ಎಚ್ಚರ..! ಲಗ್ಗೆ ಇಟ್ಟಿದೆ ಕರೋನಾದ ಮೂರನೇ ಅಲೆ, ದೆಹಲಿ-ಮುಂಬೈನಲ್ಲಿ ಸಮುದಾಯ ಪ್ರಸರಣ ಪ್ರಾರಂಭ

ಕರೋನವೈರಸ್ 'ಓಮಿಕ್ರಾನ್' ಪ್ರಕರಣಗಳು ಸಮುದಾಯ ಮಟ್ಟದಲ್ಲಿನಿಧಾನವಾಗಿ ಹರಡುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾದ ಮಾದರಿಗಳಲ್ಲಿ 46 ಪ್ರತಿಶತದಷ್ಟು ಓಮಿಕ್ರಾನ್ ಎಂದು ದೃಢಪಟ್ಟಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗುರುವಾರ ಹೇಳಿದ್ದಾರೆ. 

Written by - Ranjitha R K | Last Updated : Dec 30, 2021, 03:22 PM IST
  • ದೆಹಲಿಯಲ್ಲಿ ಓಮಿಕ್ರಾನ್ ಸಮುದಾಯ ಪ್ರಸರಣ
  • ಪ್ರಯಾಣ ಹಿಸ್ಟರಿ ಇಲ್ಲದವರಿಗೂ ತಗುಲಿತು ಓಮಿಕ್ರಾನ್ ಸೋಂಕು
  • ಮುಂಬೈನಲ್ಲಿ 80% ಹೊಸ ಕರೋನಾ ಪ್ರಕರಣಗಳಲ್ಲಿ ಓಮಿಕ್ರಾನ್
ಎಚ್ಚರ..! ಲಗ್ಗೆ ಇಟ್ಟಿದೆ ಕರೋನಾದ ಮೂರನೇ ಅಲೆ, ದೆಹಲಿ-ಮುಂಬೈನಲ್ಲಿ ಸಮುದಾಯ ಪ್ರಸರಣ ಪ್ರಾರಂಭ  title=
ದೆಹಲಿಯಲ್ಲಿ ಓಮಿಕ್ರಾನ್ ಸಮುದಾಯ ಪ್ರಸರಣ (file photo)

ನವದೆಹಲಿ : ಭಾರತದಲ್ಲಿ ಕೊರೊನಾವೈರಸ್‌ನ (Coronavirus) ಹೆಚ್ಚುತ್ತಿದೆ. ಕೋವಿಡ್ -19 ಒಮಿಕ್ರಾನ್ ಹೊಸ ರೂಪಾಂತರದ  (Covid-19 Omicron Variant) ಆತಂಕ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ, ದೇಶಾದ್ಯಂತ 13154 ಹೊಸ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ  ಕೋವಿಡ್ -19 ರ ಮೂರನೇ ಅಲೆಯ (Covid-19 3rd Wave) ಅಪಾಯವೂ ಹೆಚ್ಚಾಗಲು ಪ್ರಾರಂಭಿಸಿದೆ. ಈ ಮಧ್ಯೆ, ದೆಹಲಿ, ಮುಂಬೈ ಮತ್ತು ಬಿಹಾರದಲ್ಲಿ ಕರೋನದ ಮೂರನೇ ಅಲೆ ಪ್ರಾರಂಭವಾಗಿದೆ. 

ದೆಹಲಿಯಲ್ಲಿ ಓಮಿಕ್ರಾನ್ ಸಮುದಾಯ ಪ್ರಸರಣ :
ಕರೋನವೈರಸ್ 'ಓಮಿಕ್ರಾನ್' ಪ್ರಕರಣಗಳು ಸಮುದಾಯ ಮಟ್ಟದಲ್ಲಿ (Omicron Community Transmission) ನಿಧಾನವಾಗಿ ಹರಡುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾದ ಮಾದರಿಗಳಲ್ಲಿ 46 ಪ್ರತಿಶತದಷ್ಟು ಓಮಿಕ್ರಾನ್ ಎಂದು ದೃಢಪಟ್ಟಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಗುರುವಾರ ಹೇಳಿದ್ದಾರೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಮತ್ತು ಹೆಚ್ಚುವರಿ ನಿರ್ಬಂಧಗಳನ್ನು ಹೇರುವ ಬಗ್ಗೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : PM Kisan : ಹೊಸ ವರ್ಷದಲ್ಲಿ 10 ಕೋಟಿ ರೈತರಿಗೆ ಭರ್ಜರಿ ಗಿಫ್ಟ್ : 20 ಸಾವಿರ ಕೋಟಿ ಖಾತೆಗೆ ಜಮಾ!

