ಪಶ್ಚಿಮ ಬಂಗಾಳ: ನಮ್ಮಲ್ಲಿ ಲೋಕಸಭಾ ಚುನಾವಣೆ ಗೆಲ್ಲುವ ಅಭ್ಯರ್ಥಿಗಳಿಲ್ಲ- ದಿಲೀಪ್ ಘೋಷ್

Last Updated : Mar 16, 2019, 01:16 PM IST
ಪಶ್ಚಿಮ ಬಂಗಾಳ: ನಮ್ಮಲ್ಲಿ ಲೋಕಸಭಾ ಚುನಾವಣೆ ಗೆಲ್ಲುವ ಅಭ್ಯರ್ಥಿಗಳಿಲ್ಲ- ದಿಲೀಪ್ ಘೋಷ್  title=
photo:ANI

ನವದೆಹಲಿ: ಪಶ್ಚಿಮ ಬಂಗಾಳದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸಾಕಷ್ಟು ಅಭ್ಯರ್ಥಿಗಳಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಶುಕ್ರವಾರದಂದು  ಹೇಳಿದರು.

"ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ.ಪಂಚಾಯತ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಾವು ಟಿಕೆಟ್ಗಳನ್ನು ನೀಡಿದ್ದೆವು.ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾವು ಸಾಕಷ್ಟು ಅಭ್ಯರ್ಥಿಗಳನ್ನು ಹೊಂದಿಲ್ಲ," ಎಂದು ಘೋಷ್ ಹೇಳಿದರು.

ಇತರ ಪಕ್ಷಗಳಿಂದ ಬಂದಂತಹ ನಾಯಕರು ಪಕ್ಷದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿರುವುದಕ್ಕೆ ಏನಾದರು ಅಸಮಾಧಾನವಿದೆಯೇ? ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅವರು " ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಸಂಗತಿ ಇಲ್ಲ.ಯಾರಾದರೂ ನಮ್ಮ ಅಭಿವೃದ್ದಿ ಪ್ರಕ್ರಿಯೆಯನ್ನು ನೋಡಿ ನಮ್ಮ ಪಕ್ಷಕ್ಕೆ ಸೇರುತ್ತೇವೆ ಎಂದು ಹೇಳಿದಾಗ ಅವರನ್ನು ನಾವೇಗೆ ತಡೆಯಬೇಕು ಎಂದು ಘೋಷ್  ಹೇಳಿದರು.

ಇತ್ತೀಚಿಗೆ ಕಾಂಗ್ರೆಸ್ ,ತೃಣಮೂಲ ಹಾಗೂ ಸಿಪಿಎಂ ನಾಯಕರು ಬಿಜೆಪಿ ಸೇರುತ್ತಿರುವ ಹಿನ್ನಲೆಯಲ್ಲಿ ಅವರ ಹೇಳಿಕೆ ಬಂದಿದೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ 42 ಸ್ಥಾನಗಳಲ್ಲಿ ಕನಿಷ್ಠ 23 ಸ್ಥಾನಗಳನ್ನು ಗೆಲ್ಲುವು ಗುರಿಯನ್ನು ಹಾಕಿಕೊಂಡಿದ್ದಾರೆ.

Trending News