OTC Drug Policy: ಕಿರಾಣಿ ಅಂಗಡಿಗಳಲ್ಲಿಯೂ ಲಭ್ಯವಾಗಲಿದೆಯೇ ಕೆಮ್ಮು, ಶೀತ, ನೆಗಡಿಯ ಔಷಧಿಗಳು

OTC Drug Policy: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಿರುವ ಔಷಧಿಗಳು ಓವರ್ ದಿ ಕೌಂಟರ್ (OTC) ಪಟ್ಟಿಯಲ್ಲಿ ಲಭ್ಯವಿರಲಿದ್ದು ವಿಶೇಷ ಸಮಿತಿಯು ಯಾವ ಹೊಸ ನಿಯಮಗಳನ್ನು ರೂಪಿಸುತ್ತಿದೆ ಎಂದು ತಿಳಿಯಿರಿ. 

Written by - Yashaswini V | Last Updated : Apr 18, 2024, 09:02 AM IST
  • ಯುಎಸ್‌ನಂತಹ ಹಲವು ದೇಶಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಸಾಮಾನ್ಯವಾಗಿ ಬಳಸುವ ಔಷಧಿಗಳ ಮಾರಾಟವನ್ನು ಅನುಮತಿಸಲಾಗುತ್ತದೆ.
  • ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮ್ಮ ವರ್ಗೀಕರಣ, ಉಪಯೋಗಗಳು ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಹೊಂದಿವೆ.
OTC Drug Policy: ಕಿರಾಣಿ ಅಂಗಡಿಗಳಲ್ಲಿಯೂ ಲಭ್ಯವಾಗಲಿದೆಯೇ ಕೆಮ್ಮು, ಶೀತ, ನೆಗಡಿಯ ಔಷಧಿಗಳು  title=

OTC Drug Policy Rules: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಿರುವ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಕೆಮ್ಮು ಮತ್ತು ನೆಗಡಿ ಔಷಧಿಗಳು ಇತರ ಹಲವು ದೇಶಗಳಲ್ಲಿ ಲಭ್ಯವಿರುವಂತೆ ಭಾರತದಲ್ಲಿಯೂ ಸಾಮಾನ್ಯ ಕಿರಾಣಿ ಅಂಗಡಿಗಳಲ್ಲಿ ಲಭ್ಯವಾಗಬೇಕೇ?  ಭಾರತದಲ್ಲಿ  OTC ಅಥವಾ ಓವರ್-ದಿ-ಕೌಂಟರ್ ಔಷಧ ನೀತಿಯನ್ನು ರೂಪಿಸುತ್ತಿರುವ ಸಮಿತಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಪ್ರತಿ ಹಳ್ಳಿಯಲ್ಲೂ ಕೂಡ ಕೆಮ್ಮು, ನೆಗಡಿ, ಜ್ವರದ ಔಷಧ ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಆಗಬೇಕು. ಈ ಔಷಧಿಗಳನ್ನು ಪಡೆಯಲು ಯಾವುದೇ ವೈದ್ಯರ ಪ್ರಿಸ್ಕ್ರಿಪ್ಷನ್ (Doctor's prescription) ತೆಗೆದುಕೊಳ್ಳುವ ಅಗತ್ಯತೆ ಬೇಕಾಗುವುದಿಲ್ಲ ಎಂಬ ಬಗ್ಗೆ  ಭಾರತ ಸರ್ಕಾರ ರಚಿಸಿರುವ OTC ಸಮಿತಿಯು ಗಂಭೀರ ಚರ್ಚೆಯನ್ನು ನಡೆಸುತ್ತಿದೆ. 

ವಾಸ್ತವವಾಗಿ, ಯುಎಸ್‌ನಂತಹ ಹಲವು ದೇಶಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ (In grocery stores) ಸಾಮಾನ್ಯವಾಗಿ ಬಳಸುವ ಔಷಧಿಗಳ ಮಾರಾಟವನ್ನು (Sale of commonly used medicines) ಅನುಮತಿಸಲಾಗುತ್ತದೆ. ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮ್ಮ ವರ್ಗೀಕರಣ, ಉಪಯೋಗಗಳು ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಹೊಂದಿವೆ.

ಇದನ್ನೂ ಓದಿ- ISRO : ಭಾರತೀಯರು ಚಂದ್ರನ ಮೇಲೆ ಇಳಿಯುವವರೆಗೂ ಚಂದ್ರಯಾನ ಮುಂದುವರಿಯಲಿದೆ : ಇಸ್ರೋ ಅಧ್ಯಕ್ಷ
 
ವಿದೇಶಗಳಂತೆ, ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಒಟಿಸಿ ಔಷಧಿಗಳು ಕಿರಾಣಿ ಅಂಗಡಿಗಳಲ್ಲಿ ಲಭ್ಯವಾಗುವಂತೆ (OTC medications are available at grocery stores) ಮಾಡಲು ನಿಯಮವನ್ನು ಸುಧಾರಿಸಲು ಚಿಂತನೆ ನಡೆದಿದೆ. ಆದರೂ, ಈ ಬಗ್ಗೆ ಇನ್ನೂ ಕೂಡ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. 

ಓವರ್-ದಿ-ಕೌಂಟರ್ ಔಷಧಿ ಎಂದರೇನು? 
ಓವರ್-ದಿ-ಕೌಂಟರ್ ಔಷಧಿಗಳು ಎಂದರೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಮಾರಾಟ ಮಾಡಲು ಅನುಮತಿಸಲಾಗುವ ಔಷಧಿಗಳು. 

ಇದನ್ನೂ ಓದಿ- Daily GK Quiz: ವಿಶ್ವದ ಅತಿ ದೊಡ್ಡ ಸರೀಸೃಪ ಯಾವುದು?
 
ಗಮನಾರ್ಹವಾಗಿ, ಈ ವರ್ಷ ಫೆಬ್ರವರಿಯಲ್ಲಿ, ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅತುಲ್ ಗೋಯೆಲ್ ಅವರು ಭಾರತದ OTC ಔಷಧ ನೀತಿಯನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸಿದರು. ಸಮಿತಿಯು ಇತ್ತೀಚೆಗೆ ಕೌಂಟರ್‌ನಲ್ಲಿ ಮಾರಾಟ ಮಾಡಬಹುದಾದ ಔಷಧಿಗಳ ಮೊದಲ ಪಟ್ಟಿಯನ್ನು ಸಲ್ಲಿಸಿದೆ. ಈ ಬಗ್ಗೆ ಮುಂದಿನವಾರ ಕೂಲಂಕುಷವಾಗಿ ಚರ್ಚೆ ನಡೆಯಲಿದ್ದು, ಬಳಿಕ ಸಾಮಾನ್ಯ ಅಂಗಡಿಗಳಲ್ಲೂ ಒಟಿಸಿ ಔಷಧಿಗಳ ಲಭ್ಯತೆಯ ಬಗ್ಗೆ ಸ್ಪಷ್ಟ ಸೂಚನೆಗಳು ಹೊರಬೀಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News