ಪುಲ್ವಾಮಾ ಐಇಡಿ ಸ್ಫೋಟ: ಗಾಯಗೊಂಡಿದ್ದ ಒಂಬತ್ತು ಸೈನಿಕರಲ್ಲಿ, ಇಬ್ಬರು ಮೃತ

ಸೋಮವಾರ ಸೇನೆಯ ಬೆಂಗಾವಲು ಬಳಿ ವಾಹನದಲ್ಲಿ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಅಳವಡಿಸಿದ್ದರಿಂದ ಒಟ್ಟು ಒಂಬತ್ತು ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

Last Updated : Jun 18, 2019, 12:00 PM IST
ಪುಲ್ವಾಮಾ ಐಇಡಿ ಸ್ಫೋಟ: ಗಾಯಗೊಂಡಿದ್ದ ಒಂಬತ್ತು ಸೈನಿಕರಲ್ಲಿ, ಇಬ್ಬರು ಮೃತ title=

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಸೇನಾಪಡೆಯ ಬೆಂಗಾವಲು ವಾಹನವನ್ನು ಗುರಿಯಾಗಿಸಿ ನಡೆಸಿದ್ದ ದಾಳಿಯ ಒಂದು ದಿನದ ನಂತರ ಮಂಗಳವಾರ ಬೆಳಿಗ್ಗೆ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಸೇನೆಯ ಬೆಂಗಾವಲು ಬಳಿ ವಾಹನದಲ್ಲಿ ಭಯೋತ್ಪಾದಕರು ಸುಧಾರಿತ ಸ್ಫೋಟಕ ಬಳಸಿ (ಐಇಡಿ) ಅಳವಡಿಸಿದ್ದರಿಂದ ಒಟ್ಟು ಒಂಬತ್ತು ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದರು.

44ನೇ ರಾಷ್ಟ್ರೀಯ ರೈಫಲ್ಸ್‌ನ ಬುಲೆಟ್ ಮತ್ತು ಮೈನ್ ಪ್ರೂಫ್ ವಾಹನದ ಮೇಲೆ ಈದ್ಗಾ ಅರಿಹಾಲ್ ಸಮೀಪದ ಅರಿಹಾಲ್-ಲಸ್ಸಿಪೊರಾ ರಸ್ತೆಯಲ್ಲಿ ಐಇಡಿ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 9 ಮಂದಿ ಸೈನಿಕರು ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತು. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು.

ಸೈನ್ಯದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾದ ಸೇನಾಪಡೆ ದಾಳಿಯನ್ನು ತಡೆಯಲು ಗಾಳಿಯಲ್ಲಿ ಗುಂಡು ಹಾರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆ ಉಗ್ರರು ನಡೆಸಿದ ವಿಫಲ ಯತ್ನ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಹೇಳಿದ್ದಾರೆ. 

ಫೆಬ್ರವರಿ 14ರಂದು ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ ಸ್ಥಳದಿಂದ 27 ಕಿಲೊಮೀಟರ್‌ ದೂರದಲ್ಲಿ ಉಗ್ರರು ಎಲ್‌ಇಡಿ ಸ್ಫೋಟಕ ಬಳಸಿ ದಾಳಿ ನಡೆಸಿದ್ದಾರೆ.
 

Trending News