Viral Video: ಮನುಷ್ಯರಿಗೇನು ಕಮ್ಮಿ ಇಲ್ಲ ಎಮ್ಮೆ, ನಂಬಿಕೆ ಇಲ್ದಿದ್ರೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ

Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ (Social Media) ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಎಮ್ಮೆ (Buffalo)-ಆಮೆಯ (Tortoise) ವೀಡಿಯೊ  ಕೂಡ ಒಂದು. ಇದನ್ನು ನೋಡಿದ ನಂತರ ನೀವು ಆಶ್ಚರ್ಯಚಕಿತರಾಗುವಿರಿ. 

Written by - Nitin Tabib | Last Updated : Dec 17, 2021, 10:10 PM IST
  • ಆಮೆಯ ನೆರವಿಗೆ ಎಮ್ಮೆ ಮಾಡಿದ್ದೇನು ಗೊತ್ತಾ?
  • ಅತ್ಯಂತ ಅಪಾಯದಲ್ಲಿ ಸಿಲುಕಿದ ಆಮೆಯನ್ನು ರಕ್ಷಿಸಿದ ಎಮ್ಮೆ.
  • ವಿಡಿಯೋ ನೋಡಿದ ನೆಟ್ಟಿಗರು ಎಮ್ಮೆಯ ಕುರಿತು ಭಾರಿ ಪ್ರಶಂಶೆ ವ್ಯಕ್ತಪಡಿಸುತ್ತಿದ್ದಾರೆ.
Viral Video: ಮನುಷ್ಯರಿಗೇನು ಕಮ್ಮಿ ಇಲ್ಲ ಎಮ್ಮೆ, ನಂಬಿಕೆ ಇಲ್ದಿದ್ರೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ title=
Buffalo-Turtle Video (File Photo)

Viral Video - ಪ್ರಾಣಿಗಳಿಗೆ ಮನುಷ್ಯರಿಗಿಂತಲೂ ಕಡಿಮೆ ಬುದ್ಧಿವಂತಿಕೆ ಇರುತ್ತದೆ ಎಂಬುದು ಬಹುತೇಕರ ಭಾವನೆ.  ಆದರೆ ಕೆಲವೊಮ್ಮೆ ನಡೆಯುವ ಕೆಲ ಘಟನೆಗಳು 'ಇದು ಪ್ರಾಣಿಗೆ ಹೇಗೆ ಅರ್ಥ ಆಯಿತು?' ಎಂಬುದನ್ನು ಯೋಚಿಸಲು ಆಣಿಮಾಡುತ್ತವೆ ಮತ್ತು ನಾವು ಅದಕ್ಕೆ ಆಶ್ಚರ್ಯವನ್ನೂ ಕೂಡ ವ್ಯಕ್ತಪಡಿಸುತ್ತೇವೆ.  ಇಂದು ನಾವು ನಿಮಗೆ ಅಂತಹ ವಿಡಿಯೋವೊಂದನ್ನು (Funny Video) ಉದಾಹರಣೆಗಾಗಿ ತೋರಿಸುತ್ತಿದ್ದು, ಇದನ್ನು ನೋಡಿದ ನಂತರ ಪ್ರಾಣಿಗಳನ್ನು ಮನುಷ್ಯರಿಗಿಂತ ಕಡಿಮೆ ಎಂದು ಏಕೆ ಪರಿಗಣಿಸಬಾರದು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ. ಎಮ್ಮೆ ಮತ್ತು ಆಮೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Twitter Video) ಭಾರಿ ವೈರಲ್ ಆಗಿದೆ.

