Vehicle Scrappage Policy 2021: ಹೊಸ ಕಾರು ಖರೀದಿಸಿ, ಶೇ.25 ರಷ್ಟು ತೆರಿಗೆ ಉಳಿತಾಯ ಮಾಡಿ, ಏನಿದು ಸರ್ಕಾರದ ಹೊಸ ಯೋಜನೆ?

Vehicle Scrappage Policy 2021: ಸ್ಕ್ರ್ಯಾಪಿಂಗ್ ಪಾಲಸಿ (Vehicle Scrappage Policy 2021) ಜಾರಿಯಾದ ಬಳಿಕ ಹೊಸ ವಾಹನಗಳ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಲಿದೆ. ಇದರಿಂದ ದೇಶದಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಹಾಗೂ ಆಟೋ ಸೆಕ್ಟರ್ ನಲ್ಲಿ ವೇಗ ಕಂಡುಬರಲಿದೆ. ಜೊತೆಗೆ ಸುಮಾರು 35 ಸಾವಿರ ಜನರಿಗೆ ಉದ್ಯೋಗಾವಕಾಶ ಕೂಸ ಸಿಗಲಿದೆ.

Written by - Nitin Tabib | Last Updated : May 8, 2021, 07:19 PM IST
  • ಹೊಸ ವಾಹನ ಖರೀದಿಸಿ ತೆರಿಗೆಯಲ್ಲಿ ಶೇ.25 ರಷ್ಟು ಉಳಿತಾಯ ಮಾಡಿ.
  • ಏನಿದು ಕೇಂದ್ರ ಸರ್ಕಾರದ ಹೊಸ ನೀತಿ?
  • ಈ ತೆರಿಗೆ ಉಳಿತಾಯ ಮಾಡಲು ಏನು ಮಾಡಬೇಕು? ತಿಳಿಯಲು ಸುದ್ದಿ ಓದಿ.
Vehicle Scrappage Policy 2021: ಹೊಸ ಕಾರು ಖರೀದಿಸಿ, ಶೇ.25 ರಷ್ಟು ತೆರಿಗೆ ಉಳಿತಾಯ ಮಾಡಿ, ಏನಿದು ಸರ್ಕಾರದ ಹೊಸ ಯೋಜನೆ? title=
Vehicle Scrappage Policy 2021:

ನವದೆಹಲಿ: Vehicle Scrappage Policy 2021 - ಅಕ್ಟೋಬರ್ 1ರ ಬಳಿಕ ಒಂದು ವೇಳೆ ನೀವು ವಾಹನ ಖರೀದಿಸಿದರೆ ಹಾಗೂ ನೀವು ನಿಮ್ಮ ಹಳೆ ಕಾರನ್ನು ಸ್ಕ್ರ್ಯಾಪ್ ಎಂದು ಘೋಷಿಸಿದರೆ, ನಿಮಗೆ ನಿಮ್ಮ ತೆರಿಗೆಯಲ್ಲಿ ಶೇ.25 ರಷ್ಟು ವಿನಾಯ್ತಿ ಸಿಗಲಿದೆ. ಕೇಂದ್ರ ಸರ್ಕಾರ ಮಾರ್ಚ್ ತಿಂಗಳಿನಲ್ಲಿ ತನ್ನ ಸ್ಕ್ರ್ಯಾಪಿಂಗ್ ಪಾಲಸಿಯ ಕರಡು ಪ್ರತಿಯನ್ನು ಜಾರಿಗೊಳಿಸಿತ್ತು. ಇದರಲ್ಲಿ ಸರ್ಕಾರ ವಾಯುಮಾಲಿನ್ಯವನ್ನು ತಡೆಗಟ್ಟಲು 15 ವರ್ಷಕ್ಕಿಂತ ಹಳೆಯ ಕಮರ್ಷಿಯಲ್ ಹಾಗೂ 20 ವರ್ಷಕ್ಕಿಂತ ಹಳೆಯ ನಾನ್ ಕಮರ್ಷಿಯಲ್ ವಾಹನಗಳನ್ನು ಸ್ಕ್ರ್ಯಾಪ್ ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಇನ್ನೊಂದೆಡೆ 8 ವರ್ಷಗಳು ಪೂರ್ಣಗೊಂಡ ವಾಹನಗಳಿಂದ ಗ್ರೀನ್ ಟ್ಯಾಕ್ಸ್ ವಸೂಲಿ ಮಾಡಲಾಗುವುದು ಹಾಗೂ ಆ ಹಣವನ್ನು ವಾತಾವರಣವನ್ನು ಸುರಕ್ಷಿತವಾಗಿರಿಸಲು ಖರ್ಚು ಮಾಡಲಾಗುವುದು. ಈ ಕುರಿತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ (Road Transport And Highway Ministry)ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, ವೆಹಿಕಲ್ ಸ್ಕ್ರ್ಯಾಪಿಂಗ್ ಸರ್ಟಿಫಿಕೆಟ್ ಜೊತೆಗೆ ಸ್ವಂತ ಹೊಸ ವಾಹನ ಖರೀದಿಯ ಮೇಲೆ ರೋಡ್ ಟ್ಯಾಕ್ಸ್ (Road Tax Rebate) ನಲ್ಲಿ ಶೇ.25 ರಷ್ಟು ವಿನಾಯ್ತಿ ಸಿಗಲಿದೆ ಹಾಗೂ ಕಮರ್ಷಿಯಲ್ ವಾಹನ ಖರೀದಿಯ ವೇಳೆ ಶೇ.15 ರಷ್ಟು ಏರಿಗೆ ವಿನಾಯ್ತಿ ಸಿಗಲಿದೆ. 

