Shocking Video: ಸಣ್ಣ ಜಗಳ, ಚಲಿಸುತ್ತಿರುವ ರೈಲಿನಿಂದ ಸಹ ಪ್ರಯಾಣಿಕನನ್ನು ಹೊರಕ್ಕೆ ಎಸೆದ ವ್ಯಕ್ತಿ

Trending Video: ಇದ್ದಕ್ಕಿದ್ದಂತೆ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೋ ಒಂದು ವಿಷಯಕ್ಕೆ ಇಬ್ಬರು ಯಾತ್ರಿಗಳ ನಡುವೆ ವಾಗ್ವಾದ ಆರಂಭಗೊಂಡಿದೆ, ನಂತರ ವಿವಾದ ಜಗಳಕ್ಕೆ ತಿರುಗಿ ಜಗಳ ಹೇಗೆ ಅಂತ್ಯವಾಯ್ತು ಎಂಬುದನ್ನು ನೀವೇ ಈ ವಿಡಿಯೋದಲ್ಲಿ ನೋಡಿ.

Written by - Nitin Tabib | Last Updated : Oct 18, 2022, 04:10 PM IST
  • ಈ ಘಟನೆ ಬಿರ್ಭುಮ್ ಜಿಲ್ಲೆಯ ತಾರಾಪಿತ್ ರಸ್ತೆ ಮತ್ತು ರಾಮ್‌ಪುರಹಟ್ ರೈಲು ನಿಲ್ದಾಣದ ನಡುವೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
  • ಇದ್ದಕ್ಕಿದ್ದಂತೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಯಾವುದೋ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ಯಾಸಿಂಜರ್ ಗಳ ನಡುವೆ ಮಾತಿನ ಚಕಮಕಿ ನಡೆದಿದೆ.
Shocking Video: ಸಣ್ಣ ಜಗಳ, ಚಲಿಸುತ್ತಿರುವ ರೈಲಿನಿಂದ ಸಹ ಪ್ರಯಾಣಿಕನನ್ನು ಹೊರಕ್ಕೆ ಎಸೆದ ವ್ಯಕ್ತಿ title=
Shocking Video

Shocking Incident: ಸಣ್ಣ ವಾಗ್ವಾದದಲ್ಲಿ ವಿಷಯವು ಅತಿರೇಕಕ್ಕೆ ಹೋಗಿ ಓರ್ವ ವ್ಯಕ್ತಿ ತನ್ನ ಸಹ ಪ್ರಯಾಣಿಕನನ್ನು ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ಎಸೆದಿದ್ದಾನೆ.  ಈ ಪ್ರಕರಣ ಪಶ್ಚಿಮ ಬಂಗಾಳದ ಬಿರ್ಭುಮ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದರ ಸಹಾಯದಿಂದ ಆರೋಪಿಯೂ ಪೊಲೀಸರ ವಶಕ್ಕೆ ಪಡೆದಿದ್ದಾರೆ. 

ಈ ಘಟನೆ ಬಿರ್ಭುಮ್ ಜಿಲ್ಲೆಯ ತಾರಾಪಿತ್ ರಸ್ತೆ ಮತ್ತು ರಾಮ್‌ಪುರಹಟ್ ರೈಲು ನಿಲ್ದಾಣದ ನಡುವೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದ್ದಕ್ಕಿದ್ದಂತೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಯಾವುದೋ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ಯಾಸಿಂಜರ್ ಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ರಮೇಣ, ವಿಷಯವು ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿ ಜಗಳ ಪ್ರಾರಂಭವಾಗಿದೆ.

ಇದನ್ನೂ ಓದಿ-Snake rescue video : ಕೃಷಿ ಹೊಂಡದಲ್ಲಿದ್ದ ದೈತ್ಯ ನಾಗರ ಹಾವಿನ ರಕ್ಷಣೆ! ವಿಡಿಯೋ ವೈರಲ್

ಈ ಜಗಳ ಎಷ್ಟೊಂದು ಎಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದರೆ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ್ದಾನೆ. ಅಕ್ಟೋಬರ್ 16 ರಂದು ಬೆಳಗ್ಗೆ ರೈಲ್ವೇ ಪೊಲೀಸರು ಗಾಯಗೊಂಡ ವ್ಯಕ್ತಿಯನ್ನು ಹಳಿಯಿಂದ ಎತ್ತಿಕೊಂಡು ರಾಂಪುರಹಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದುವರೆಗೆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-Viral Video: ವರ ಪಕ್ಕದಲ್ಲಿರುವಾಗಲೇ ಬಂದು ವಧುವಿಗೆ ಪ್ರಪೋಸ್ ಮಾಡಿದ ಯುವಕ: ಮುಂದೇನಾಯ್ತು!

ಇನ್ನೊಂದೆಡೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿರುವ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News