School Boy Propose Video: ಇತ್ತೀಚಿನ ದಿನಗಳಲ್ಲಿ ರೀಲ್’ಗಳನ್ನು ಮಾಡುವ ಹುಚ್ಚು ಅನೇಕ ಜನರಿಗೆ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಯುವಕರು ಒಂದಕ್ಕಿಂತ ಹೆಚ್ಚು ರೀಲ್‌ಗಳನ್ನು ವೈರಲ್ ಮಾಡುತ್ತಲೇ ಇರುತ್ತಾರೆ. ಇಂದಿನ ಪುಟ್ಟ ಪುಟ್ಟ ಮಕ್ಕಳು ಕೂಡ ತಕ್ಷಣ ಕ್ಯಾಮೆರಾ ತೆಗೆದು ರೀಲ್‌ಗಳನ್ನು ಶೂಟ್ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಅವರ ಈ ಅಭ್ಯಾಸವು ಅನೇಕ ಬಾರಿ ಅವರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು, ಇತ್ತೀಚೆಗಷ್ಟೇ ಇಂಥದ್ದೊಂದು ವೀಡಿಯೋ ಮುನ್ನೆಲೆಗೆ ಬಂದಿದ್ದು, ರಿವರ್ಸ್ ನಲ್ಲಿ ಹೋಗುವಾಗ ಹುಡುಗನೊಬ್ಬ ಕೆನ್ನೆ ಊದಿಕೊಳ್ಳುವಷ್ಟು ತಪ್ಪು ಮಾಡಿದ್ದಾನೆ. ಹೌದು ಸ್ಟೈಲ್ ಆಗಿ ಬಂದು ಹುಡುಗಿಗೆ ಪ್ರಪೋಸ್ ಮಾಡಿದ. ಆದ್ರೆ ಆಕೆ ಮಾಡಿದ್ದು ಕಪಾಳ ಊದಿಕೊಳ್ಳುವಂತಹ ಕೆಲಸ. ಆಕೆಯ ಪ್ರತಿಕ್ರಿಯೆ ಮಾತ್ರ ಶಾಕಿಂಗ್.
ಇದನ್ನೂ ಓದಿ: ಮುಂದಿನ 7 ತಿಂಗಳು ಈ ರಾಶಿಯವರು ರಾಜರಂತೆ ಬದುಕುತ್ತಾರೆ, ಇವರ ಮೇಲಿದೆ ಶನಿದೇವನ ಸಂಪೂರ್ಣ ಕೃಪಾ ದೃಷ್ಟಿ !
ವೀಡಿಯೊದಲ್ಲಿ, ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಆರಾಮವಾಗಿ ಕುಳಿತಿರುವುದನ್ನು ನೋಡಬಹುದು. ಕೆಲವರು ಓದುತ್ತಿದ್ದಾರೆ ಮತ್ತು ಕೆಲವರು ಮಾತನಾಡುತ್ತಿದ್ದಾರೆ. ಆಗ ಒಬ್ಬ ಹುಡುಗ ರೀಲ್‌ಗಳನ್ನು ಮಾಡುವುದರಲ್ಲಿ ನಿರತನಾಗಿರುತ್ತಾನ. ಆ ಹುಡುಗ ಹಠಾತ್ತನೆ ಎಚ್ಚರಗೊಂಡು ತನ್ನ ಮುಂದೆ ಕುಳಿತ ವಿದ್ಯಾರ್ಥಿಗೆ ಪ್ರಪೋಸ್ ಮಾಡಲು ಯತ್ನಿಸಿದ್ದಾನೆ. ಆದರೆ ಆ ನಂತರ ಕಂಡು ಬರುವ ದೃಶ್ಯ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
ವೀಡಿಯೊದಲ್ಲಿ, ವಿದ್ಯಾರ್ಥಿಯು ತನ್ನ ಕೈಯಲ್ಲಿ ಹೂವುಗಳೊಂದಿಗೆ ಸಖತ್ ಸ್ಟೈಲ್ ಆಗಿ ಬಂದು ಹುಡುಗಿಗೆ ಮೊಣಕಾಲೂರಿ ಪ್ರಪೋಸ್ ಮಾಡುತ್ತಾನೆ. ಬಾಲಕನ ಕೈಯಲ್ಲಿದ್ದ ಹೂವನ್ನು ಕಂಡು ವಿದ್ಯಾರ್ಥಿನಿ ಗಾಬರಿಯಾಗಿದ್ದಾಳೆ. ವೀಡಿಯೊ ನೋಡಿದ ನಂತರ, ಹುಡುಗಿ ಆ ಹುಡುಗನಿಗೆ ಏನು ಮಾಡಿದ್ದಾಳೆ ಗೊತ್ತಾ?
ಹುಡುಗನು ಹುಡುಗಿಗೆ ಹೂವನ್ನು ನೀಡಿ ಪ್ರೇಮ ಪ್ರಸ್ತಾಪಿಸಲು ಬಂದಾಗ. ಒಂದು ಸೆಕೆಂಡ್ ಕೂಡ ತಡ ಮಾಡದೆ ಹುಡುಗಿ ಹುಡುಗನ ಮುಖಕ್ಕೆ ಬಲವಾಗಿ ಬಾರಿಸುತ್ತಾಳೆ. ಹುಡುಗಿ ಎಷ್ಟು ಬಲವಾಗಿ ಬಡಿಯುತ್ತಾಳೆ ಎಂದರೆ ಹುಡುಗನ ಕೆನ್ನೆಯಲ್ಲಿ ಅಚ್ಚು ಬಿದ್ದಿದೆ. ಇದನ್ನು ನೋಡಿ ಅಲ್ಲಿದ್ದ ಉಳಿದ ವಿದ್ಯಾರ್ಥಿಗಳು ಜೋರಾಗಿ ನಗುತ್ತಾರೆ.
ಇದನ್ನೂ ಓದಿ: Mrunal Thakur: ಬಾಡಿಸೂಟ್ ಧರಿಸಿ ಬೀಚ್ ಬಳಿ ಫೋಸ್ ನೀಡಿದ ಮೃಣಾಲ್ ಠಾಕೂರ್
ಹುಡುಗಿ ಮತ್ತು ಹುಡುಗನ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಇಲ್ಲಿವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ತಮಾಷೆಯ ಕಾಮೆಂಟ್‌ಗಳು ಇದಕ್ಕೆ ಬಂದಿವೆ. ರಿಜ್ವಾನ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.