2000 ರೂ.ಗೆ 50 ಮೊಟ್ಟೆ ತಿನ್ನುವ ಚಾಲೆಂಜ್ ಸ್ವೀಕರಿಸಿದ್ದ ಭೂಪ..! ಆದರೆ ಆಗಿದ್ದೇನು ಗೊತ್ತೇ ?

ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಮೊಟ್ಟೆಯ ಸವಾಲು ಸ್ವೀಕರಿಸಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಸುಭಾಷ್ ಯಾದವ್ (42) ಎಂದು ಗುರುತಿಸಲಾಗಿದೆ.

Updated: Nov 5, 2019 , 04:21 PM IST
2000 ರೂ.ಗೆ 50 ಮೊಟ್ಟೆ ತಿನ್ನುವ ಚಾಲೆಂಜ್ ಸ್ವೀಕರಿಸಿದ್ದ ಭೂಪ..! ಆದರೆ ಆಗಿದ್ದೇನು ಗೊತ್ತೇ ?
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಮೊಟ್ಟೆಯ ಸವಾಲು ಸ್ವೀಕರಿಸಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಸುಭಾಷ್ ಯಾದವ್ (42) ಎಂದು ಗುರುತಿಸಲಾಗಿದೆ.

ಐಎಎನ್‌ಎಸ್ ವರದಿಯ ಪ್ರಕಾರ, ಯಾದವ್ ತನ್ನ ಸ್ನೇಹಿತನೊಂದಿಗೆ ಬಿಬಿಗಂಜ್ ಮಾರುಕಟ್ಟೆ ಪ್ರದೇಶಕ್ಕೆ ಮೊಟ್ಟೆಗಳನ್ನು ತಿನ್ನಲು ಹೋಗಿದ್ದನು. ಆದರೆ ಇದ್ದಕ್ಕಿದ್ದಂತೆ ಇಬ್ಬರ ನಡುವೆ ವಾಗ್ವಾದ ಉಂಟಾಯಿತು. ತದನಂತರ ಅವನು 50 ಮೊಟ್ಟೆಗಳನ್ನು ತಿನ್ನುವ 2,000 ರೂ.ಗಳ ಸವಾಲನ್ನು ಸ್ವೀಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಭಾಷ್ ಈ ಸವಾಲನ್ನು ಸ್ವೀಕರಿಸಿ ಮೊಟ್ಟೆಗಳನ್ನು ತಿನ್ನಲು ಪ್ರಾರಂಭಿಸಿದಾಗ 41 ಮೊಟ್ಟೆಗಳನ್ನು ತಿಂದನು. ಆದರೆ 42 ನೇ ಮೊಟ್ಟೆಯನ್ನು ತಿನ್ನಲು ಪ್ರಾರಂಭಿಸಿದಾಗ, ಅವರು ಕುಸಿದು ಪ್ರಜ್ಞೆ ತಪ್ಪಿದರು ಎನ್ನಲಾಗಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎನ್ನಲಾಗಿದೆ. ಅತಿಯಾದ ಮೊಟ್ಟೆ ಸೇವೆನೆಯಿಂದಾಗಿ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.