"ಆರರಿಂದ ಎಂಟು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಸಂಭವಿಸಬಹುದು"

COVID-19 ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಆರರಿಂದ ಎಂಟು ವಾರಗಳಲ್ಲಿ COVID-19 ರ ಮೂರನೇ ಅಲೆ ಸಂಭವಿಸಬಹುದು ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಸೋಮವಾರ ಎಚ್ಚರಿಸಿದ್ದಾರೆ.

Written by - Zee Kannada News Desk | Last Updated : Jul 19, 2021, 11:29 PM IST
  • COVID-19 ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಆರರಿಂದ ಎಂಟು ವಾರಗಳಲ್ಲಿ COVID-19 ರ ಮೂರನೇ ಅಲೆ ಸಂಭವಿಸಬಹುದು ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಸೋಮವಾರ ಎಚ್ಚರಿಸಿದ್ದಾರೆ.
  • ಈ ಹಿನ್ನಲೆಯಲ್ಲಿ ಈಗ ಕೊರೋನಾದ ಸರಪಳಿಯನ್ನು ಮುರಿಯಲು ಎಲ್ಲರಿಗೂ ಲಸಿಕೆ ಹಾಕುವುದು ಅನಿವಾರ್ಯವಾಗಿದೆ. ಆದ್ದರಿಂದ, ಎಲ್ಲಾ ರಾಜ್ಯ ಮತ್ತು ಯುಟಿ ಸರ್ಕಾರಗಳು ಚುಚ್ಚುಮದ್ದಿನ ವೇಗವನ್ನು ಹೆಚ್ಚಿಸಬೇಕು, ಗರಿಷ್ಠ ಸಂಖ್ಯೆಯ ಜನರನ್ನು ತ್ವರಿತವಾಗಿ ಒಳಗೊಳ್ಳಬೇಕು ಎಂದು ರಣದೀಪ್ ಗುಲೆರಿಯಾ ಹೇಳಿದ್ದಾರೆ.
"ಆರರಿಂದ ಎಂಟು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಸಂಭವಿಸಬಹುದು" title=
ಸಾಂದರ್ಭಿಕ ಚಿತ್ರ

ನವದೆಹಲಿ: COVID-19 ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಆರರಿಂದ ಎಂಟು ವಾರಗಳಲ್ಲಿ COVID-19 ರ ಮೂರನೇ ಅಲೆ ಸಂಭವಿಸಬಹುದು ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಸೋಮವಾರ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Coronavirus: ಈ ರಾಜ್ಯದಲ್ಲಿ ನಿಯಂತ್ರಣ ಮೀರಿದ ಕೊರೊನಾ, ಮಾರ್ಚ್ 28 ರಿಂದ Night Curfew ಘೋಷಣೆ

'ಗಣನೀಯ ಸಂಖ್ಯೆಯ ಜನಸಂಖ್ಯೆಗೆ ಲಸಿಕೆ ಹಾಕುವವರೆಗೆ,ಕೊರೋನಾದ ಸೂಕ್ತವಾದ ನಡವಳಿಕೆಯನ್ನು ಆಕ್ರಮಣಕಾರಿಯಾಗಿ ಅನುಸರಿಸಬೇಕಾಗಿದೆ"ಎಂದು ಗುಲೇರಿಯಾ ಹೇಳಿದರು.ಒಂದು ವೇಳೆ ಸೂಕ್ತ ಕೊರೊನಾ ನಡವಳಿಕೆಯನ್ನು ಅನುಸರಿಸದಿದ್ದಲ್ಲಿ ಮೂರನೇ ಅಲೆಯು ಆರರಿಂದ ಎಂಟು ವಾರಗಳಲ್ಲಿ ಬರಲಿದೆ ಎಂದು ಹೇಳಿದರು.

'ವ್ಯಾಕ್ಸಿನೇಷನ್ ಎಲ್ಲೆಡೆ ಪ್ರಾರಂಭವಾಗುವವರೆಗೂ ಮತ್ತೊಂದು ದೊಡ್ಡ ಅಲೆಯನ್ನು ತಡೆಗಟ್ಟಲು ನಾವು ಆಕ್ರಮಣಕಾರಿಯಾಗಿ ಕೆಲಸ ಮಾಡಬೇಕಾಗಿದೆ'ಎಂದು ಹೇಳಿದರು.ಈ ಹಿಂದೆ ಭಾರತದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು COVID-19 ರ ಮೂರನೇ ಅಲೆ ಅನಿವಾರ್ಯ ಮತ್ತು ಸೆಪ್ಟೆಂಬರ್-ಅಕ್ಟೋಬರ್‌ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಸೂಚಿಸಿದ್ದರು.

ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡನೇ ಕೊರೊನಾ ಅಲೆಯಿಂದಾಗಿ ಭಾರತವು ತತ್ತರಿಸಿತು, ಹೆಚ್ಚಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಈ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಾಕ್ ಡೌನ್ ಗಳನ್ನು ವಿಧಿಸಿದ್ದವು.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿನ ಕುಸಿತದೊಂದಿಗೆ, ಅನೇಕ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿವೆ ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ಸರಾಗಗೊಳಿಸುವಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ.

ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ

ಈ ಹಿನ್ನಲೆಯಲ್ಲಿ ಈಗ ಕೊರೋನಾದ ಸರಪಳಿಯನ್ನು ಮುರಿಯಲು ಎಲ್ಲರಿಗೂ ಲಸಿಕೆ ಹಾಕುವುದು ಅನಿವಾರ್ಯವಾಗಿದೆ. ಆದ್ದರಿಂದ, ಎಲ್ಲಾ ರಾಜ್ಯ ಮತ್ತು ಯುಟಿ ಸರ್ಕಾರಗಳು ಚುಚ್ಚುಮದ್ದಿನ ವೇಗವನ್ನು ಹೆಚ್ಚಿಸಬೇಕು, ಗರಿಷ್ಠ ಸಂಖ್ಯೆಯ ಜನರನ್ನು ತ್ವರಿತವಾಗಿ ಒಳಗೊಳ್ಳಬೇಕು ಎಂದು ರಣದೀಪ್ ಗುಲೆರಿಯಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News