಯಾವತಿ " ನನಗೆ ಅಂತಹ ಯಾವುದೇ ವ್ಯಕ್ತಿಗಳೊಂದಿಗೆ ಸಂಬಂಧವಿಲ್ಲ,ನಾನು ಜನಸಾಮಾನ್ಯರಾದ ದಲಿತರು,ಆದಿವಾಸಿಗಳು ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟವಳು" ಎಂದು ತಿಳಿಸಿದರು.