ಈ ರಾಜ್ಯಗಳಲ್ಲಿ ಆರ್‌ಎಸ್‌ಎಸ್‌ ಕಚೇರಿ ಧ್ವಂಸಗೊಳಿಸುವ ಬೆದರಿಕೆ: ದೂರು ದಾಖಲು

ಅಲ್ ಅನ್ಸಾರಿ ಇಮಾಮ್ ರಾಜಿ ಉನ್ ಮೆಹಂದಿ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ರಚಿಸುವ ಮೂಲಕ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬೆದರಿಕೆ ಹಾಕಲಾಗಿದೆ.  

Written by - Bhavishya Shetty | Last Updated : Jun 7, 2022, 08:35 AM IST
  • ರಾಷ್ಟ್ರೀಯ ಸ್ವಯಂಸೇವಕ ಸಂಘ ಕಚೇರಿಗೆ ಬಾಂಬ್‌ ಬೆದರಿಕೆ
  • ಲಕ್ನೋ ಮತ್ತು ಕರ್ನಾಟಕ 6 ಕಚೇರಿಗೆ ಬೆದರಿಕೆ
  • ವಾಟ್ಸಾಪ್ ಗ್ರೂಪ್ ರಚಿಸಿ ಚರ್ಚಿಸಿದ ಕಿಡಿಗೇಡಿಗಳು
ಈ ರಾಜ್ಯಗಳಲ್ಲಿ ಆರ್‌ಎಸ್‌ಎಸ್‌ ಕಚೇರಿ ಧ್ವಂಸಗೊಳಿಸುವ ಬೆದರಿಕೆ: ದೂರು ದಾಖಲು title=
RSS

ಉತ್ತರಪ್ರದೇಶ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆರು ಕಚೇರಿಗಳಿಗೆ ಬಾಂಬ್ ಹಾಕುವ ಬೆದರಿಕೆ ಬಂದಿದ್ದು, ಈ ಕುರಿತು ಲಕ್ನೋದ ಮಡಿಯಂವ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಾಟ್ಸಾಪ್ ಮೂಲಕ ಬಂದ ಬೆದರಿಕೆಯಲ್ಲಿ ಲಕ್ನೋದ 2 ಕಚೇರಿಗಳು ಮತ್ತು ಕರ್ನಾಟಕದ 4 ಕಚೇರಿಗಳನ್ನು ಸ್ಫೋಟಿಸುವುದಾಗಿ ಹೇಳಲಾಗಿದೆ. 

ಅಲ್ ಅನ್ಸಾರಿ ಇಮಾಮ್ ರಾಜಿ ಉನ್ ಮೆಹಂದಿ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ರಚಿಸುವ ಮೂಲಕ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬೆದರಿಕೆ ಹಾಕಲಾಗಿದೆ.  

ಇದನ್ನೂ ಓದಿ: Ration Card Update: ಇನ್ಮುಂದೆ ಪಡಿತರ ಅಂಗಡಿ ಮಾಲೀಕರು ಪಡಿತರ ತೂಕದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಬೆದರಿಕೆ ಬಂದಿದೆ. ಮಾಹಿತಿಯ ಪ್ರಕಾರ, ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಆಹ್ವಾನ  ಲಿಂಕ್(invite link) ಮೂಲಕ ಅಲ್ ಇಮಾಮ್ ಅನ್ಸರ್ ರಾಜಿ ಉನ್ ಮೆಹಂದಿ ಎಂಬ ಗುಂಪಿಗೆ ಸೇರಿದ್ದಾರೆ. ಈ ವಾಟ್ಸಾಪ್ ಗ್ರೂಪ್‌ನ ಆಹ್ವಾನ ಲಿಂಕ್ ಹಲವು ಗ್ರೂಪ್‌ಗಳಲ್ಲಿ ಶೇರ್ ಆಗಿದ್ದು, ಆ ಕಾರಣದಿಂದ ಆರ್‌ಎಸ್‌ಎಸ್ ಕಾರ್ಯಕರ್ತನೂ ಲಿಂಕ್‌ ತೆರೆದು ಗ್ರೂಪ್‌ಗೆ ಸೇರಿಕೊಂಡಿದ್ದಾರೆ. 

ವಾಟ್ಸಾಪ್ ಗುಂಪಿನಲ್ಲಿ ಬಾಂಬ್‌ ಹಾಕುವ ವಿಚಾರ ಚರ್ಚಿಸುತ್ತಿರುವುದನ್ನು ಗಮನಿಸಿದ ಕಾರ್ಯಕರ್ತ ಔದ್ ಪ್ರಾಂತ್ಯದ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ವಿಷಯ ಅರಿತುಕೊಂಡ ಅವಧ್ ಪ್ರಾಂತ್ಯದ ಅಧಿಕಾರಿ ಆರ್‌ಎಸ್‌ಎಸ್‌ನ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ಇಡೀ ವಿಷಯದ ಮಾಹಿತಿಯನ್ನು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Health Tips: ದೇಹದ ಆ ಭಾಗಕ್ಕೆ ಈ ಎಣ್ಣೆಯನ್ನು ಸವರಿದರೆ ಹಲವು ಅದ್ಭುತ ಲಾಭಗಳು ಸಿಗುತ್ತವೆ

ಮಾಹಿತಿ ಪಡೆದ ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಧ್ ಪ್ರಾಂತ್ಯದ ಘೋಷ್ ಮುಖ್ಯಸ್ಥ ಪ್ರೊಫೆಸರ್ ನೀಲಕಂಠ ತಿವಾರಿ ಅವರ ದೂರಿನ ಮೇರೆಗೆ ಲಕ್ನೋದ ಮಡಿಯನ್ವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸೆಕ್ಷನ್ 507 ಮತ್ತು ಐಟಿ ಆಕ್ಟ್ 66 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಲಕ್ನೋದ ಮಡಿಯನ್ವ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News