'ಕೋವಿಡ್ -19 ರ 200 ರೋಗಿಗಳನ್ನು ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಜಿನೋಮ್ ಸೀಕ್ವೆನ್ಸಿಂಗ್‌ನ ಇತ್ತೀಚಿನ ವರದಿಯಲ್ಲಿ, 'ಓಮಿಕ್ರಾನ್' 46 ಪ್ರತಿಶತದಷ್ಟು ಮಾದರಿಗಳಲ್ಲಿ ದೃಢೀಕರಿಸಲ್ಪಟ್ಟಿದೆ ಎಂದು ಸತ್ಯೇಂದ್ರ ಜೈನ್ (Satyendar Jain) ಹೇಳಿದ್ದಾರೆ. ಈ ಪೈಕಿ ಎಲ್ಲಿಯೂ ಪ್ರಯಾಣಿಸದ ಜನರಿಗೂ ಸೋಂಕು ತಗಲಿರುವುದು ಕಂಡು ಬಂದಿದೆ. ಅಂದರೆ ಈಗ ದೆಹಲಿಯೊಳಗೆ ಓಮಿಕ್ರಾನ್ ರೂಪಾಂತರ ಹೆಜೆ ಇಟ್ಟಾಗಿದೆ ಎಂದವರು ಹೇಳಿದ್ದಾರೆ. ಅಲ್ಲದೆ, ಅದು ನಿಧಾನವಾಗಿ ಸಮುದಾಯದ ಮಟ್ಟದಲ್ಲಿ (Community Transmission) ಹರಡುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. 

ಮುಂಬೈನಲ್ಲೂ ಮೂರನೇ ಅಲೆಯ ಆತಂಕ :
ದೆಹಲಿಯ ಜೊತೆಗೆ ಮುಂಬೈನಲ್ಲಿಯೂ ಕೊರೊನಾ ವೈರಸ್‌ನ (Coronavirus) ಮೂರನೇ ಅಲೆ ಕದ ತಟ್ಟಿದೆ. ಮಾಧ್ಯಮದೊಂದಿಗೆ  ಮಾತನಾಡಿದ ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆಯ ಸದಸ್ಯ ಡಾ. ಶಶಾಂಕ್ ಜೋಶಿ, ಮುಂಬೈನಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಮುಂಬೈನಲ್ಲಿ ಕೋವಿಡ್ -19 ರ ಮೂರನೇ ಅಲೆ ಪ್ರಾರಂಭವಾಗಿದ್ದು, ಆತಂಕಕಾರಿ ವಿಷಯವಾಗಿದ್ದರೂ, ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪತ್ತೆಯಾಗಿರುವ ಹೊಸ ಪ್ರಕರಣಗಳಲ್ಲಿ  ಸೌಮ್ಯ ಲಕ್ಷಣಗಳು ಕಂಡು ಬಂದಿವೆ ಎಂದವರು ಹೇಳಿದ್ದಾರೆ. 

ಇದನ್ನೂ ಓದಿ : Cooking Oil : 2022 ರಲ್ಲಿ ಭಾರಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ ಬೆಲೆ!

ಕರೋನಾದ 80% ಹೊಸ ಪ್ರಕರಣಗಳಲ್ಲಿ ಓಮಿಕ್ರಾನ್
ಬುಧವಾರ, ಮುಂಬೈನಲ್ಲಿ 2510 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ರೇಟ್  4 ಪ್ರತಿಶತಕ್ಕೆ ತಲುಪಿದೆ. ಹೊಸ ಪ್ರಕರಣಗಳ ಹೆಚ್ಚಳಕ್ಕೆ ಓಮಿಕ್ರಾನ್ ಕಾರಣವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ, 80 ಪ್ರತಿಶತ ಹೊಸ ಪ್ರಕರಣಗಳಲ್ಲಿ ಓಮಿಕ್ರಾನ್ (Omicron) ದೃಢೀಕರಿಸಲ್ಪಟ್ಟಿದೆ ಎಂದು ಡಾ. ಶಶಾಂಕ್ ಜೋಶಿ ಹೇಳಿದ್ದಾರೆ. 

ಬಿಹಾರದಲ್ಲೂ ಮೂರನೇ ಅಲೆ ಎಂದ ಸಿಎಂ ನಿತೀಶ್ : 
ದೆಹಲಿ ಮತ್ತು ಮುಂಬೈ ಜೊತೆಗೆ, ಬಿಹಾರದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿವೆ. ನಾಲ್ಕು ದಿನಗಳಲ್ಲಿ COVID -19 ಸಕ್ರಿಯ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಮಧ್ಯೆ, ಬಿಹಾರಕ್ಕೆ ಕರೋನದ ಮೂರನೇ ಅಲೆ ಬಂದಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News