ನವದೆಹಲಿ: ಹಿರಿಯ ಸಿಪಿಐ (ಎಂ) ನಾಯಕಿ ಮತ್ತು ತಮಿಳುನಾಡಿನ ಪ್ರಮುಖ ಮಹಿಳಾ ಹೋರಾಟಗಾರ್ತಿ ಮೈಥಿಲಿ ಶಿವರಾಮನ್ (81) ಚೆನ್ನೈನಲ್ಲಿ ಭಾನುವಾರ ಬೆಳಗ್ಗೆ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ(ಎಐಡಿಡಬ್ಲ್ಯೂಎ) ಮಾಜಿ ಉಪಾಧ್ಯಕ್ಷರಾಗಿದ್ದ ಅವರಿಗೆ ಪತಿ ಕರುಣಾಕರನ್ ಮತ್ತು ಪುತ್ರಿ ಕಲ್ಪನಾ ಕರುಣಾಕರನ್ ಇದ್ದಾರೆ.
ಇದನ್ನೂ ಓದಿ: "ಜುಲೈ ಅಂತ್ಯದ ವೇಳೆ ಪ್ರತಿ ದಿನಕ್ಕೆ 1 ಕೋಟಿ ಭಾರತೀಯರಿಗೆ ಕೊರೊನಾ ಲಸಿಕೆ"
1937 ರಲ್ಲಿ ಜನಿಸಿದ ಮಿಥಿಲಿ ಅವರು ಪಪ್ಪಾ ಉಮಾನಾಥ್ ಅವರೊಂದಿಗೆ ಸೇರಿ AIDWA ಸಂಘಟನೆಯನ್ನು ಸ್ಥಾಪಿಸಿದರು, ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನಲ್ಲಿ ಅವರು ಪ್ರಮುಖ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿದ್ದರು.1968 ರ ಕೀಜೆವೆನ್ಮಣಿ ಹತ್ಯಾಕಾಂಡದ ಕುರಿತಾದ ಅವರ ಬರಹಗಳು ಲೇಖಕಿ ವಿ ಗೀತಾ ಮತ್ತು ಅವರ ಮಗಳು ಮತ್ತು ಪ್ರಾಧ್ಯಾಪಕಿ ಕಲ್ಪನಾ ಕರುಣಕರನ್ ಅವರು ಸಂಪಾದಕದತ್ವದಲ್ಲಿನ Haunted by Fire: Essays on Caste, Class, Exploitation and Emancipation ಎಂಬ ಪುಸ್ತಕದ ಭಾಗವಾಗಿವೆ.
Covid-19 took away Mythili Sivaraman today: a v remarkable figure in the Left, TU & women's movements of Tamil Nadu & India. She was among the first to visit Kilvenmani in wake of the massacre of Dalit workers. Red Salute comrade Mythili, from your daughters, comrades in spirit! pic.twitter.com/lFIzQ3EE2R
— Kavita Krishnan (@kavita_krishnan) May 30, 2021
ಕೀಜೆವೆನ್ಮಣಿ ಹತ್ಯಾಕಾಂಡಕ್ಕೆ ಕಾರಣವಾದ ಮೇಲ್ಜಾತಿಯ ಗುಂಪುಗಳು ನಡೆಸಿದ ಅಗ್ನಿಸ್ಪರ್ಶದಿಂದಾಗಿ ದಲಿತ ಕುಟುಂಬಗಳ ನಲವತ್ತನಾಲ್ಕು ಮಹಿಳೆಯರು ಮತ್ತು ಮಕ್ಕಳು ತಮ್ಮ ಮನೆಗಳಲ್ಲಿ ಸಾವನ್ನಪ್ಪಿದ್ದರು.ಆ ಘಟನೆಯನ್ನು ದಾಖಲಿಸಿದವರಲ್ಲಿ ಮೈಥಿಲಿ ಮೊದಲಿಗರು.1992 ರ ವಚತಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತ್ರರಿಗೆ ನ್ಯಾಯಕೊಡಿಸುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದರು.
ಈಗ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘದ (ಎಐಪಿಡಬ್ಲ್ಯೂಎ) ಕಾರ್ಯದರ್ಶಿ ಕವಿತಾ ಕೃಷ್ಣನ್ (Kavita Krishnan),"ಮಿಥಿಲಿ ತಮಿಳುನಾಡಿನಲ್ಲಿ ಪ್ರಖರ ಟ್ರೇಡ್ ಯೂನಿಯನ್ ಸಂಘಟಕರು ಮತ್ತು ಎಐಡಿಡಬ್ಲ್ಯೂಎ ಪದಾಧಿಕಾರಿಯಾಗಿದ್ದರು, ಅಲ್ಲದೇ ಅಪರೂಪದ ಒಳನೋಟವನ್ನು ಹೊಂದಿರುವ ಮಾರ್ಕ್ಸ್ವಾದಿ ಬರಹಗಾರರಾಗಿದ್ದರು" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ- ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅನುಮಾನ
ಇನ್ನೊಂದೆಡೆಗೆ ಕವಿಯತ್ರಿ ಹಾಗೂ ಹೋರಾಟಗಾರ್ತಿ ಮೀನಾ ಕಂದಸ್ವಾಮಿ 'ಅವರ ಜಾತಿ, ವರ್ಗ ಮತ್ತು ಲಿಂಗ ಸಂಬಂಧಿತ ಹೋರಾಟಕ್ಕಾಗಿ ಅವರು ಯಾವಾಗಲೂ ನೆನಪಿನಲ್ಲಿರುತ್ತಾರೆ.ಕೀಜವೆನ್ಮಣಿ ಕುರಿತ ಅವರ ಬರಹಗಳಿಗೆ ವಿಶೇಷ ಸ್ಥಾನವಿದೆ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.