ವಿದ್ಯಾರ್ಥಿಗಳನ್ನು ಕಟ್ಟರ್ ದೇಶ ಭಕ್ತರನ್ನಾಗಿ ಮಾಡಲು ಸಿಎಂ ಕೇಜ್ರಿವಾಲ್ ಪ್ಲಾನ್ ರೆಡಿ...!

ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸುವ ಉದ್ದೇಶದಿಂದ ದೆಹಲಿ ಸರ್ಕಾರವು ಶಾಲೆಗಳಲ್ಲಿ ದೇಶಪ್ರೇಮದ ಬಗ್ಗೆ ಚರ್ಚಿಸಲು ದೈನಂದಿನ ಅಧಿವೇಶನಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.

Last Updated : Mar 14, 2021, 10:44 PM IST
ವಿದ್ಯಾರ್ಥಿಗಳನ್ನು ಕಟ್ಟರ್ ದೇಶ ಭಕ್ತರನ್ನಾಗಿ ಮಾಡಲು ಸಿಎಂ ಕೇಜ್ರಿವಾಲ್ ಪ್ಲಾನ್ ರೆಡಿ...! title=

ನವದೆಹಲಿ: ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸುವ ಉದ್ದೇಶದಿಂದ ದೆಹಲಿ ಸರ್ಕಾರವು ಶಾಲೆಗಳಲ್ಲಿ ದೇಶಪ್ರೇಮದ ಬಗ್ಗೆ ಚರ್ಚಿಸಲು ದೈನಂದಿನ ಅಧಿವೇಶನಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.

ವಿದ್ಯಾರ್ಥಿಗಳನ್ನು ಕಟ್ಟರ್ ದೇಶಭಕ್ತರನ್ನಾಗಿ ಮಾಡುವ ಸಲುವಾಗಿ ದೆಹಲಿ ಶಾಲೆಗಳಲ್ಲಿ ಪ್ರತಿದಿನ ದೇಶಪ್ರೇಮದ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಭಾನುವಾರ (ಮಾರ್ಚ್ 14) ಹೇಳಿದ್ದಾರೆ.

'ನಮ್ಮ ಶಾಲೆಗಳಲ್ಲಿ ದೇಶಪ್ರೇಮವನ್ನು ಕಲಿಸಲಾಗುವುದಿಲ್ಲ. ಶಾಲೆಗಳಲ್ಲಿ ಪ್ರತಿದಿನ ಒಂದು ಗಂಟೆ ದೇಶಭಕ್ತಿ ಕುರಿತು ಚರ್ಚಿಸುವ ಮೂಲಕ ವಿದ್ಯಾರ್ಥಿಗಳನ್ನು ಕಟ್ಟರ್ ದೇಶಭಕ್ತರನ್ನಾಗಿ ಮಾಡಲು ನಿರ್ಧರಿಸಿದ್ದೇವೆ, ಎಂದು ಕೇಜ್ರಿವಾಲ್ ಅವರು ಎಎನ್‌ಐ ಹೇಳಿದ್ದಾರೆ.

ಇದನ್ನೂ ಓದಿ: E- Vehicle: ಈಗ ಇ-ಕಾರ್‌ಗೆ ಕಚೇರಿ, ಮಾಲ್‌ನಲ್ಲೂ ಚಾರ್ಜಿಂಗ್ ಕೇಂದ್ರ

'ಭಗತ್ ಸಿಂಗ್ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಬೋಧನೆಗಳನ್ನು ನಾವು ಪ್ರತಿ ಮನೆಗೆ ಕೊಂಡೊಯ್ಯುತ್ತೇವೆ" ಎಂದು ಅವರು ಹೇಳಿದರು.ದೇವಾಲಯ ಸಿದ್ಧವಾದ ನಂತರ ವೃದ್ಧರನ್ನು ಅಯೋಧ್ಯೆಗೆ ಉಚಿತವಾಗಿ ಕಳುಹಿಸುವ ತನ್ನ ಇತ್ತೀಚಿನ ನಿರ್ಧಾರವನ್ನು ಕೇಜ್ರಿವಾಲ್ ಪುನರುಚ್ಚರಿಸಿದರು.ಅಯೋಧ್ಯೆಯ ರಾಮ್ ದೇವಸ್ಥಾನವು ಒಂದು ಅಥವಾ ಎರಡು ವರ್ಷಗಳಲ್ಲಿ ಸಿದ್ಧವಾಗಲಿದೆ. ಪ್ರಯಾಣ, ವಸತಿ ಮತ್ತು ಆಹಾರ ವೆಚ್ಚಗಳೊಂದಿಗೆ ರಾಮ್ ಲಲ್ಲಾ ಅವರ ದರ್ಶನಕ್ಕಾಗಿ ಹಿರಿಯ ನಾಗರಿಕರನ್ನು ಅಯೋಧ್ಯೆಗೆ ಕರೆದೊಯ್ಯಲು ದೆಹಲಿ ಸರ್ಕಾರ ನಿರ್ಧರಿಸಿದೆ" ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: Mansi Sehgal: APP ಪಾರ್ಟಿ ಸೇರಿದ ಮಿಸ್ ಇಂಡಿಯಾ ದೆಹಲಿ..!

ದೆಹಲಿಯಲ್ಲಿ ಜನರಿಗೆ ಸೇವೆ ಸಲ್ಲಿಸಲು 'ರಾಮ ರಾಜ್ಯ' ಪರಿಕಲ್ಪನೆಯಿಂದ ಪ್ರೇರಿತವಾದ 10 ತತ್ವಗಳನ್ನು ನಾವು ಅನುಸರಿಸುತ್ತಿದ್ದೇವೆ"ಎಂದು ಅವರು ಹೇಳಿದರು.ಆಹಾರ, ಶಿಕ್ಷಣ, ವೈದ್ಯಕೀಯ ಆರೈಕೆ, ವಿದ್ಯುತ್, ನೀರು ಸರಬರಾಜು, ಉದ್ಯೋಗ, ವಸತಿ, ಮಹಿಳಾ ಭದ್ರತೆ ಮತ್ತು ವೃದ್ಧರನ್ನು ಗೌರವಿಸುವುದು ಎಂಬ ಹತ್ತು ತತ್ವಗಳನ್ನು ಅವರು ಪಟ್ಟಿ ಮಾಡಿದರು.

'ದೆಹಲಿಯಲ್ಲಿ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗಬಾರದು.ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಪ್ರತಿ ಮಗುವೂ ಗುಣಮಟ್ಟದ ಶಿಕ್ಷಣ ಪಡೆಯಬೇಕು" ಎಂದು ಕೇಜ್ರಿವಾಲ್ ಹೇಳಿದರು.ಪ್ರತಿಯೊಬ್ಬರೂ ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಸಾಧ್ಯವಾದಷ್ಟು ಉತ್ತಮವಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News