ಪೊಲೀಸ್ ಠಾಣೆಯೊಳಗೇ ಮಗನನ್ನು ಕೊಂದ ಕಾನ್ಸ್ಟೇಬಲ್! ಮುಂದೆ...

ತಂದೆ-ಮಗನ ನಡುವೆ ನಡೆದ ವಾಗ್ವಾದ ತಾರಕಕ್ಕೇರಿದ ಬಳಿಕ ತಂದೆಯಾದ ಕಾನ್ಸ್ಟೇಬಲ್ ಅರವಿಂದ್ ಯಾದವ್ ತನ್ನ ಮಗನಿಗೆ ಚೌರಿ-ಚೌರಾ ಪೊಲೀಸ್ ಠಾಣೆಯೊಳಗೆ ಗುಂಡು ಹಾರಿಸಿ ಕೊಂದುಹಾಕಿದ್ದಾನೆ. 

Updated: Oct 25, 2019 , 12:07 PM IST
ಪೊಲೀಸ್ ಠಾಣೆಯೊಳಗೇ ಮಗನನ್ನು ಕೊಂದ ಕಾನ್ಸ್ಟೇಬಲ್! ಮುಂದೆ...

ಗೋರಖ್‌ಪುರ: ಹೆಡ್ ಕಾನ್ಸ್ಟೇಬಲ್ ಓರ್ವ, ಪೊಲೀಸ್ ಠಾಣೆಯೊಳಗೇ ತನ್ನ ಮೊದಲನೇ ಹೆಂಡತಿಯ ಮಗನನನ್ನು ಕೊಂದಿರುವ ಘಟನೆ ಗುರುವಾರ ಉತ್ತ್ರಪರ್ದೇಶದಲ್ಲಿ ನಡೆದಿದೆ.

ತಂದೆ-ಮಗನ ನಡುವೆ ನಡೆದ ವಾಗ್ವಾದ ತಾರಕಕ್ಕೇರಿದ ಬಳಿಕ ತಂದೆಯಾದ ಕಾನ್ಸ್ಟೇಬಲ್ ಅರವಿಂದ್ ಯಾದವ್ ತನ್ನ ಮಗನಿಗೆ ಚೌರಿ-ಚೌರಾ ಪೊಲೀಸ್ ಠಾಣೆಯೊಳಗೆ ಗುಂಡು ಹಾರಿಸಿ ಕೊಂದುಹಾಕಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಸರ್ಕಲ್ ಇನ್ಸ್ಪೆಕ್ಟರ್ ಸುಮಿತ್ ಶುಕ್ಲಾ, "ಮಗನ ಜೊತೆ ಜಗಳವಾಡುತ್ತಿದ್ದಾಗ ಅರವಿಂದ್ ತನ್ನ ಬಂಧುಕಿನಿಂದ ಮಗನಿಗೆ ಶೂಟ್ ಮಾಡಿದ್ದಾನೆ.  ಹೀಗಾಗಿ ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ತಂದೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಮೃತನನ್ನು ವಿಕಾಸ್ ಯಾದವ್ ಎಂದು ಗುರುತಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.