West Bengal Election 2021: ಮೇ 2ರಂದು ಬಂಗಾಳದಲ್ಲಿ 'ದೀದಿ ಗಯೀ, ಬಿಜೆಪಿ ಆಯೀ'

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

Last Updated : Feb 28, 2021, 12:44 PM IST
  • ಮುಂಬರುವ ಮೇ. 2ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತದ ಪರ್ವ ಆರಂಭ
  • ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
  • ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿರುವ ಕಾಲಿಘಾಟ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್
West Bengal Election 2021: ಮೇ 2ರಂದು ಬಂಗಾಳದಲ್ಲಿ 'ದೀದಿ ಗಯೀ, ಬಿಜೆಪಿ ಆಯೀ' title=

ಕೋಲ್ಕತ್ತಾ: ಮುಂಬರುವ ಮೇ. 2ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತದ ಪರ್ವ ಆರಂಭವಾಗಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭವಿಷ್ಯ ನುಡಿದಿದ್ದಾರೆ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿರುವ ಕಾಲಿಘಾಟ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan), ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Jobs : ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ, ವರ್ಷಕ್ಕೆ ಸಿಟಿಸಿ 6.1 ಲಕ್ಷ

ಪಶ್ಚಿಮ ಬಂಗಾಳದ ಭ್ರಷ್ಟ ಟಿಎಂಸಿ(TMC Party) ಸರ್ಕಾರ ರಾಜ್ಯವನ್ನು ಲೂಟಿ ಹೊಡೆದಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರ ಟಿಎಂಸಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಚೌಹಾಣ್ ಭರವಸೆ ವ್ಯಕ್ತಪಡಿಸಿದರು.

PSLV-C51/Amazonia-1 Launch: ಬಾಹ್ಯಾಕಾಶದಲ್ಲಿ ಗೀತಾ ಸಂದೇಶದ ಪ್ರತಿಧ್ವನಿ, ಇಂದು ISRO ನಿಂದ PSLV-C51/Amazonia-1 ಉಡಾವಣೆ

ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರಿಚೀಕೆಯಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಮೊದಲು ಎಡರಂಗ ಸರ್ಕಾರ ಹಾಗೂ ಕಾಂಗ್ರೆಸ್(Congress) ಸರ್ಕಾರಗಳು ರಾಜ್ಯವನ್ನು ಸರ್ವನಾಶ ಮಾಡಿದ್ದು, ಟಿಎಂಸಿ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಚೌಹಾಣ್ ಹರಿಹಾಯ್ದರು.

ಗುರುಗ್ರಾಮ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ 20 ನಿವಾಸಿಗಳಿಗೆ ಕೊರೊನಾ!

ಕೇಂದ್ರ ಸರ್ಕಾರದ ರೈತಪರ ಯೋಜನೆಗಳು ಪಶ್ಚಿಮ ಬಂಗಾಳ(West Bengal)ದ ಫಲಾನುಭವಿಗಳನ್ನು ತಲುಪದಂತೆ ಮಮತಾ ಬ್ಯಾನರ್ಜಿ ತಡೆಯೊಡ್ಡಿದ್ದು, ಟಿಎಂಸಿ ಸರ್ಕಾರದಿಂದ ರಾಜ್ಯದ ಎಲ್ಲಾ ವರ್ಗದ ಜನ ರೋಸಿ ಹೋಗಿದ್ದಾರೆ ಎಂದು ಚೌಹಾಣ್ ಹರಿಹಾಯ್ದರು.

ಮಾಸಿಕ ವ್ಯಾಸಾಂಗ ವೇತನ ಫೆಲೋಶೀಪ್‍ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದ ಮತದಾರ ಬಿಜೆಪಿಯತ್ತ ಒಲವು ತೋರಿದ್ದು, ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ(BJP) ಸರ್ಕಾರ ರಚನೆಯಾಗುವುದು ನಿಶ್ಚಿತ ಎಂದು ಚೌಹಾಣ್ ನುಡಿದರು.

ಮುಂಬೈನಲ್ಲಿ YouTube Pranks ಮಾಡುತ್ತಿದ್ದ ವ್ಯಕ್ತಿ ಬಂಧನ

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಲಿದೆ ಎಂದು ಮಧ್ಯಪ್ರದೇಶ(Madhya Pradesh) ಮುಖ್ಯಮಂತ್ರಿ ಹೇಳಿದರು.

ಈ ರಾಜ್ಯದಲ್ಲಿ ಸತತ ನಾಲ್ಕನೇ ದಿನ 8,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲು

ಮೇ.2ರ ವಿಧಾನಸಭೆ ಚುನಾವಣೆ(Assembly Election 2021) ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ 'ದೀದಿ ಗಯೀ, ಬಿಜೆಪಿ ಆಯೀ'(ಮಮತಾ ಮನೆಗೆ, ಬಿಜೆಪಿ ಅಧಿಕಾರಕ್ಕೆ) ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಭವಿಷ್ಯ ನುಡಿದು ಗಮನ ಸೆಳೆದರು.

Covid Vaccine: ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ ಕೊರೋನಾ ಲಸಿಕೆಬೆಲೆ ₹ 250 ಮಾತ್ರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News