ಅತ್ಯಾಚಾರ ಮಾಡಿದ ಮಾವನಿಗೆ ಸೊಸೆ ಮಾಡಿದ್ದೇನು ಗೊತ್ತಾ?

ಈ ಘಟನೆಯು ಉತ್ತರಪ್ರದೇಶದ ಪಿಲಿಬಿಟ್'ನ ಮಧೋತಂಡ ಪೋಲಿಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ. 

Last Updated : Mar 5, 2018, 02:18 PM IST
ಅತ್ಯಾಚಾರ ಮಾಡಿದ ಮಾವನಿಗೆ ಸೊಸೆ ಮಾಡಿದ್ದೇನು ಗೊತ್ತಾ?  title=

ಲಖ್ನೋ: ತನ್ನ ಮೇಲೆ ಸತತ ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದರು ಎಂದು ಆರೋಪಿಸಿ ಉತ್ತರಪ್ರದೇಶದ 26 ವರ್ಷದ ಮಹಿಳೆಯೊಬ್ಬಳು ತನ್ನ ಮಾವನನ್ನು ಸಾಯುವಂತೆ ಹೊಡೆದಿದ್ದಾಳೆ. 

ಈ ಘಟನೆಯು ಉತ್ತರಪ್ರದೇಶದ ಪಿಲಿಬಿಟ್'ನ ಮಧೋತಂಡ ಪೋಲಿಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ. 

ತನ್ನ ಮಾವನನ್ನು(ಗಂಡನ ತಂದೆ) ಕೋಲಿನಿಂದ ಸಾಯುವಂತೆ ಹೊಡೆದಿದ್ದು, ಈ ಕೃತ್ಯಕ್ಕೆ ಆಕೆಯ  ಆಕೆಯ ಪತಿಯೂ ಸಾಥ್ ನೀಡಿರುವುದಾಗಿ ತಿಳಿದುಬಂದಿದೆ. ಕೊಲೆಯ ನಂತರ ಆ ದಂಪತಿಗಳು  ಪೊಲೀಸರಿಗೆ ಶರಣಾಗಿದ್ದಾರೆ. 

ಆರೋಪಿಯ ಹಿರಿಯ ಮಗ ಈ ಘಟನೆಯ ಕುರಿತು ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. 

ಮಹಿಳೆಯ ಹೇಳಿಕೆ ಪ್ರಕಾರ, ಶುಕ್ರವಾರ ಆಕೆಯ ಗಂಡ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಆಕೆಯ ಮಾವ ಅತ್ಯಾಚಾರ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗಿದ ಪತಿ, ತನ್ನ ತಂದೆಯು ತನ್ನ ಹೆಂಡತಿಯನ್ನು ಬಲಾತ್ಕಾರ ಮಾಡುತ್ತಿದ್ದುದನ್ನು ಕಣ್ಣಾರೆ ನೋಡಿರುವುದಾಗಿ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. 

ಈ ಸಂಬಂಧ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Trending News