ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿರುವುದೇಕೆ? ಸಿಎಂ ಕೊಟ್ಟ ಉತ್ತರ ಇದು!

ಕರೋನಾ ಬಿಕ್ಕಟ್ಟಿನಲ್ಲಿ ಹಾಸಿಗೆಗಳ ಕೊರತೆ ಇರುವುದಿಲ್ಲ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದರು. ಪ್ರಸ್ತುತ ದೆಹಲಿಯ ಆಸ್ಪತ್ರೆಗಳಲ್ಲಿ ಸುಮಾರು ಐದು ಸಾವಿರ ಹಾಸಿಗೆಗಳಿದ್ದು, ಅದರಲ್ಲಿ 1,600 ರಿಂದ 1,700 ರೋಗಿಗಳು ಇತರ ರಾಜ್ಯಗಳವರು ಎಂದವರು ತಿಳಿಸಿದರು.

Last Updated : Sep 5, 2020, 02:20 PM IST
  • ದೆಹಲಿಯಲ್ಲಿ ಪ್ರತಿದಿನ 40,000 ಜನರಿಗೆ ಕರೋನಾ ಟೆಸ್ಟ್ ಮಾಡಲಾಗುತ್ತಿದೆ.
  • ದೆಹಲಿ ಸರ್ಕಾರವು ಮಾರುಕಟ್ಟೆಗಳು, ಸಾಪ್ತಾಹಿಕ ಮಾರುಕಟ್ಟೆಗಳು, ಮೊಹಲ್ಲಾ ಕ್ಲಿನಿಕ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರೀಕ್ಷಾ ಶಿಬಿರಗಳನ್ನು ಸ್ಥಾಪಿಸುತ್ತಿದೆ.
  • ಕೆಲವರು ಕರೋನಾದ ಬಗ್ಗೆ ಅಸಡ್ಡೆ ತೋರಲು ಪ್ರಾರಂಭಿಸಿದ್ದಾರೆ. ಅಂತಹ ಜನರು ತಮ್ಮೊಂದಿಗೆ ಇತರ ಜನರ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ ಎಂದು ಕೇಜ್ರಿವಾಲ್ ಬೇಸರ
ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿರುವುದೇಕೆ? ಸಿಎಂ ಕೊಟ್ಟ ಉತ್ತರ ಇದು! title=

ನವದೆಹಲಿ: ದೇಶದ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ರೋಗಿಗಳ ಕುರಿತು ಮಾತನಾಡಿದರು. ಕರೋನಾ ಪ್ರಕರಣಗಳು ಹೆಚ್ಚುತ್ತಿವೆ ಆದರೆ ದೆಹಲಿಯಲ್ಲಿ ಸೋಂಕಿತರ ಸಾವಿನ ಪ್ರಮಾಣ ತೀವ್ರವಾಗಿ ಇಳಿದಿರುವುದರಿಂದ ಚಿಂತಿಸಬೇಕಾಗಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಸಿಎಂ ಕೇಜ್ರಿವಾಲ್ ಪತ್ರಿಕಾಗೋಷ್ಠಿಯ ಪ್ರಮುಖ ವಿಷಯಗಳಿವು...
1. ದೆಹಲಿಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ದೆಹಲಿಯೊಳಗೆ ಸಾವುಗಳು ಕಡಿಮೆಯಾಗುತ್ತಿವೆ.

2. ಶುಕ್ರವಾರ ದೆಹಲಿಯಲ್ಲಿ 2,914 ಕರೋನಾ ಪ್ರಕರಣಗಳು ಕಂಡುಬಂದಿದ್ದು, ಕೇವಲ 13 ಜನರು ಸಾವನ್ನಪ್ಪಿದ್ದಾರೆ.

3. ದೆಹಲಿಯಲ್ಲಿ, ಹೆಚ್ಚು ಹೆಚ್ಚು ಕರೋನಾ ಟೆಸ್ಟ್ ಮಾಡಲಾಗುತ್ತಿದ್ದು ಶೀಘ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಕರೋನಾ ರೋಗಿಗಳಿಗೆ ಡಬಲ್ ಪರೀಕ್ಷೆ ಕಾರಣವಾಗಿದೆ. ಹೆಚ್ಚುತ್ತಿರುವ ಕರೋನಾ ಸೋಂಕಿನ ಬಗ್ಗೆ ಒಬ್ಬರು ಹೆಚ್ಚು ಚಿಂತಿಸಬಾರದು ಎಂಬುದು ಸರ್ಕಾರದ ಉದ್ದೇಶ.

4. ದೆಹಲಿಯಲ್ಲಿ ಪ್ರತಿದಿನ 40,000 ಜನರಿಗೆ ಕರೋನಾ ಟೆಸ್ಟ್ ಮಾಡಲಾಗುತ್ತಿದೆ.

5.  ದೆಹಲಿ ಸರ್ಕಾರವು ಮಾರುಕಟ್ಟೆಗಳು, ಸಾಪ್ತಾಹಿಕ ಮಾರುಕಟ್ಟೆಗಳು, ಮೊಹಲ್ಲಾ ಕ್ಲಿನಿಕ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರೀಕ್ಷಾ ಶಿಬಿರಗಳನ್ನು ಸ್ಥಾಪಿಸುತ್ತಿದೆ.

6. ಕರೋನಾ ಬಿಕ್ಕಟ್ಟಿನಲ್ಲಿ ಹಾಸಿಗೆಗಳ ಕೊರತೆಯಿಲ್ಲ. ಪ್ರಸ್ತುತ ದೆಹಲಿಯ ಆಸ್ಪತ್ರೆಗಳಲ್ಲಿ ಸುಮಾರು ಐದು ಸಾವಿರ ಹಾಸಿಗೆಗಳಿದ್ದು ಅದರಲ್ಲಿ 1,600 ರಿಂದ 1,700 ರೋಗಿಗಳು ಇತರ ರಾಜ್ಯಗಳವರು.

7. ಕೆಲವರು ಕರೋನಾದ ಬಗ್ಗೆ ಅಸಡ್ಡೆ ತೋರಲು ಪ್ರಾರಂಭಿಸಿದ್ದಾರೆ. ಅವರು ಮಾಸ್ಕ್ ಗಳನ್ನು ಧರಿಸುವುದಿಲ್ಲ ಮತ್ತು ರೋಗಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷೆಗಳನ್ನು ಮಾಡಿಸುತ್ತಿಲ್ಲ. ಅಂತಹ ಜನರು ತಮ್ಮೊಂದಿಗೆ ಇತರ ಜನರ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ ಎಂದು ಕೇಜ್ರಿವಾಲ್ ಬೇಸರ ಮ್ಯಕ್ತಪಡಿಸಿದರು.

8. ಕರೋನಾದಿಂದ ಯಾರೂ ಸಾಯಬಾರದು. ನಿನ್ನೆ ಸಾವಿನ ಸಂಖ್ಯೆ 13ಕ್ಕೆ ಇಳಿದಿದೆ, ಇದು ಒಟ್ಟು ಪ್ರಕರಣಗಳಲ್ಲಿ 0.4 ಶೇಕಡಾ. ಇದು ದೇಶದ ಅತ್ಯಂತ ಕಡಿಮೆ ಸಾವಿನ ಪ್ರಮಾಣ ಎಂದು ಸಿಎಂ ವಿವರಿಸಿದರು.
 

Trending News