ಇದನ್ನೂ ಓದಿ-Snake Funny Video: ಇಲ್ಲಿದೆ ನೋಡಿ ಹಾವಿನ ಅಮೋಘ ನಟನೆ

ಆಮೆಗೆ ಸಹಾಯ ಮಾಡಲು ಎಮ್ಮೆ ಮಾಡಿದ್ದೇನು? (Buffalo-Turtle Video)
ತೆರೆದ ಮೈದಾನದಲ್ಲಿ ಸಂಚರಿಸುವ ಎಮ್ಮೆಯೊಂದು ನೆಲದ ಮೇಲೆ ಬಿದ್ದಿರುವ ಒಂದು ಆಮೆಯನ್ನು ಗಮನಿಸಿದೆ. ಆಮೆ ತಲೆಕೆಳಗಾಗಿ ಬಿದ್ದಿದೆ. ಆಮೆಯ ಜೀವವು ಅಪಾಯದಲ್ಲಿದೆ ಮತ್ತು ಅದಕ್ಕೆ ತನ್ನಷ್ಟಕ್ಕೆ ತಾನೇ ನೇರವಾಗಲು ಆಗುತ್ತಿಲ್ಲ. ಆಮೆಗೆ ಪುನಃ ಸರಿಯಾಗಿ ನಡೆದಾಡಲು ಬೇರೆಯವರ ಸಹಾಯ ಬೇಕಿತ್ತು. ಸಂಕಷ್ಟದಲ್ಲಿರುವ ಆಮೆಯನ್ನು ನೋಡಿದ ಎಮ್ಮೆ ನಿಂತುಕೊಂಡಿದೆ ಮತ್ತು ನಂತರ ಅದನ್ನು ಸರಿಯಾದ ಸ್ಥಿತಿಗೆ ತಿರುಗಿಸಲು ಅದರ ಪಾದವನ್ನು ಬಳಸದೆ , ಕೇವಲ ಕೊಂಬನ್ನು ಮಾತ್ರ ಬಳಸಿದೆ. ಸಾಕಷ್ಟು ಸಮಯದ ನಂತರ, ಎಮ್ಮೆ ಆಮೆಯನ್ನು ಸರಳ ಸ್ಥಿತಿಗೆ ತಂದಿದೆ. ಈ ವೇಳೆ ಹೊರಗೆ ನಿಂತಿದ್ದ ವ್ಯಕ್ತಿ ತನ್ನ ಕ್ಯಾಮರಾದಲ್ಲಿ ಘಟನೆಯನ್ನು ಚಿತ್ರೀಕರಿಸಿದ್ದು ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ.

ಇದನ್ನೂ ಓದಿ-Viral video:ಲೆಹೆಂಗಾ ಬದಲು ರಿಪ್ಡ್ ಡೆನಿಮ್‌ ತೊಟ್ಟು ಹಸೆಮಣೆ ಏರಲು ಬಂದ ಮದುಮಗಳು.!
 
ವಿಡಿಯೋ ನೋಡಿದ ನೆಟ್ಟಿಗರು ಆಮೆಯ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ
ಇಂಟರ್‌ನೆಟ್‌ನಲ್ಲಿ ವೈರಲ್ (Viral Video) ಆಗಿರುವ ಈ ವಿಡಿಯೋವನ್ನು ನೋಡಿದ ಜನರು ಎಮ್ಮೆಯ ಕುರಿತು  ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಕುರಿತು ಬರೆದುಕೊಂಡಿರುವ ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿ,  'ಓ ಮೈ ಗಾಡ್, ಒಳ್ಳೆಯ ಕೆಲಸ.' ಈ ವೀಡಿಯೋ (Trending) ನೋಡಿದ ನಂತರ ನೀವೂ ಕೂಡ ಇದೇ ರೀತಿ ಹೇಳುವಿರಿ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 36 ಸಾವಿರ ಜನರು ಈ ವಿಡಿಯೋ ವಿಕ್ಷೀಸಿದ್ದಾರೆ.  ಹತ್ತು ಸೆಕೆಂಡ್ ಅವಧಿಯ ಈ ವೀಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡಿ ಲೈಕ್ ಕೂಡ ಮಾಡುತ್ತಿದ್ದಾರೆ. ಹಾಗಾದರೆ ಬನ್ನಿ ಎಮ್ಮೆಯ ಈ ಸಮಯ ಪ್ರಜ್ಞೆ ಬಿಂಬಿಸುವ ಈ ವಿಡಿಯೋಗೆ (Video) ನಾವು ಒಂದು ಲೈಕ್ ಹೇಳೋಣ.

ಇದನ್ನೂ ಓದಿ-ಆರೋಗ್ಯ ಕಾಪಾಡಲು ಜಿಮ್ ಸೇರಿದ ಬೆಕ್ಕು, ದೈಹಿಕ ಕಸರತ್ತಿನ ವಿಡಿಯೋ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News