ಇದನ್ನೂ ಓದಿ- "ಕೊರೊನಾ ಸಾವಿಗಿಂತಲೂ ರಸ್ತೆ ಅಪಘಾತದ ಸಾವುಗಳೇ ಅಧಿಕ"

15 ವರ್ಷಗಳವರೆಗೆ ವಿನಾಯ್ತಿ ಸಿಗಲಿದೆ
ಡ್ರಾಫ್ಟ್ ನೋಟಿಫಿಕೇಶನ್ ಪ್ರಕಾರ ಪ್ಯಾಸಿಂಜರ್ ವಾಹನ ಖರೀದಿಯ ಮೇಲೆ ಶೇ.25 ರಷ್ಟು ಹಾಗೂ ಕಮರ್ಷಿಯಲ್ ವಾಹನ ಖರೀದಿಯ ಮೇಲೆ ಶೇ.15 ರಷ್ಟು ರಿಯಾಯಿತಿ ನಿಮಗೆ ಸಿಗಲಿದೆ. ಕಮರ್ಷಿಯಲ್ ವಾಹನಗಳ ಮೇಲೆ ಈ ತೆರಿಗೆ ವಿನಾಯ್ತಿ ನಿಮಗೆ 8 ವರ್ಷಗಳ ಅವಧಿಗೆ ದೊರೆತರೆ, ಪರ್ಸನಲ್ ವಾಹನ ಖರೀದಿಸುವವರಿಗೆ ಈ ತೆರಿಗೆ ವಿನಾಯ್ತಿ  ರಿಜಿಸ್ಟ್ರೇಷನ್ ದಿನಾಂಕದಿಂದ 15 ವರ್ಷಗಳವರೆಗೆ ಅಸ್ತಿತ್ವದಲ್ಲಿರಲಿದೆ.

ಇದನ್ನೂ ಓದಿ- Coronavirus: ಕರೋನಾವೈರಸ್‌ನಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿವೆ- ನಿತಿನ್ ಗಡ್ಕರಿ ಎಚ್ಚರಿಕೆ

ಆಟೋ ಸೆಕ್ಟರ್ ನಲ್ಲಿ ಬೇಡಿಕೆ ಹೆಚ್ಚಾಗಲಿದೆ
ಕೇಂದ್ರ ಸಚಿವ ನಿತೀನ್ ಗಡ್ಕರಿ (Nitin Gadkari) ಅವರ ಅಂದಾಜಿನ ಪ್ರಕಾರ ಈ ಸ್ಕ್ರ್ಯಾಪಿಂಗ್ ಪಾಲಸಿ ಜಾರಿಯಾದ ಬಳಿಕ ಹೊಸ ವಾಹನಗಳ ಬೆಲೆ ಶೇ.10ರಷ್ಟು ಇಳಿಕೆಯಾಗಲಿದ್ದು, ದೇಶದಲ್ಲಿ ಹೊಸ ವಾಹನಗಳ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಲಿದೆ ಹಾಗೂ ಆಟೋ ಸೆಕ್ಟರ್ (Auto Sector) ನಲ್ಲಿ ವೇಗ ಕೂಡ ಕಂಡು ಬರಲಿದ್ದು, ಸುಮಾರು 35 ಸಾವಿರ ಹೊಸ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಇದನ್ನೂ ಓದಿ- Automobile ಕ್ಷೇತ್ರದಲ್ಲಿ Top Manufacturing Center ಆಗಲಿದೆ ಭಾರತ, Nitin Gadkari ಭವಿಷ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News