VIDEO: ಕಾಲೇಜು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡಿದ ಎನ್‌ಸಿಪಿ ಸಂಸದ

ಬಾಲಿವುಡ್'ನ 'ಅಂಕೇ ಮಾರೆ...' ಹಾಡಿಗೆ ಕಾಲೇಜು ಯುವಕನಂತೆ ವಿದ್ಯಾರ್ಥಿಗಳೊಂದಿಗೆ ಮಧುಕರ ಕಾಕಡೆ ಹೆಜ್ಜೆ ಹಾಕಿದ್ದಾರೆ.

Updated: Jan 7, 2019 , 12:59 PM IST
VIDEO: ಕಾಲೇಜು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡಿದ ಎನ್‌ಸಿಪಿ ಸಂಸದ

ಭಂಡಾರ: ಇತ್ತೀಚೆಗೆ ಮಹಾರಾಷ್ಟ್ರದ ಭಂಡಾರದ ಶಾಲಾ ಕಾರ್ಯಕ್ರಮವೊಂದರಲ್ಲಿ ಎನ್‌ಸಿಪಿ ಸಂಸದ ಮಧುಕರ ಕಾಕಡೆ ಅವರು ಡ್ಯಾನ್ಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಬಾಲಿವುಡ್'ನ ಅಂಕೇ ಮಾರೆ...' ಹಾಡಿಗೆ ಕಾಲೇಜು ಯುವಕನಂತೆ ವಿದ್ಯಾರ್ಥಿಗಳೊಂದಿಗೆ ಮಧುಕರ ಕಾಕಡೆ ಹೆಜ್ಜೆ ಹಾಕಿದ್ದಾರೆ. ಸಂಸದ ಕಾಕಡೆ ಅವರು ವೇದಿಕೆಯ ಮೇಲೆ ಡ್ಯಾನ್ಸ್ ಮಾಡುತ್ತಿದ್ದಂತೆಯೇ ವಿದ್ಯಾರ್ಥಿಗಳೂ ಕೂಡ ವೇದಿಕೆ ಮುಂದೆ ಹುಚ್ಚೆದ್ದು ಕುಣಿದಿದ್ದಾರೆ. ಈ ವೀಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.