ಹಿಮಾಚಲ ಪ್ರದೇಶ: ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಅಧಿಕಾರಿಗಳ ಸಾವು

ಹಿಮಾಚಲ ಪ್ರದೇಶದ ಶಿಮ್ಲಾ, ಹಮೀರ್ಪುರ್, ಕಂಗರ್ ಮತ್ತು ಮಂಡಿ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

Last Updated : May 19, 2019, 10:20 AM IST
ಹಿಮಾಚಲ ಪ್ರದೇಶ: ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಅಧಿಕಾರಿಗಳ ಸಾವು title=
Representative image

ಶಿಮ್ಲಾ: ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಸರ್ಕಾರಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಬುಡಕಟ್ಟು ಕಿನ್ನೌರ್ ಜಿಲ್ಲೆಯ ಸಪ್ರಿ ಎಂಬ ಸರ್ಕಾರಿ ಹಿರಿಯ ಶಾಲೆಯಲ್ಲಿ ಪಿ.ಜಿ.ಟಿ.ಯ ಅಧ್ಯಕ್ಷರಾಗಿದ್ದ ವನೀತ್ ಕುಮಾರ್, ಸೋಲನ್ ಜಿಲ್ಲೆಯ ಆರ್ಕಿ ತೆಹ್ಸಿಲ್ನ ಚಂದೇರಾ ಗ್ರಾಮದ ನಿವಾಸಿಯಾಗಿದ್ದ ಜಾವಾನ್ ದೇವಿ ಸಿಂಗ್ ಮತ್ತು ಕುಲ್ಲು ಜಿಲ್ಲೆಯ ಮನಾಲಿಯ ಸಜ್ಲಾ ಗ್ರಾಮದ ನಿವಾಸಿ ಪೋಲಿಸ್ ಅಧಿಕಾರಿ ಲೋಲ್ ರಾಮ್ ಎಂದು ಗುರುತಿಸಲಾಗಿದೆ.

ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಸಿಬ್ಬಂದಿಯ ದುರದೃಷ್ಟಕರ ಮರಣದ ಬಗ್ಗೆ ದುಃಖ ವ್ಯಕ್ತಪಡಿಸಿದ ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ದಲೀಪ್ ನೇಗಿ, ಮೃತರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಗೆ ಅಂತಿಮ ಮತ್ತು ಏಳನೇ ಹಂತದ ಮತದಾನ ಇಂದು ನದೆಯುತ್ತಿದ್ದು, ಹಿಮಾಚಲ ಪ್ರದೇಶದ ಶಿಮ್ಲಾ (ಎಸ್ಸಿ), ಹಮೀರ್ಪುರ್, ಕಂಗರ್ ಮತ್ತು ಮಂಡಿ ನಾಲ್ಕು ಸ್ಥಾನಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ. 
 

Trending News