Mansi Sehgal: APP ಪಾರ್ಟಿ ಸೇರಿದ ಮಿಸ್ ಇಂಡಿಯಾ ದೆಹಲಿ..!

2019 ನೇ ಸಾಲಿನ 'ಮಿಸ್ ಇಂಡಿಯಾ ದೆಹಲಿ' ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ.

Last Updated : Mar 1, 2021, 05:11 PM IST
  • 2019 ನೇ ಸಾಲಿನ 'ಮಿಸ್ ಇಂಡಿಯಾ ದೆಹಲಿ' ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ.
  • ಮಿಸ್​ ಇಂಡಿಯಾ ದೆಹಲಿ ಆಡಿಷನ್ಸ್​ನಲ್ಲಿ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದ ಸೆಹಗಲ್.
  • ನೇತಾಜಿ ಸುಭಾಷ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್. ಪದವಿ ಗಳಿಸಿರುವ ಮಾನ್ಸಿ ಸೆಹಗಲ್
Mansi Sehgal: APP ಪಾರ್ಟಿ ಸೇರಿದ ಮಿಸ್ ಇಂಡಿಯಾ ದೆಹಲಿ..! title=

ನವದೆಹಲಿ: 2019 ನೇ ಸಾಲಿನ 'ಮಿಸ್ ಇಂಡಿಯಾ ದೆಹಲಿ' ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ. ಮಿಸ್​ ಇಂಡಿಯಾ ದೆಹಲಿ ಆಡಿಷನ್ಸ್​ನಲ್ಲಿ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದ ಸೆಹಗಲ್, ಈಗ ಎಎಪಿ ಮೂಲಕ ಸಾರ್ವಜನಿಕ ಸೇವೆಯನ್ನು ಕೈಗೆತ್ತಿಕೊಳ್ಳಲು ಅಪೇಕ್ಷಿಸಿದ್ದಾರೆ ಎನ್ನಲಾಗಿದೆ.

ನೇತಾಜಿ ಸುಭಾಷ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್. ಪದವಿ ಗಳಿಸಿರುವ ಮಾನ್ಸಿ ಸೆಹಗಲ್(Mansi Sehgal), ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದವರು. ಸೇಹಗಲ್ ತಮ್ಮದೇ ಒಂದು ಐಟಿ ಸ್ಟಾರ್ಟ್​ಅಪ್​ ಅನ್ನು ಸಹ ನಡೆಸುತ್ತಾರೆ. ಅವರ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಗ್ಗೆ ಟೆಡ್​ಎಕ್ಸ್​ ಸ್ಪೀಕರ್, ಇಂಜಿನಿಯರ್ ಮತ್ತು ಎಂಟ್ರೆಪ್ರೆನರ್ ಎಂದು ಬಣ್ಣಿಸಿಕೊಂಡಿದ್ದಾರೆ.

LPG Cylinder: ನಾಲ್ಕು ದಿನದಲ್ಲಿ ಎರಡನೇ ಬಾರಿಗೆ ಮತ್ತೆ 'LPG ಗ್ಯಾಸ್' ಬೆಲೆ ಏರಿಕೆ..!

ದೆಹಲಿ ಜಲ್ ಬೋರ್ಡ್​ ಉಪಾಧ್ಯಕ್ಷ ಮತ್ತು ಎಎಪಿ ನಾಯಕ ರಾಘವ್ ಛಡ್ಡ ಅವರ ಸಮ್ಮುಖದಲ್ಲಿ ಮಾನಸಿ ಸೆಹಗಲ್ ಎಎಪಿ(AAP Party) ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಛಡ್ಡ, ಪಕ್ಷದ ಸಿದ್ಧಾಂತ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಮಾನಸಿ ಅವರು ಎಎಪಿ ಸೇರುತ್ತಿದ್ದಾರೆ ಎಂದು ಹೇಳಿದ್ದಾರೆ.

Mallikarjun Kharge: 'ನನಗೆ 70ಕ್ಕಿಂತ ಹೆಚ್ಚು ವಯಸ್ಸು, 10-15 ವರ್ಷ ಬಾಕಿ ಉಳಿದಿದೆ, ಯುವಕರಿಗೆ ವ್ಯಾಕ್ಸಿನ್ ಹಾಕಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News