ಮಾಜಿ ಪತಿಯ ಕುಟುಂಬ ಸೇರಿದಂತೆ 139 ಜನರ ಮೇಲೆ ಅತ್ಯಾಚಾರ ಆರೋಪ ಎಸಗಿದ ಮಹಿಳೆ

ಕಳೆದ ಕೆಲವು ವರ್ಷಗಳಲ್ಲಿ ತನ್ನ ಮೇಲೆ 139 ಜನರು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Last Updated : Aug 22, 2020, 09:40 AM IST
  • ಮಾಜಿ ಪತಿಯ ಕುಟುಂಬವೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಆರೋಪ
  • ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ
ಮಾಜಿ ಪತಿಯ ಕುಟುಂಬ ಸೇರಿದಂತೆ 139 ಜನರ ಮೇಲೆ ಅತ್ಯಾಚಾರ ಆರೋಪ ಎಸಗಿದ ಮಹಿಳೆ title=

ಹೈದರಾಬಾದ್. ತೆಲಂಗಾಣ (Telangana) ರಾಜಧಾನಿ ಹೈದರಾಬಾದ್‌ನಲ್ಲಿ 139 ಜನರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿದ ನಂತರ ತನಿಖೆ ಆರಂಭಿಸಲಾಗಿದೆ ಎಂದು ಪಂಜಗುಟ್ಟ ಪೊಲೀಸ್ ಠಾಣೆ ತಿಳಿಸಿದೆ. ಮಹಿಳೆಯನ್ನು ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲಾಗಿದೆ. ಮದುವೆಯಾದ ಒಂದು ವರ್ಷದ ನಂತರ 2010 ರಲ್ಲಿ ವಿಚ್ಛೇದನ ಪಡೆದಿರುವುದಾಗಿ ಮಹಿಳೆ ಹೇಳಿದ್ದಾರೆ. 

ತನ್ನ ಮಾಜಿ ಪತಿಯ ಕುಟುಂಬ ಸದಸ್ಯರು ಸಹ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ದೂರಿನ ಪ್ರಕಾರ ಕಳೆದ ವರ್ಷಗಳಲ್ಲಿ 139 ಜನರು ವಿವಿಧ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ. ಆರೋಪಿಗಳ ಭಯದಿಂದಾಗಿ ಆಕೆಗೆ ಇಷ್ಟು ದಿನ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಹೈದರಾಬಾದ್‌ನಲ್ಲಿ ಅತ್ಯಾಚಾರ ಪ್ರಕರಣ :
28 ನವೆಂಬರ್ 2019 ರಂದು ಮಹಿಳಾ ವೈದ್ಯರ ಮೇಲೆ ಅತ್ಯಾಚಾರ ಮಾಡಿದ ನಂತರ ಪೆಟ್ರೋಲ್ ಹಾಕಿ ಸುಟ್ಟುಹಾಕಲಾಯಿತು. ಇದರಲ್ಲಿ 4 ಆರೋಪಿಗಳನ್ನು ಗುರುತಿಸಿದ ನಂತರ ಹೈದರಾಬಾದ್ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ವಿಚಾರಣೆ ವೇಳೆ ನಾಲ್ವರು ಆರೋಪಿಗಳು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ.

ಅತ್ಯಾಚಾರ ಕುರಿತಂತೆ ಈ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು:
ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ದಂಡ ಸಂಹಿತೆಯಲ್ಲಿ 376 ಮತ್ತು 375 ರ ಅಡಿಯಲ್ಲಿ ಶಿಕ್ಷೆ ವಿಧಿಸುವ ಅವಕಾಶವಿದೆ. ಯಾವುದೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಸೆಕ್ಷನ್ 376ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಸಾಬೀತಾದ ಅಪರಾಧದ ಸಂದರ್ಭದಲ್ಲಿ ತಪ್ಪಿತಸ್ಥರಿಗೆ ಕನಿಷ್ಠ ಐದು ವರ್ಷ ಮತ್ತು ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ. ಈ ಅಪರಾಧವನ್ನು ವಿವಿಧ ಸಂದರ್ಭಗಳು ಮತ್ತು ವರ್ಗದ ಪ್ರಕಾರ 375, 376, 376 ಎ, 376 ಬಿ, 376 ಸಿ, 376 ಡಿ ವಿಭಾಗಗಳಾಗಿ ವಿಂಗಡಿಸಲಾಗಿದೆ.
 

Trending News