'ಇವಿಎಂ'ನಿಂದಾಗಿ ಲಂಡನ್, ಅಮೇರಿಕಾದಲ್ಲೂ ಕಮಲ ಅರಳಬಹುದು: ಶಿವ ಸೇನೆ

ಮತ್ತೊಮ್ಮೆ ಕೇಂದ್ರ ಸರ್ಕಾರದ ಮೇಲೆ ದಾಳಿ ಮಾಡಿದ ಶಿವಸೇನೆ.

Last Updated : Feb 11, 2019, 11:44 AM IST
'ಇವಿಎಂ'ನಿಂದಾಗಿ ಲಂಡನ್, ಅಮೇರಿಕಾದಲ್ಲೂ ಕಮಲ ಅರಳಬಹುದು: ಶಿವ ಸೇನೆ title=

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ ವಿರುದ್ಧ ಶಿವಸೇನೆ ಮತ್ತೊಮ್ಮೆ ದಾಳಿ ಮಾಡಿದೆ. ದೋಷಯುಕ್ತ EVM ಬಳಸಲ್ಪಟ್ಟಲ್ಲಿ ಲಂಡನ್, ಅಮೇರಿಕಾದಲ್ಲೂ ಕಮಲ (ಭಾರತೀಯ ಜನತಾ ಪಕ್ಷದ) ಅರಳಬಹುದು ಎಂದು ವ್ಯಂಗ್ಯವಾಡಿದೆ.

ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ದಾಳಿ ನಡೆಸಿರುವ  ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಕಮಲ ಪಡೆಯ ನಾಯಕರಲ್ಲಿರುವ ಅತಿಯಾದ ಆತ್ಮವಿಶ್ವಾಸ, ಅವರ ಬೇಜವಾಬ್ದಾರಿ ಹೇಳಿಕೆಗಳು, ತೀವ್ರವಾಗುತ್ತಿರುವ ರಫೇಲ್ ವಿವಾದ, ದೋಷಯುಕ ಇವಿಎಂ ಮೊದಲಾದವುಗಳೇ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದ್ದಾರೆ.

'ಮಹಾರಾಷ್ಟ್ರದ ಒಟ್ಟು  48 ಲೋಕಸಭಾ ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆಲ್ಲುವ ಅತಿಯಾದ ಆತ್ಮವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹಾಗಾಗಿ ಬಿಜೆಪಿ ಚುನಾವಣಾ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡುವ ಭಂಡತನ ತೋರುತ್ತಿದೆ. ಅದರ ಈ ನಿಲುವು ಪಕ್ಷಕ್ಕೆ ಮುಳುವಾಗಲಿದೆ' ಎಂದು ಎಚ್ಚರಿಸಿದ ಠಾಕ್ರೆ, ದೋಷಯುಕ್ತ ಇವಿಎಂ ಮೇಲಿನ ವಿಶ್ವಾಸದಿಂದ ಲಂಡನ್, ಅಮೇರಿಕಾದಲ್ಲೂ ಕಮಲ ಅರಳಬಹುದು ಎಂದಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಭರವಸೆಯಿಂದ ಆಡಳಿತ ಪಕ್ಷದವರು ಏಕೆ ವಿಫಲರಾಗಿದ್ದಾರೆ ಎಂದು ಪ್ರಶ್ನಿಸಿದ ಠಾಕ್ರೆ, ಅಯೋಧ್ಯೆಯಲ್ಲೇಕೆ ಕಮಲ ಅರಳಲಿಲ್ಲ ಎಂದು ವ್ಯಂಗ್ಯವಾಡಿದರಲ್ಲದೆ, ತಮ್ಮನ್ನು ತಾವು ಜವಾಬ್ದಾರಿಯುತವಾಗಿ ನಡೆಸಿಕೊಳ್ಳುವಂತೆ ಕೇಸರಿ ಮುಖಂಡರಿಗೆ ಸಲಹೆ ನೀಡಿದರು.
 

Trending News