"ಕೇಂದ್ರದ ಬಜೆಟ್ ರೈತ ವಿರೋಧಿ, ಜನ ವಿರೋಧಿ ಮತ್ತು ದೇಶ ವಿರೋಧಿ "

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೇಂದ್ರ ಬಜೆಟ್ 2021 ನ್ನು 'ರೈತ ವಿರೋಧಿ, ಜನ ವಿರೋಧಿ ಮತ್ತು ದೇಶ ವಿರೋಧಿ' ಬಜೆಟ್ ಎಂದು ಕರೆದಿದ್ದಾರೆ.

Last Updated : Feb 1, 2021, 06:57 PM IST
  • 'ಬಿಎಸ್ಎನ್ಎಲ್, ರೈಲು, ಏರ್ ಇಂಡಿಯಾ ಮತ್ತು ಪಿಎಸ್ಯುಗಳನ್ನು ಖಾಸಗೀಕರಣಗೊಳಿಸಲಾಗಿದೆ. ಉದ್ಯೋಗಗಳು ಸುರಕ್ಷಿತವಾಗಿಲ್ಲ.
  • ನಿಮಗೆ 15 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದರು, ಅವರು ಏನನ್ನೂ ನೀಡಲಿಲ್ಲ'
"ಕೇಂದ್ರದ ಬಜೆಟ್ ರೈತ ವಿರೋಧಿ, ಜನ ವಿರೋಧಿ ಮತ್ತು ದೇಶ ವಿರೋಧಿ " title=

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೇಂದ್ರ ಬಜೆಟ್ 2021 ನ್ನು 'ರೈತ ವಿರೋಧಿ, ಜನ ವಿರೋಧಿ ಮತ್ತು ದೇಶ ವಿರೋಧಿ' ಬಜೆಟ್ ಎಂದು ಕರೆದಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜೀ (Mamata Banerjee) 'ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದಾರೆ. ಸೆಸ್ ಅನ್ನು ಕೇಂದ್ರ ಸರ್ಕಾರವು ತೆಗೆದುಕೊಂಡು ಹೋಗುತ್ತದೆ, ರಾಜ್ಯ ಸರ್ಕಾರಕ್ಕೆ ಏನೂ ಸಿಗುವುದಿಲ್ಲ. ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ರೈತರು ತೊಂದರೆಗೊಳಗಾಗುತ್ತಾರೆ. ಅವರು ಇಂಧನ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ ಅವರು ನಿಮಗೆ 15 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದರು, ಅವರು ಏನನ್ನೂ ನೀಡಲಿಲ್ಲ' ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: "ನನ್ನನ್ನು ಇಲ್ಲಿಗೆ ಕರೆದ ನಂತರ ಅವಮಾನಿಸಬೇಡಿ, ಇದು ರಾಜಕೀಯ ಕಾರ್ಯಕ್ರಮವಲ್ಲ'

'ಬಿಎಸ್ಎನ್ಎಲ್, ರೈಲು, ಏರ್ ಇಂಡಿಯಾ ಮತ್ತು ಪಿಎಸ್ಯುಗಳನ್ನು ಖಾಸಗೀಕರಣಗೊಳಿಸಲಾಗಿದೆ. ಉದ್ಯೋಗಗಳು ಸುರಕ್ಷಿತವಾಗಿಲ್ಲ.ರಾಜ್ಯ ಸರ್ಕಾರದಲ್ಲಿ ಉದ್ಯೋಗಗಳೆಲ್ಲವೂ ಸುರಕ್ಷಿತವಾಗಿವೆ. ನಾನು ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ ಅವರನ್ನು ಕೇಳಿದೆ, ಬಜೆಟ್ ಹೇಗಿದೆ?  ಅದಕ್ಕೆ ಅವರು. 'ಜನರನ್ನು ಮೋಸಗೊಳಿಸಲು ವೇಷ, ಮರೆಮಾಚುವ ಬಜೆಟ್' ಎಂದು ಹೇಳಿದರು.

'ಬಿಜೆಪಿ ಒಂದು ಭಾಗದ ಜನರಿಗೆ ವ್ಯವಹಾರ ನೀಡುತ್ತಿದೆ.ಚುನಾವಣೆಗೆ ಮುಂಚಿತವಾಗಿ ಅವರು ಏಳು ಚಹಾ ತೋಟಗಳನ್ನು ಮತ್ತೆ ತೆರೆಯುವುದಾಗಿ ಭರವಸೆ ನೀಡಿದರು, ಅಲ್ಲವೇ? ಅವರು ಕೇವಲ ನಕಲಿ ಭರವಸೆಗಳನ್ನು ನೀಡುತ್ತಾರೆ. ನೀವು ಸುಳ್ಳನ್ನು ಮಾತ್ರ ಹರಡುತ್ತೀರಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 'ಟ್ಯಾಗೋರ್ ಅವರ ನಾಡಿನಲ್ಲಿ ಎಂದಿಗೂ ದ್ವೇಷದ ರಾಜಕಾರಣ ಗೆಲ್ಲಲು ಸಾಧ್ಯವಿಲ್ಲ'

'ನಾವು ಈಗಾಗಲೇ ಉತ್ತರ ಬಂಗಾಳದಲ್ಲಿ ರಸ್ತೆಗಳನ್ನು ಮಾಡಿದ್ದೇವೆ. ನೆರೆಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವ ಏಷ್ಯನ್ ಹೆದ್ದಾರಿಗೆ ನಾವು ಸಹಾಯ ಮಾಡುತ್ತಿದ್ದೇವೆ.ಕೋಲ್ಕತಾ-ಸಿಲಿಗುರಿ ರಸ್ತೆಯನ್ನು ನೀವು ಏನು ಮಾಡುತ್ತೀರಿ? ನೀವು ಅಸ್ಸಾಂನಲ್ಲಿ ವಿಮಾನ ನಿಲ್ದಾಣವನ್ನು ಕಾರ್ಯರೂಪಕ್ಕೆ ತಂದಿದ್ದೀರಿ, ಕೂಚ್ಬೆಹರ್ ವಿಮಾನ ನಿಲ್ದಾಣವನ್ನು ಏಕೆ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ "ನೀವು ಅದನ್ನು ಮಾಡದಿದ್ದರೆ, ನಾನು ಅದನ್ನು ಮಾಡುತ್ತೇನೆ. ಭಿನ್ನತೆಯ ರಾಜಕೀಯವನ್ನು ನಾನು ನಂಬುವುದಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ: 'ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ'

ರೈತ ಕಾನೂನುಗಳ ಕುರಿತು ಮಾತನಾಡಿದ ಅವರು, "ಅವರು ಮತದಾನಕ್ಕಿಂತ ಮುಂಚಿತವಾಗಿ ರಸ್ತೆಗಳನ್ನು ಮಾಡಲು ಬಯಸುತ್ತಾರೆ. ಹೋಗಿ ಈ ಹಣವನ್ನು ರೈತರಿಗೆ ನೀಡಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿ. ಗ್ರಾಮೀಣ ರಸ್ತೆಗಳನ್ನು ಮಾಡುವ ಅಗತ್ಯವಿಲ್ಲ, ನಾನೇ ಅದನ್ನು ಮಾಡುತ್ತೇನೆ" ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News