ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕಗಳನ್ನು ಇಂದು ಮಧ್ಯಾಹ್ನ 1 ಘಂಟೆಗೆ ಘೋಷಿಸಬಹುದು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಗುಜರಾತ್ ಚುನಾವಣೆಗಳ ವೇಳಾಪಟ್ಟಿಯನ್ನು ವಿಳಂಬಗೊಳಿಸುವುದರ ಮೂಲಕ ಚುನಾವಣಾ ಆಯೋಗವು ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ನೀತಿ ಸಂಹಿತೆಗೆ ಮುನ್ನ ಸಮಯವನ್ನು ಕೊಡುತ್ತದೆ ಎಂದು ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಗುಜರಾತ್ ಚುನಾವಣೆಯ ದಿನಾಂಕವನ್ನು ನಿಧಾನವಾಗಿ ಪ್ರಕಟಿಸುವ ಮೂಲಕ ಚುನಾವಣಾ ಆಯೋಗವು ಬಿಜೆಪಿಗೆ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಅನುವು ಮಾಡಿಕೊಟ್ಟಿದೆ. ಆ ಜನಪ್ರಿಯ ಯೋಜನೆಗಳು ಮತದಾರರನ್ನು ಸೆಳೆಯಲು ಅನುಕೂಲವಾಗಲಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡುತ್ತಿವೆ.
ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಗುಜರಾತ್ ಗೆ ಮೊದಲು ಹಿಮಾಚಲ ಪ್ರದೇಶದ ಚುನಾವಣೆ ನಡೆಸುತ್ತಿರುವುದನ್ನು ಹವಾಮಾನ, ಪ್ರವಾಹ ಪರಿಹಾರ ಮತ್ತು ಆಚರಣೆಗಳು ಚುನಾವಣೆಗೆ ದಿನಾಂಕ ಘೋಷಿಸಿದ ನಿರ್ಧಾರವನ್ನು ಈ ಅನೇಕ ಅಂಶಗಳ ಆಧಾರದ ಮೇಲೆ ಸಮರ್ಥಿಸಿಕೊಂಡಿದ್ದಾರೆ.