ಇಂದು ಸೋಶಿಯಲ್ ಮಿಡಿಯಾ ಪ್ರತಿನಿಧಿಗಳೊಂದಿಗೆ ಚುನಾವಣಾ ಆಯೋಗದ ಸಭೆ

2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ವಿಚಾರವಾಗಿ ಚುನಾವಣಾ ಆಯೋಗವು ಮಂಗಳವಾರದಂದು ಸೋಶಿಯಲ್ ಮೀಡಿಯಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದೆ ಎನ್ನಲಾಗಿದೆ.

Last Updated : Mar 19, 2019, 02:19 PM IST
ಇಂದು ಸೋಶಿಯಲ್ ಮಿಡಿಯಾ ಪ್ರತಿನಿಧಿಗಳೊಂದಿಗೆ ಚುನಾವಣಾ ಆಯೋಗದ ಸಭೆ  title=

ನವದೆಹಲಿ: 2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ವಿಚಾರವಾಗಿ ಚುನಾವಣಾ ಆಯೋಗವು ಮಂಗಳವಾರದಂದು ಸೋಶಿಯಲ್ ಮೀಡಿಯಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದೆ ಎನ್ನಲಾಗಿದೆ.

ಸುದ್ದಿ ಮೂಲಗಳ ಪ್ರಕಾರ ಇಂದಿನ ಸಭೆಯಲ್ಲಿ ಫೇಸ್ ಬುಕ್, ವಾಟ್ಸಪ್, ಟ್ವಿಟ್ಟರ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.ಇದುವರೆಗೆ ಸೋಶಿಯಲ್ ಮೀಡಿಯಾ ಚುನಾವಣಾ ತಯಾರಿ ವಿಚಾರವಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.

ಇತ್ತೀಚಿಗೆ ಬಾಂಬೆ ಹೈಕೋರ್ಟ್ ರಾಜಕೀಯ ಜಾಹಿರಾತುಗಳ ಕುರಿತು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಲವಾರು ನಿಷೇಧಾಜ್ಞೆಗಳನ್ನು ಜಾರಿ ಮಾಡಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ಸಭೆಯನ್ನು ಆಯೋಜಿಸಿದೆ. 

ಮಾರ್ಚ್ 10 ರಂದು ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.ಈ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗ ಸೋಶಿಯಲ್ ಮಿಡಿಯಾ ವೇದಿಕೆಗಳಲ್ಲಿಯೂ ರಾಜಕೀಯ ಕುರಿತ ಜಾಹಿರಾತುಗಳ ಮೇಲೆ ನಿಗಾವಹಿಸಿದೆ. 

 

Trending News