Charanjit Singh Channi: ಯಾರು ಈ ಚರಣಜಿತ್ ಸಿಂಗ್ ಚನ್ನಿ ?

48 ವರ್ಷದ ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.ಪಕ್ಷದ ಹಿರಿಯ ನಾಯಕರು ಅದರ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿದೆ.

Written by - Zee Kannada News Desk | Last Updated : Sep 19, 2021, 08:38 PM IST
  • 48 ವರ್ಷದ ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.
  • ಪಕ್ಷದ ಹಿರಿಯ ನಾಯಕರು ಅದರ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿದೆ.
Charanjit Singh Channi: ಯಾರು ಈ ಚರಣಜಿತ್ ಸಿಂಗ್ ಚನ್ನಿ ? title=

ನವದೆಹಲಿ: 48 ವರ್ಷದ ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.ಪಕ್ಷದ ಹಿರಿಯ ನಾಯಕರು ಅದರ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿದೆ.

ಇದನ್ನೂ ಓದಿ: "ಉತ್ತರ ಪ್ರದೇಶದಲ್ಲಿ ನಾವು ಮೈತ್ರಿಮಾಡಿಕೊಳ್ಳಲು ಮುಕ್ತ ಮನಸ್ಸು ಹೊಂದಿದ್ದೇವೆ"

ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಲಿದ್ದಾರೆ,ಇದು ರಾಜ್ಯದ ಜನಸಂಖ್ಯೆಯ 1/3 ಭಾಗವನ್ನು ಒಳಗೊಂಡಿದೆ.ಅವರು ರಾಮದಾಸಿಯಾ ಸಿಖ್ ಸಮುದಾಯಕ್ಕೆ ಸೇರಿದರಾಗಿದ್ದಾರೆ.

ಚನ್ನಿ (Charanjit Singh Channi) ಚಮಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ ಮತ್ತು ರಾಜ್ಯದ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು.ಅವರು ಪಂಜಾಬ್ ವಿಧಾನಸಭೆಯಲ್ಲಿ 2015 ರಿಂದ 2016 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.ಅವರನ್ನು ಮಾರ್ಚ್ 2017 ರಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಲಾಯಿತು ಮತ್ತು ಆದರೆ ಸಿಂಗ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ನಾಯಕರಲ್ಲಿ ಅವರು ಒಬ್ಬರಾಗಿದ್ದರು.

ಇದನ್ನೂ ಓದಿ: Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ

ಅವರು ಮುಂದಿನ ಪಂಜಾಬ್ ಸಿಎಂ ಆಗುವ ಸುದ್ದಿಯನ್ನು ರಾಜ್ಯ ಉಸ್ತುವಾರಿ ಹರೀಶ್ ರಾವತ್ ಘೋಷಿಸಿದರು,'ಚರಣ್ಜಿತ್ ಸಿಂಗ್ ಚನ್ನಿ ಪಂಜಾಬಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ"ಎಂದು ಘೋಷಿಸಿದರು.

ಪಂಜಾಬ್ ಸಿಎಂ ಆಗಿ ಚನ್ನಿಯವರ ನೇಮಕಾತಿಯು ಆಶ್ಚರ್ಯಕರವಾಗಿತ್ತು,ಇದಕ್ಕೂ ಮೊದಲು ಸುಖಜಿಂದರ್ ಸಿಂಗ್ ರಾಂಧವಾ ಅವರನ್ನು ಆ ಸ್ಥಾನಕ್ಕೆ ಅತ್ಯುನ್ನತ ಅಭ್ಯರ್ಥಿಯಾಗಿ ಪರಿಗಣಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News