ಭಾರತದಲ್ಲಿ Coronavirus ಅಂತ್ಯ ಯಾವಾಗ? ಇಲ್ಲಿದೆ ಉತ್ತರ

ಸಿಂಗಾಪುರದ ಸಂಶೋಧನಕ್ರು ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡಿದ್ದಾರೆ.

Last Updated : Apr 28, 2020, 07:17 PM IST
ಭಾರತದಲ್ಲಿ Coronavirus ಅಂತ್ಯ ಯಾವಾಗ? ಇಲ್ಲಿದೆ ಉತ್ತರ title=

ನವದೆಹಲಿ: ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕೋಪ ನಮ್ಮ-ನಿಮ್ಮೆಲ್ಲರ ಜೀವನಕ್ಕೆ ಬ್ರೇಕ್ ಹಾಕಿದೆ. ರಸ್ತೆಗಳ ಮೇಲೆ ನಿರವ ಮೌನ ಆವರಿಸಿದ್ದು, ಜನರು ತಮ್ಮ ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಇಂತಹುದರಲ್ಲಿ ಎಲ್ಲರ ಬಾಯಿಯಲ್ಲಿ ಒಂದೇ ಪ್ರಶ್ನೆ ಇದೆ. ಅದೇನೆಂದರೆ ಈ ಭಾರತದಲ್ಲಿ ಈ ಕೊರೊನಾ ವೈರಸ್ ಅಂತ್ಯ ಯಾವಾಗ?

ಸಿಂಗಪುರದ ಸಂಶೋಧಕರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಿಂಗಾಪುರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್ (SUTU) ಸಂಶೋಧಕರು ಕೃತಕ ಬುದ್ಧಿಮತ್ತೆಯ ಸಹಾಯದಿಂದ ವಿಶ್ವಾದ್ಯಂತ ಇರುವ ಕೊರೊನಾ ವೈರಸ್ ಪ್ರಕರಣಗಳ ವಿಶ್ಲೇಷಣೆ ನಡೆಸಿ, ಒಟ್ಟು 131 ದೇಶಗಳಲ್ಲಿ ಕೊರೊನಾ ಯಾವಾಗ ಅಂತ್ಯವಾಗುತ್ತದೆ ಎಂಬುದನ್ನು ಹೇಳಿದ್ದಾರೆ.

ಸಂಶೋಧಕರು ಇದಕ್ಕಾಗಿ IRS (Susceptible-Infected-Recovered) ಮಾಡೆಲ್ ನ ಬಳಕೆ ಮಾಡಿದ್ದು, ಇದು ಮಹಾಮಾರಿಯ ಜೀವನಚಕ್ರದ ಕುರಿತು ಅದರ ಅಂತ್ಯದವರೆಗೆ ಅನುಮಾನವನ್ನು ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ವಿಶ್ವಾದ್ಯಂತ ಇರುವ ಕೊರೊನಾ ವೈರಸ್ ಗಳ ದತ್ತಾಂಶಗಳನ್ನು ಅವರ್ ವರ್ಲ್ಡ್ ಇನ್ ವೆಬ್ಸೈಟ್ ನಿಂದ ಪಡೆಯಲಾಗಿದೆ. ಈ ಮಾಡೆಲ್ ಮೂಲಕ ವಿಶ್ವವಿದ್ಯಾಲಯ ಭವಿಷ್ಯವಾಣಿಯೊಂದನ್ನು ಮಾಡಿದೆ. ಈ ಭವಿಷ್ಯವಾಣಿಯ ಪ್ರಕಾರ ಮೇ 21ರೊಳಗೆ ವಿಶ್ವಾದ್ಯಂತ ಸುಮಾರು ಶೇ.97 ರಷ್ಟು ಹಾಗೂ ಡಿಸೆಂಬರ್ 8ರವರೆಗೆ ಶೇ.100 ರಷ್ಟು ಕೊರೊನಾ ವೈರಸ್ ಅಂತ್ಯವಾಗಲಿದೆ ಎಂದು ಹೇಳಲಾಗಿದೆ. ಆದರೆ, ಬಹರೇನ್ ಹಾಗೂ ಕತಾರ್ ಸೇರಿದಂತೆ ಇತರೆ ದೇಶಗಳಲ್ಲಿ ಫೆಬ್ರುವರಿ 2021ರಲ್ಲಿ ಕೊರೊನಾ ವೈರಸ್ ನ ಹೊಸ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದೂ ಕೂಡ ಹೇಳಲಾಗಿದೆ.

ಆದರೆ, ತಾವು ವ್ಯಕ್ತಪಡಿಸಿರುವ ಈ ಅನುಮಾನದ ಸಮಯದಲ್ಲಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದೂ ಕೂಡ ಸಂಶೋಧಕರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  ಇದೇ ವೇಳೆ ಕೊರೊನಾ ವೈರಸ್ ಸಾಂಕ್ರಮಿಕದ ಕುರಿತಾದ ಅಂಕಿ-ಅಂಶಗಳನ್ನು ಪ್ರತಿ ದಿನ ಅಪ್ಡೇಟ್ ಮಾಡಲಾಗುತ್ತದೆ ಹಾಗೂ ಈ ವಿಶ್ಲೇಷಣೆ ಹಾಗೂ ಅನುಮಾನ ಕೇವಲ ಅಭ್ಯಾಸ ಹಾಗೂ ಸಂಶೋಧನೆಯ ಉದ್ದೇಶಕ್ಕಾಗಿ ಮಾತ್ರ ಮಾಡಲಾಗುತ್ತದೆ ಎಂದು 'ಅವರ್ ವರ್ಲ್ಡ್ ಇನ್' ವೆಬ್ಸೈಟ್ ಸ್ಪಷ್ಟಪಡಿಸಿದೆ.

ಯಾವ ದೇಶದಲ್ಲಿ ಕೊರೊನಾ ವೈರಸ್ ಯಾವಾಗ ಅಂತ್ಯವಾಗಲಿದೆ
ಭಾರತೆ-21 ಮೇ
ಅಮೇರಿಕ- ಆಗಸ್ಟ್ ಕೊನೆಯ ವಾರ(ಮೇ 11ರವರೆಗೆ ಶೇ.97 ರಷ್ಟು ಅಂತ್ಯವಾಗಲಿದೆ)
ಇಟಲಿ -ಆಗಸ್ಟ್ ಕೊನೆಯ ವಾರ (ಮೇ 7ರವರೆಗೆ ಶೇ.97ರಷ್ಟು)
ಇರಾನ್-10 ಮೇ
ಟರ್ಕಿ- 15 ಮೇ
ಯುಕೆ- 9 ಮೇ
ಸ್ಪೇನ್-ಮೇ ಆರಂಭದಲ್ಲಿ
ಫ್ರಾನ್ಸ್ -3 ಮೇ
ಜರ್ಮನಿ -30 ಏಪ್ರಿಲ್ 

Trending News