ಪೊಲೀಸ್ ಠಾಣೆಯೊಳಗೆ ಲೇಡಿ ಕಾನ್ಸ್ಟೇಬಲ್ ಡ್ಯಾನ್ಸ್ ಮಾಡಿರೋ ಟಿಕ್ ಟಾಕ್ ವೀಡಿಯೋ ವೈರಲ್! ತನಿಖೆಗೆ ಆದೇಶ

ವೀಡಿಯೊದಲ್ಲಿ, ಮಹಿಳಾ ಪೇದೆಯೊಬ್ಬರು ಸಿವಿಲ್ ಬಟ್ಟೆಗಳನ್ನು ಧರಿಸಿ ಲಾಕಪ್ ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.

Last Updated : Jul 24, 2019, 05:39 PM IST
ಪೊಲೀಸ್ ಠಾಣೆಯೊಳಗೆ ಲೇಡಿ ಕಾನ್ಸ್ಟೇಬಲ್ ಡ್ಯಾನ್ಸ್ ಮಾಡಿರೋ ಟಿಕ್ ಟಾಕ್ ವೀಡಿಯೋ ವೈರಲ್! ತನಿಖೆಗೆ ಆದೇಶ title=

ಅಹಮದಾಬಾದ್: ಪೊಲೀಸ್ ಠಾಣೆಯೊಳಗೆ ಲೇಡಿ ಕಾಪ್ ನರ್ತಿಸುತ್ತಿರುವ ವಿಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಆ್ಯಪ್ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದು, ಗುಜರಾತ್‌ನಲ್ಲಿ ಪೊಲೀಸರನ್ನು ಭಾರೀ ಮುಜುಗರಕ್ಕೀಡುಮಾಡಿದೆ.

ವೀಡಿಯೊದಲ್ಲಿ, ಮಹಿಳಾ ಪೇದೆಯೊಬ್ಬರು ಸಿವಿಲ್ ಬಟ್ಟೆಗಳನ್ನು ಧರಿಸಿ ಲಾಕಪ್ ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಹಲವರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಆದರೆ, ಪೊಲೀಸ್ ಠಾಣೆಯ ಒಳಗೆ ಯಾವ ರೀತಿಯ ಕಾನೂನು ಮತ್ತು ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬ ಪ್ರಶ್ನೆಗಳು ಮೂಡಿವೆ. ಹೀಗಾಗಿ ವಿಡಿಯೋದಲ್ಲಿ ಡ್ಯಾನ್ಸ್ ಮಾಡಿರುವ ಮಹಿಳಾ ಪೇದೆಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಸದ್ಯ ಗುಜರಾತ್ ಡಿವೈಎಸ್ಪಿ ಮಂಜಿತಾ ವಂಜಾರ ಅವರು ವಿದಿಯೋದಲ್ಲಿರುವ ಮಹಿಳಾ ಪೇದೆಯನ್ನು ಪತ್ತೆ ಹಚ್ಚಲು ತೀವ್ರ ತನಿಖೆಗೆ ಆದೇಶಿಸಿದ್ದಾರೆ.

Trending News