ಅಭಿವೃದ್ಧಿಗೆ ಎರಡು ಮಾದರಿಗಳು- ಒಂದು ಗಾಂಧಿ-ನೆಹರು, ಮತ್ತೊಂದು ಮೋದಿ ಮಾದರಿ: ಅಮಿತ್ ಷಾ

ಕಾಂಗ್ರೇಸ್ನಿಂದ ಸುತ್ತುವರೆದಿರುವ ಅಮೇಥಿ-ರಾಯ್ಬರೇಲಿಯಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸುವ ಸಲುವಾಗಿ ಬಿಜೆಪಿ ಪ್ರತಿ ವಾರ ತನ್ನ ನಾಯಕರನ್ನು ಅಲ್ಲಿಗೆ ಕಳುಹಿಸುತ್ತಿದೆ. ಈ ಮೂಲಕ ಆ ಪ್ರದೇಶಗಳಲ್ಲಿ ತನ್ನ ಸ್ಥಾನಗಳನ್ನು ಕೇಂದ್ರಿಕರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆ ಪ್ರದೇಶದಲ್ಲಿ ಯಶಸ್ಸು ಗಳಿಸಿರಲಿಲ್ಲ.

Updated: Oct 10, 2017 , 04:23 PM IST
ಅಭಿವೃದ್ಧಿಗೆ ಎರಡು ಮಾದರಿಗಳು- ಒಂದು ಗಾಂಧಿ-ನೆಹರು, ಮತ್ತೊಂದು ಮೋದಿ ಮಾದರಿ: ಅಮಿತ್ ಷಾ

ಅಮೇಥಿ:  ರಾಹುಲ್ ಗಾಂಧಿಯ ಸಂಸದೀಯ ಕ್ಷೇತ್ರ ಹಾಗೂ ಕಾಂಗ್ರೇಸ್ ನ ಕೋಟೆ ಅಮೇಥಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ 21 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮೂರುವರೆ ವರ್ಷಗಳ ಹಿಂದೆ ಅಮೇಥಿಗೆ ಕಳುಹಿಸುವ ಮೂಲಕ ಇಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಲಭಿಸಿತು. ಆ ಸಮಯದಲ್ಲಿ, ಇಲ್ಲಿನ ಪಕ್ಷದ ಕಾರ್ಯಕರ್ತರು ನನಗೆ ಸಾಕಷ್ಟು ಬೆಂಬಲ ನೀಡಿದರು. ನನ್ನ ಅಮೂಲ್ಯವಾದ ಭಾಗ್ಯವೆಂದರೆ ನಾನು ಅಮೇಥಿಯ ಸಹೋದರಿಯಾದೆ. ಸಂಬಂಧವು ಸಹೋದರಿಯದಾದಾಗ ಮನಸ್ಸಿನಲ್ಲಿ ಯಾವಿದೆ ಸ್ವಾರ್ಥ ಇರುವುದಿಲ್ಲ ಎಂದು ತಿಳಿಸಿದರು. ನಂತರ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ಧಾಳಿ ನಡೆಸಿದ ಅವರು ದೇಶದಾದ್ಯಂತ ಅಭಿವೃದ್ದಿ ಭಾಷಣ ಮಾಡುತ್ತಾ, ಅಮೇಥಿಯ ಹೆಸರಿನಲ್ಲಿ ಆಡಳಿತ ನಡೆಸುವವರು, ಗುಜರಾತ್ ನಲ್ಲಿ ಅಭಿವೃದ್ದಿಯ ವಿನೋದ ಮಾಡಿದರು ಎಂದು ರಾಹುಲ್ ಗಾಂಧಿಯನ್ನು  ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅಮೆಥಿಯನ್ನು ಒಂದು ಹೊರೆಯಾಗಿ ನೋಡಿಕೊಂಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅಮೇಥಿಯ ಅಭಿವೃದ್ದಿ ಏನು ಎಂದು ಇರಾನಿ ಕಿಡಿಕಾರಿದರು.

