Watch: ಕಾನ್ಪುರ್ ಏರ್ಪೋರ್ಟ್ ನಲ್ಲಿ ಪ್ರಿಯಾಂಕಾ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ದೂರು ಏನು ಗೊತ್ತೇ?

ಕಾನ್ಪುರ್ ಏರ್ ಪೋರ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಟ್ಟಿಗೆ ಕಳೆದ ಅನೂನ್ಯ ಕ್ಷಣ ಈಗ ಫೇಸ್ ಬುಕ್ ಲೈವ್ ನಲ್ಲಿ ದಾಖಲಾಗಿದೆ.

Last Updated : Apr 27, 2019, 03:18 PM IST
Watch: ಕಾನ್ಪುರ್ ಏರ್ಪೋರ್ಟ್ ನಲ್ಲಿ ಪ್ರಿಯಾಂಕಾ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ದೂರು ಏನು ಗೊತ್ತೇ?  title=
Photo courtesy: Facebook

ನವದೆಹಲಿ: ಕಾನ್ಪುರ್ ಏರ್ ಪೋರ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಟ್ಟಿಗೆ ಕಳೆದ ಅನೂನ್ಯ ಕ್ಷಣ ಈಗ ಫೇಸ್ ಬುಕ್ ಲೈವ್ ನಲ್ಲಿ ದಾಖಲಾಗಿದೆ.

ಈ ವೀಡಿಯೋದಲ್ಲಿ ರಾಹುಲ್ ಗಾಂಧಿ ನಗುತ್ತಾ ಸಹೋದರಿ ಪ್ರಿಯಾಂಕಾ ಬಗ್ಗೆ ದೂರು ಹೇಳಿದ್ದಾರೆ. ಹಾಗಾದರೆ ಆದೇನಂತಿರಾ? ಪ್ರಿಯಾಂಕಾ ದೊಡ್ಡ  ಹೆಲಿಕಾಪ್ಟರ್ ನಲ್ಲಿ ಸಾಗುತ್ತಿದ್ದಾರೆ.ಆದರೆ ತಾವು ಸಣ್ಣ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ದೂರು ಹೇಳಿ, ಆದರೆ ಕೊನೆಗೆ ಆಕೆಯನ್ನು ನಾನು ಇಷ್ಟಪಡುತ್ತೇನೆ ಎಂದು ಸಹೋದರಿ ಕುರಿತ ಪ್ರೀತಿಯನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಅಲ್ಲಿದ್ದ ಹೆಲಿಕಾಪ್ಟರ್ ಸಿಬ್ಬಂಧಿಗೆ ಗ್ರೂಪ್ ಫೋಟೋ ಪೋಸ್ ನೀಡಿ ನಂತರ ಇಬ್ಬರು ಬೇರೆ ಬೇರೆ ಕಾರ್ಯಕ್ರಮಕ್ಕೆ ತೆರಳಿದರು.ಈಗ ಈ ವೀಡಿಯೋವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಈ ವಿಡೀಯೋ ಸಾಮಾಜಿಕ ವಲಯದಲ್ಲಿ ಸಾಕಷ್ಟು ವೈರಲ್ ಆಗಿದೆ.

Trending News