ಏಪ್ರಿಲ್ 14 ರ ನಂತರ ಶಾಲಾ ಕಾಲೇಜುಗಳ ಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಏನ್ ಹೇಳುತ್ತೆ?

ಕರೋನವೈರಸ್ ಹರಡುವಿಕೆಯಿಂದಾಗಿ 21 ದಿನಗಳ ಲಾಕ್‌ಡೌನ್‌ ವಿಧಿಸಿರುವ ಹಿನ್ನಲೆಯಲ್ಲಿ  ಕೇಂದ್ರ ಎಚ್‌ಆರ್‌ಡಿ ಸಚಿವ ರಮೇಶ್ ಪೋಖ್ರಿಯಾಲ್ ಅವರು, ಏಪ್ರಿಲ್ 14 ರ ನಂತರ ಸ್ಥಗಿತಗೊಳಿಸುವಿಕೆಯನ್ನು ವಿಸ್ತರಿಸಿದರೆ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಯಾವುದೇ ನಷ್ಟವನ್ನು ಅನುಭವಿಸದಂತೆ ನೋಡಿಕೊಳ್ಳಲು ಸಚಿವಾಲಯ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

Last Updated : Apr 5, 2020, 05:06 PM IST
ಏಪ್ರಿಲ್ 14 ರ ನಂತರ ಶಾಲಾ ಕಾಲೇಜುಗಳ ಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಏನ್ ಹೇಳುತ್ತೆ? title=
file photo

ನವದೆಹಲಿ: ಕರೋನವೈರಸ್ ಹರಡುವಿಕೆಯಿಂದಾಗಿ 21 ದಿನಗಳ ಲಾಕ್‌ಡೌನ್‌ ವಿಧಿಸಿರುವ ಹಿನ್ನಲೆಯಲ್ಲಿ  ಕೇಂದ್ರ ಎಚ್‌ಆರ್‌ಡಿ ಸಚಿವ ರಮೇಶ್ ಪೋಖ್ರಿಯಾಲ್ ಅವರು, ಏಪ್ರಿಲ್ 14 ರ ನಂತರ ಸ್ಥಗಿತಗೊಳಿಸುವಿಕೆಯನ್ನು ವಿಸ್ತರಿಸಿದರೆ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಯಾವುದೇ ನಷ್ಟವನ್ನು ಅನುಭವಿಸದಂತೆ ನೋಡಿಕೊಳ್ಳಲು ಸಚಿವಾಲಯ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 14 ರ ಆಚೆಗೆ ಶಾಲೆಗಳು, ಕಾಲೇಜುಗಳು ಮುಚ್ಚಲ್ಪಟ್ಟಿದ್ದರೆ ವಿದ್ಯಾರ್ಥಿಗಳಿಗೆ ಯಾವುದೇ ಶೈಕ್ಷಣಿಕ ನಷ್ಟವಾಗದಂತೆ ನೋಡಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಶೈಕ್ಷಣಿಕ ಸಂಸ್ಥೆಗಳು ಕೈಗೊಂಡ ಕ್ರಮಗಳ ಯೋಜನೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

ಸ್ಥಗಿತಗೊಳಿಸುವಿಕೆಯ ವಿಸ್ತರಣೆಯ ಕುರಿತು, ಏಪ್ರಿಲ್ 14 ರಂದು ಸರ್ಕಾರ ಆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಪೋಖ್ರಿಯಾಲ್ ಹೇಳಿದರು."COVID-19 ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಶಾಲೆಗಳು, ಕಾಲೇಜುಗಳನ್ನು ಮತ್ತೆ ತೆರೆಯಬೇಕೆ ಎಂದು ಏಪ್ರಿಲ್ 14 ರಂದು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ" ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ದೃಢಪಡಿಸಿದ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಭಾನುವಾರ (ಏಪ್ರಿಲ್ 5) 3,374 ಕ್ಕೆ ಏರಿದೆ. ಸಾವಿನ ಸಂಖ್ಯೆ 77 ಕ್ಕೆ ಏರಿದೆ. ಅಲ್ಲದೆ, ಸಕ್ರಿಯ COVID-19 ಪ್ರಕರಣಗಳ ಸಂಖ್ಯೆ 3,030 ರಷ್ಟಿದೆ. 266 ಜನರು ಚೇತರಿಸಿಕೊಂಡಿದ್ದಾರೆ .
 

Trending News