ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್,ಬ್ಯಾಟಿಂಗ್ ಎರಡರಲ್ಲೂ ವಿಶ್ವದಾಖಲೆ ಬರೆದ ಜಸ್ಪ್ರೀತ್ ಬುಮ್ರಾ !ದಿಗ್ಗಜ್ಜರನ್ನೇ ಸರಿಗಟ್ಟಿದ ಫಾಸ್ಟ್ ಬೌಲರ್

Jasprit Bumrah records : ಭಾರತದ ಲೆಜೆಂಡರಿ ಬೌಲರ್ ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು  ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಬುಮ್ರಾ ಅದ್ಭುತ ದಾಖಲೆ ಮಾಡಿದ್ದಾರೆ.    

Written by - Ranjitha R K | Last Updated : Sep 20, 2024, 04:03 PM IST
  • ಲೆಜೆಂಡರಿ ಬೌಲರ್ ಜಸ್ಪ್ರೀತ್ ಬುಮ್ರಾ ದಾಖಲೆ
  • ಟೆಸ್ಟ್ ಕ್ರಿಕೆಟ್ ನಲ್ಲಿ ಮಹಾನ್ ದಾಖಲೆ
  • 400 ವಿಕೆಟ್‌ಗಳ ಗಡಿ ದಾಟಿದ ಬೌಲರ್
 ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್,ಬ್ಯಾಟಿಂಗ್ ಎರಡರಲ್ಲೂ ವಿಶ್ವದಾಖಲೆ ಬರೆದ ಜಸ್ಪ್ರೀತ್ ಬುಮ್ರಾ !ದಿಗ್ಗಜ್ಜರನ್ನೇ ಸರಿಗಟ್ಟಿದ ಫಾಸ್ಟ್ ಬೌಲರ್  title=

Jasprit Bumrah records :ಭಾರತದ ಲೆಜೆಂಡರಿ ಬೌಲರ್ ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿದ್ದಾರೆ.ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ದಾಖಲೆ ಮಾಡಿದ್ದಾರೆ. 

30ರ ಹರೆಯದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ '400'ರ ಮ್ಯಾಜಿಕಲ್ ಫಿಗರ್ ಅನ್ನು ಮುಟ್ಟಿದ್ದಾರೆ.ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳ ಗಡಿಯನ್ನು ಮುಟ್ಟಿದ್ದಾರೆ. ಜಸ್ಪ್ರೀತ್ ಬುಮ್ರಾ ಈಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪಡೆದ ಶ್ರೇಷ್ಠ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ : 2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್

ಜಸ್ಪ್ರೀತ್ ಬುಮ್ರಾ ಭಾರತ ಪರ ಇದುವರೆಗೆ 70 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ.ಇದಲ್ಲದೇ ಟೀಂ ಇಂಡಿಯಾ ಪರ 36 ಟೆಸ್ಟ್ ಪಂದ್ಯಗಳಲ್ಲಿ 162 ವಿಕೆಟ್ ಪಡೆದಿದ್ದಾರೆ.ಭಾರತ ಪರ 89 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ.ಒಟ್ಟಾರೆ,ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಕಬಳಿಸಿದ ಶ್ರೇಷ್ಠ ದಾಖಲೆಯನ್ನು ಬುಮ್ರಾ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 10 ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್
1. ಅನಿಲ್ ಕುಂಬ್ಳೆ - 953 ವಿಕೆಟ್
2. ರವಿಚಂದ್ರನ್ ಅಶ್ವಿನ್ - 744 ವಿಕೆಟ್
3. ಹರ್ಭಜನ್ ಸಿಂಗ್ - 707 ವಿಕೆಟ್
4. ಕಪಿಲ್ ದೇವ್ - 687 ವಿಕೆಟ್
5. ಜಹೀರ್ ಖಾನ್ - 597 ವಿಕೆಟ್ 
6. ರವೀಂದ್ರ ಜಡೇಜಾ - 568 ವಿಕೆಟ್
7. ಜಾವಗಲ್ ಶ್ರೀನಾಥ್ - 551 ವಿಕೆಟ್
8. ಮೊಹಮ್ಮದ್ ಶಮಿ - 448 ವಿಕೆಟ್
9. ಇಶಾಂತ್ ಶರ್ಮಾ - 434 ವಿಕೆಟ್
10. ಜಸ್ಪ್ರೀತ್ ಬುಮ್ರಾ - 400 ವಿಕೆಟ್ 

ಇದನ್ನೂ ಓದಿ :  ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !

ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿ ವಿಶಿಷ್ಟ ದಾಖಲೆ  : 
ಭಾರತದ ದಿಗ್ಗಜ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು 35 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಜುಲೈ 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಐದನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವರ್ಡ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ  35 ರನ್ ಗಳಿಸಿದರು.ಈ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ಬಾರಿಸಿದ್ದು 29 ರನ್. ಉಳಿದ 6 ರನ್ ಹೆಚ್ಚುವರಿಯಾಗಿ ಬಂದಿತ್ತು. ಟೆಸ್ಟ್ ಪಂದ್ಯದ ಒಂದು ಓವರ್‌ನಲ್ಲಿ 35 ರನ್ ಗಳಿಸಿರುವುದು ಭಾರತದ ದಾಖಲೆಯಾಗಿದೆ.ಈ ಮೂಲಕ ಜಸ್ಪ್ರೀತ್ ಬುಮ್ರಾ ಹಾರ್ದಿಕ್ ಪಾಂಡ್ಯ ದಾಖಲೆಯನ್ನು ಮುರಿದಿದ್ದಾರೆ.2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಹಾರ್ದಿಕ್ ಪಾಂಡ್ಯ ಒಂದೇ ಓವರ್‌ನಲ್ಲಿ 26 ರನ್ ಗಳಿಸಿದ್ದರು. 

ಯಾವುದೇ ಮೈದಾನದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ: 
ಜಸ್ಪ್ರೀತ್ ಬುಮ್ರಾ ವಿಶ್ವದ ಯಾವುದೇ ಮೈದಾನದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.ಜಸ್ಪ್ರೀತ್ ಬುಮ್ರಾ ಅವರು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು 23 ಜನವರಿ 2016 ರಂದು ಪ್ರಾರಂಭಿಸಿದರು. ಬುಮ್ರಾ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರಾಗಿದ್ದು, ತಂಡವನ್ನು ಗೆಲುವಿನ ದಾದಾ ಸೇರಿಸಬಲ್ಲ ಬೌಲರ್ ಎಂದೇ ಹೆಸರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News