ನವದೆಹಲಿ: ಕರೋನಾ ಸೋಂಕಿನ ಬಿಕ್ಕಟ್ಟಿನಿಂದಾಗಿ ಈ ವರ್ಷದ ಮಾರ್ಚ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಲಾ ಜಿಮ್ ಮತ್ತು ಯೋಗ ಕೇಂದ್ರಗಳನ್ನು ಮುಚ್ಚಲಾಗಿದೆ. ಆದರೆ ಇದೀಗ ದೆಹಲಿಯಲ್ಲಿ ಜಿಮ್ ತೆರೆಯಲು ಅನುಮತಿ ನೀಡಲಾಗಿದೆ. ದೆಹಲಿ ಸರ್ಕಾರದ ಪ್ರಕಾರ ಸೆಪ್ಟೆಂಬರ್ 14 ಸೋಮವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿಮ್‌ಗಳನ್ನು ತೆರೆಯಬಹುದು.
ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ:
ಆದೇಶದ ಪ್ರಕಾರ ಜಿಮ್ ಮತ್ತು ಯೋಗ ಸಂಸ್ಥೆಯನ್ನು ತಕ್ಷಣದಿಂದ ತೆರೆಯಲು ಅವಕಾಶ ನೀಡಲಾಗಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಜಿಮ್ ಆಪರೇಟರ್‌ಗಳಿಗೆ ಮತ್ತು ಜಿಮ್‌ಗೆ ಹೋಗಲು ಬಯಸುವವರಿಗೆ ಪರಿಹಾರವನ್ನು ನೀಡುವ ಔಪಚಾರಿಕ ಆದೇಶ ಹೊರಡಿಸಿದೆ. ಇದರೊಂದಿಗೆ ಸಾಪ್ತಾಹಿಕ ಮಾರುಕಟ್ಟೆಗಳನ್ನು ತೆರೆಯಲು ಅನುಮತಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿರುವುದೇಕೆ? ಸಿಎಂ ಕೊಟ್ಟ ಉತ್ತರ ಇದು!
ಮಾರ್ಗಸೂಚಿಯನ್ನು ಅನುಸರಿಸಬೇಕು:
ಡಿಡಿಎಂಎ ತನ್ನ ಆದೇಶದಲ್ಲಿ ಜಿಮ್ ತೆರೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದಾಗ ದೆಹಲಿಯ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಆದರೆ ಆ ಸಮಯದಲ್ಲಿ ಜಿಮ್ ತೆರೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ ಈಗ ಅನ್ಲಾಕ್ -4 ಅಡಿಯಲ್ಲಿ ಎಲ್ಲಾ ಚಟುವಟಿಕೆಗಳನ್ನು ಕ್ರಮೇಣ ತೆರೆಯಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಮ್ ತೆರೆಯಲು ನಿರ್ಧರಿಸಲಾಗಿದೆ. ಆದಾಗ್ಯೂ ಜಿಮ್ ಮಾಲೀಕರು ಕೆಲವು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದೆ.
ಎಸ್‌ಒಪಿ ಅಡಿಯಲ್ಲಿ ಜಿಮ್ ನಡೆಸಬೇಕು:
ರಾಜ್ಯ ಸರ್ಕಾರದ ಪ್ರಕಾರ, ಎಲ್ಲಾ ಜಿಮ್ ಆಪರೇಟರ್‌ಗಳು ಕೇಂದ್ರ ಸರ್ಕಾರ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅಡಿಯಲ್ಲಿ ಜಿಮ್ ಅನ್ನು ನಡೆಸಬೇಕಾಗುತ್ತದೆ. ದೆಹಲಿಯಲ್ಲಿ ಒಟ್ಟು ಕೊರೊನಾವೈರಸ್ ಸೋಂಕುಗಳ ಸಂಖ್ಯೆ 2,18,304 ಆಗಿದೆ. ಈ ಪೈಕಿ 1,84,738 ಜನರು ಆರೋಗ್ಯವಾಗಿದ್ದಾರೆ. ದೆಹಲಿಯಲ್ಲಿ ಕರೋನವೈರಸ್ ನಿಂದ ಇದುವರೆಗೆ 4,744 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಕರೋನದ 28,812 ಸಕ್ರಿಯ ಪ್ರಕರಣಗಳಿವೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 29 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಲ್ಲಿ ಸಾವಿನ ಪ್ರಮಾಣ ಶೇಕಡಾ 0.68 ರಷ್ಟಿದ್ದರೆ, ಒಟ್ಟು ಸಾವಿನ ಪ್ರಮಾಣ 2.23 ರಷ್ಟಿದೆ.
ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್ ಮಾತನಾಡಿ, 'ದೆಹಲಿಯ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳಿವೆ. ಆದಾಗ್ಯೂ ಐಸಿಯು ಹಾಸಿಗೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಆದ್ದರಿಂದ ದೆಹಲಿಯ 33 ಪ್ರಮುಖ ಆಸ್ಪತ್ರೆಗಳಲ್ಲಿ 80 ಪ್ರತಿಶತ ಐಸಿಯು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಇಡಬೇಕಾಗುತ್ತದೆ ಮತ್ತು ಉಳಿದ 20 ಪ್ರತಿಶತ ಹಾಸಿಗೆಗಳನ್ನು ಇತರ ರೋಗಿಗಳಿಗೆ ಬಳಸಬಹುದು ಎಂದು ದೆಹಲಿ ಸರ್ಕಾರ ಆದೇಶಿಸಿದೆ.