ನಿರ್ಭಯಾ 'ಹ'ತ್ಯಾಚಾರಿಗಳಿಗೆ ಪವನ್ ಜಲ್ಲಾದ್ ಅವರಿಂದಲೇ ಏಕೆ ಗಲ್ಲುಶಿಕ್ಷೆ ?

ದೆಹಲಿಯ ತಿಹಾರ್ ಜೈಲು ಆಡಳಿತ ಮಂಡಳಿ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಪವನ್ ಜಲ್ಲಾದ್ ಅವರಿಂದಲೇ ಗಲ್ಲುಶಿಕ್ಷೆ ವಿಧಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ತಿಳಿದುಬಂದಿದೆ.

Updated: Jan 9, 2020 , 05:50 PM IST
ನಿರ್ಭಯಾ 'ಹ'ತ್ಯಾಚಾರಿಗಳಿಗೆ ಪವನ್  ಜಲ್ಲಾದ್ ಅವರಿಂದಲೇ ಏಕೆ ಗಲ್ಲುಶಿಕ್ಷೆ ?

ನವದೆಹಲಿ: ತಿಹಾರ್ ಜೈಲಿನ ಆಡಳಿತ ಮಂಡಳಿ ಉತ್ತರ ಪ್ರದೇಶದ ಪೋಲೀಸ್ ಮಹಾನಿರ್ದೇಶಕರ ಕಚೇರಿಗೆ ಎರಡನೆಯ ಬಾರಿಗೆ ಪತ್ರವೊಂದನ್ನು ರವಾನಿಸಿದ್ದು, ಪತ್ರದಲ್ಲಿ ನಿರ್ಭಯಾ ಪ್ರಕರಣದ 'ಹ'ತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ತರಬೇತಿ ಪಡೆದ ಪವನ್ ಜಲ್ಲಾದ್ ಅವರಿಗೆಯೇ ಮೊದಲು ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದೆ. ಈ ಗೌಪ್ಯ ಪತ್ರದಲ್ಲಿ ಮೀರತ್ ನಲ್ಲಿರುವ ಪವನ್ ಜಲ್ಲಾದ್ ಅವರ ಸಾಧನೆಗಳ ಕುರಿತು ಕೂಡ ತಿಹಾರ್ ಆಡಳಿತ ಮಂಡಳಿ ಉಲ್ಲೇಖಿಸಿದೆ ಎನ್ನಲಾಗಿದೆ.

ದೆಹಲಿಯ ತಿಹಾರ್ ಜೈಲು ಆಡಳಿತ ಮಂಡಳಿ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಪವನ್ ಜಲ್ಲಾದ್ ಅವರಿಂದಲೇ ಗಲ್ಲುಶಿಕ್ಷೆ ವಿಧಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ತಿಳಿದುಬಂದಿದೆ. ೨೦ ದಿನಗಳ ಹಿಂದೆಯೂ ಕೂಡ ತಿಹಾರ್ ಜೈಲಿನ ಆಡಳಿತ ಮಂಡಳಿ ಉತ್ತರ ಪ್ರದೇಶದ ಕಾರಾಗ್ರಹ ವಿಭಾಗಕ್ಕೆ ಪತ್ರ ಬರೆದು ಈ ಕುರಿತು ಆಗ್ರಹಿಸಿತ್ತು. ಅಷ್ಟೇ ಅಲ್ಲ ಒಂದು ವೇಳೆ ಪವನ್ ಅವರು ನಿವೃತ್ತಿ ಹೊಂದಿದ್ದರೆ ಅವರ ಜಾಗದಲ್ಲಿ ಇನ್ನೋರ್ವ ನಿಪುಣ ಗಲ್ಲುಶಿಕ್ಷೆ ನೀಡುವವರ ಹೆಸರನ್ನೂ ಸೂಚಿಸಲು ಈ ಗೌಪ್ಯ ಪತ್ರದಲ್ಲಿ ತಿಳಿಸಿತ್ತು. ಆದರೆ, ಈ ಕೆಲಸಕ್ಕಾಗಿ ಪವನ್ ಜಲ್ಲಾದ್ ಅವರಿಗೆಯೇ ಮೊದಲ ಪ್ರಾಶಸ್ತ್ಯ ನೀಡುವಂತೆ ಯುಪಿ ಸರ್ಕಾರ ಹಾಗೂ ಕಾರಾಗೃಹ ವಿಭಾಗಕ್ಕೆ ಹೇಳಲಾಗಿತ್ತು. ವರದಿಗಳ ಪ್ರಕಾರ ತಿಹಾರ್ ಕಾರಾಗೃಹ ಆಡಳಿತ ಮಂಡಳಿ ಈ ಕೆಳಗೆ ಹೇಳಿದ ಕಾರಣಗಳ ಕಾರಣಗಳ ಕಾರಣ ಪ್ರಾಶಸ್ತ್ಯ ನೀಡಲು ಬಯಸುತ್ತಿದೆ ಎನ್ನಲಾಗಿದೆ.

- ಪೂರ್ವಜರ ಕಾಲದಿಂದಲೂ ಪವನ್ ಜಲ್ಲಾದ್ ವೃತ್ತಿಯಲ್ಲಿದ್ದಾರೆ
- ಶಾರೀರಿಕವಾಗಿ ತುಂಬಾ ಬಲಿಷ್ಠವಾಗಿದ್ದಾರೆ.
- ಪೂರ್ವಜರ ಜತೆಗೂಡಿ ಅವರು ಗಲ್ಲುಶಿಕ್ಷೆ ನೀಡುವ ಮತ್ತು ನೀಡಿಸುವ ಕೆಲಸ ಮಾಡಿದ್ದಾರೆ.
- ಪವನ್ ಅವರ ದೃಷ್ಟಿ ಕೂಡ ಸರಿಯಾಗಿದೆ. 
- ಇಂತಹ ಪರಿಸ್ಥಿತಿಯಲ್ಲಿ ಗಲ್ಲುಶಿಕ್ಷೆ ನೀಡುವವರನ್ನು ಬಿಗಿ ಭದ್ರತೆಯಲ್ಲಿ ಗೌಪ್ಯವಾಗಿ ಅವರ ಮನೆಯಿಂದ ಕರೆದುಕೊಂಡು ಹೋಗಿ ಮತ್ತೆ ಮನೆಗೆ         ಬಿಡಲಾಗುತ್ತದೆ.
- ಸದ್ಯ ಪವನ್ ಜಲ್ಲಾದ್ ಮೀರತ್ ನಲ್ಲಿ ವಾಸವಾಗಿದ್ದು, ಮೀರತ್ ದೆಹಲಿಗೆ ತುಂಬಾ ಹತ್ತಿರವಾಗಿರುವುದರಿಂದ ತಿಹಾರ್ ಜೈಲಿಗೆ ಅವರನ್ನು     ಕರೆದುಕೊಂಡು ಹೋಗುವಲ್ಲಿ ಜೈಲಿನ ಆಡಳಿತ ಮಂಡಳಿಗೆ ಹೆಚ್ಚಿನ ರಿಸ್ಕ್ ಇರುವುದಿಲ್ಲ. 
- ಅಗತ್ಯ ಬಿದ್ದರೆ ದೆಹಲಿ ಪೋಲೀಸರ ಭದ್ರತೆ ಪಡೆದು ತಿಹಾರ್ ಜೈಲು ಆಡಳಿತ ಮಂಡಳಿ ಪವನ್ ಅವರನ್ನು ದೆಹಲಿಗೆ ಕರೆಸಬಹುದಾಗಿದೆ.