ಪಾಕಿಸ್ತಾನ್ ಕೋರ್ಟ್ ನಲ್ಲಿ ಇಬ್ಬರು ವಕೀಲರ ಭೀಕರ ಹತ್ಯೆ

     

Last Updated : Feb 20, 2018, 05:31 PM IST
ಪಾಕಿಸ್ತಾನ್ ಕೋರ್ಟ್ ನಲ್ಲಿ ಇಬ್ಬರು ವಕೀಲರ ಭೀಕರ ಹತ್ಯೆ  title=

ಲಾಹೋರ್: ಮಂಗಳವಾರದಂದು ವ್ಯಕ್ತಿಯೋಬ್ಬನು ಗುಂಡು ಹಾರಿಸಿ ಇಬ್ಬರು ವಕೀಲರನ್ನು ಹತ್ತಿಗೈದಿರುವ ಘಟನೆ ಪಾಕಿಸ್ತಾನದ ಲಾಹೋರ್ ಸೆಷನ್ಸ್ ಕೋರ್ಟ್ ಸಂಕೀರ್ಣದಲ್ಲಿ ನಡೆದಿದೆ.

ಇಲ್ಲಿನ ಜಿಯೋ ಚಾನಲ್ ಪ್ರಕಾರ ಮೃತಪಟ್ಟಿರುವ ವಕೀಲರನ್ನು ರಾಣಾ ಇಸ್ತಿಕ್ ಮತ್ತು ಒವೈಸ್ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿರುವ ವ್ಯಕ್ತಿಯನ್ನು ಕಾಸಿಫ್ ರಜಪೂತ ಎಂದು ಹೇಳಲಾಗಿದೆ. ಸುದ್ದಿ ಮೂಲಗಳ ಪ್ರಕಾರ ಇಸ್ತಿಯಾಕ್ ಮತ್ತು ಆ ಗುಂಡು ಹಾರಿಸಿದ ವ್ಯಕ್ತಿಯನ್ನು ಸಂಬಂಧಿಗಳು ಎಂದು ತಿಳಿದುಬಂದಿದೆ. ಪೊಲೀಸರು ಹೇಳುವಂತೆ ಕೌಟುಂಬಿಕ ವಿಚಾರವಾಗಿ ಕಾಸಿಫ್ ವಕೀಲರನ್ನು ಗುಂಡಿಕ್ಕಿ ಕೊಂಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಸಿಫ್ ನನ್ನು ಬಂಧಿಸಿದ ನಂತರ  ತಾನು ವಕೀಲ ನೆಂದು ಪೋಲೀಸರ ಮುಂದೆ ಹೇಳಿಕೊಂಡಿದ್ದಾನೆ, ಆದರೆ ಪೊಲೀಸರು ಇನ್ನು ತನಿಖೆಯನ್ನು ಮುಂದುವರೆಸಿದ್ದಾರೆ.ಈ ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಶೆಹಬಾಝ್ ಶರೀಫ್ ಪೊಲೀಸರಿಂದ ವರದಿಯನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.

Trending News