ದೀಪಾವಳಿಯಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸಲು ವಿಎಚ್‌ಪಿಗಿಲ್ಲ ಅನುಮತಿ

ಸುಪ್ರೀಂ ಕೋರ್ಟ್ ಆದೇಶವಿಲ್ಲದೆ ವಿವಾದಿತ ಸ್ಥಳದಲ್ಲಿ ಯಾವುದೇ ಆಚರಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

Last Updated : Oct 15, 2019, 02:56 PM IST
ದೀಪಾವಳಿಯಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸಲು ವಿಎಚ್‌ಪಿಗಿಲ್ಲ ಅನುಮತಿ title=

ಅಯೋಧ್ಯೆ: ದೀಪಾವಳಿಯಂದು ಅಯೋಧ್ಯೆಯ ರಾಮ್ ಜನಮಭೂಮಿ-ಬಾಬರಿ ಮಸೀದಿ ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಇತರಿಗೆ  ಅಯೋಧ್ಯೆಯ ವಿಭಾಗೀಯ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಯೋಧ್ಯೆ ಡಿಸಿ ಮನೋಜ್ ಮಿಶ್ರಾ, "ಸುಪ್ರೀಂ ಕೋರ್ಟ್ ಆದೇಶವಿಲ್ಲದೆ ವಿವಾದಿತ ಸ್ಥಳದಲ್ಲಿ ಯಾವುದೇ ಆಚರಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಹಬ್ಬದ ಆಚರಣೆ ಮಾಡಲೇಬೇಕು ಎಂದಾದರೆ, ಅವರು(ವಿಎಚ್‌ಪಿ) ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿ, ಅನುಮತಿ ಪಡೆಯಲಿ" ಎಂದಿದ್ದಾರೆ.

ಏತನ್ಮಧ್ಯೆ, ವಿವಾದಿತ ಸ್ಥಳದಲ್ಲಿ ದೀಪಾವಳಿಯಂದು ದೀಪಗಳನ್ನು ಬೆಳಗಿಸಲು ಅನುಮತಿ ಕೋರಿ ಪ್ರಮುಖ ವೀಕ್ಷಕರು ಮತ್ತು ವಿಎಚ್‌ಪಿ ಮುಖಂಡ ಶರದ್ ಶರ್ಮಾ ಅವರ ನಿಯೋಗ ಅಯೋಧ್ಯೆ ಡಿಸಿಗೆ ಸೋಮವಾರ ಮನವಿ ಸಲ್ಲಿಸಿದೆ.

ಇದೇ ವೇಳೆ, ವಿವಾದಿತ ಸ್ಥಳದಲ್ಲಿ ದೀಪಾವಳಿ ಆಚರಣೆಗೆ ಅನುಮತಿ ನೀಡಿದ್ದೇ ಆದಲ್ಲಿ, ಅಲ್ಲಿ ನಮಾಜ್ ಮಾಡಲೂ ಸಹ ಅನುಮತಿ ನೀಡಬೇಕೆಂದು ಮುಸ್ಲಿಂ ನಾಯಕರು ಒತ್ತಾಯಿಸಿದ್ದಾರೆ. 
 

Trending News