ಕಾಂಗ್ರೇಸ್ಗೆ ಬಡವರ ಯೋಚನೆ ಇಲ್ಲ- ಸಿಎಂ ಆದಿತ್ಯನಾಥ್

ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾವು ಅಮೇಥಿಯ ಅಭಿವೃದ್ದಿಗೆ ಬದ್ಧರಾಗಿದ್ದೇವೆ ಎಂದು ಹೇಳಿದರು. ಇದಲ್ಲದೆ, ನಾವು ಇಡೀ ರಾಜ್ಯವನ್ನು ಅಭಿವೃದ್ದಿ ಪಡೆಸುವುದಾಗಿ ಆಶ್ವಾಸನೆ ನೀಡಿದ ಅವರು, ಮೋದಿ ಜೀ ನೇತೃತ್ವದಲ್ಲಿ ದೇಶ ಪ್ರಪಂಚದ ಇತರ ರಾಷ್ಟ್ರಗಳೊಂದಿಗೆ ಸಮಾನತೆಯಿಂದ ನಿಂತಿದೆ ಎಂದು ಸಂತಸ ವ್ಯಕ್ತಪಡಿಸಿದರು. ತನ್ನ ಆಕ್ರಮಣಕಾರಿ ವಿಧಾನವನ್ನು ಒಪ್ಪಿಕೊಂಡಿರುವ ಕಾಂಗ್ರೇಸ್ ಗೆ ಬಡವರ ಬಗ್ಗೆ ಎಂದಿಗೂ ಕಾಳಜಿ ಇಲ್ಲ ಎಂದು ದೂರಿದರು. ನಿರುದ್ಯೋಗಿಗಳಿಗೆ ಉದ್ಯೋಗವಿಲ್ಲ ಅಥವಾ ಬಡತನ ಕಣ್ಮರೆಯಾಗಿಲ್ಲ. ಅಮೇಥಿ ರೈತರ ಭೂಮಿ ಮತ್ತು ಕುಟುಂಬವು ಏಕಸ್ವಾಮ್ಯವಾಗಿರಲು ಅನುಮತಿಸುವುದಿಲ್ಲ ಎಂದು ಯೋಗಿ ಟೀಕಿಸಿದರು. ಸ್ಮೃತಿ ಇರಾನಿ ಅಮೇಥಿ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ ಯೋಗಿ, ಮೋದಿ ಸರ್ಕಾರವು ಹಣ ಕೊಟ್ಟಾಗ ಮಾತ್ರ ರೈಲು, ರಸ್ತೆ, ವಿದ್ಯುತ್ ಸೌಕರ್ಯ ದೊರೆಯುತ್ತದೆ ಎಂದು ರಾಹುಲ್ ಗಾಂಧಿ ವಿರುದ್ಧ ದಾಳಿ ನಡೆಸಿದರು. 

ಸ್ಮೃತಿ ಇರಾನಿಯ ಆಹ್ವಾನದ ಮೇರೆಗೆ ಅಮೇಥಿಗೆ ಬಂದ ಅಮಿತ್ ಷಾ

ಸಹೋದರಿ ಸ್ಮೃತಿ ಇರಾನಿಯ ಆಹ್ವಾನದ ಮೇರೆಗೆ ಅಮೇಥಿಗೆ ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು. ವಿಜೇತ ಅಭ್ಯರ್ಥಿ ಇಲ್ಲಿಗೆ ಬರುವುದಿಲ್ಲ, ಆದರೆ ಮೊದಲ ಬಾರಿಗೆ ಸೋಲಿನ ಅಭ್ಯರ್ಥಿ ಇಲ್ಲಿಗೆ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತ ನಂತರವೂ ಸ್ಮೃತಿ ಇರಾನಿ ಅಮೆಥಿಯನ್ನು ಬಿಟ್ಟು ಹೋಗಿಲ್ಲ ಎಂದು ಸ್ಮೃತಿ ಇರಾನಿಯನ್ನು ಹೊಗಳಿದ ಷಾ,  ಅಭಿವೃದ್ಧಿಗೆ ಎರಡು ಮಾದರಿಗಳು- ಒಂದು ಗಾಂಧಿ-ನೆಹರು, ಮತ್ತೊಂದು ಮೋದಿ ಮಾದರಿ ಎಂದು ತಿಳಿಸಿದರು. 

ನಂತರ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಷಾ, ರಾಹುಲ್ ಗಾಂಧಿ ಮೂರು ವರ್ಷಗಳ ಮೋದಿ ಸರ್ಕಾರದ ಜವಾಬ್ದಾರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ತಮ್ಮ ಅಜ್ಜ, ಅಜ್ಜಿ, ತಂದೆ, ಈಗ ಸ್ವತಃ ರಾಹುಲ್ ಅಮೇಥಿಗೆ ನೀಡಿರುವ ಕೊಡುಗೆಗಳೇನು? ಎಂದು ಪ್ರಶ್ನಿಸಿದರು. 

ಮೂಲಗಳ ಪ್ರಕಾರ, ಕಾಂಗ್ರೇಸ್ನಿಂದ ಸುತ್ತುವರೆದಿರುವ ಅಮೇಥಿ-ರಾಯ್ಬರೇಲಿಯಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸುವ ಸಲುವಾಗಿ ಬಿಜೆಪಿ ಪ್ರತಿ ವಾರ ತನ್ನ ನಾಯಕರನ್ನು ಅಲ್ಲಿಗೆ ಕಳುಹಿಸುತ್ತಿದೆ. ಈ ಮೂಲಕ ಆ ಪ್ರದೇಶಗಳಲ್ಲಿ ತನ್ನ ಸ್ಥಾನಗಳನ್ನು ಕೇಂದ್ರಿಕರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆ ಪ್ರದೇಶದಲ್ಲಿ ಯಶಸ್ಸು ಗಳಿಸಿರಲಿಲ್ಲ. ಅದಕ್ಕಾಗಿಯೇ ರಾಹುಲ್ ಗಾಂಧಿಯವರ ಅಮೇಥಿ ಭೇಟಿಯ ನಂತರ ಬಿಜೆಪಿ ನಾಯಕರು ಅಲ್ಲಿಗೆ ಭೇಟಿ ನೀಡಿದ್ದಾರೆ.