ಅಸ್ತಮಾದಿಂದ ಬಳಲುತ್ತಿದ್ದರೂ 50ನೇ ವಯಸ್ಸಿನಲ್ಲಿ ಪರ್ವತವೇರಿ, ಸಮುದ್ರದಾಳಕ್ಕೆ ಧುಮುಕಿದ ರೋಚಕ ಕಥೆ!

ಜೀವನದಲ್ಲಿ ನಾನು ಸಾಧಿಸುವುದರ ಜೊತೆಗೆ ನನ್ನಂತಹ ಅನೇಕ ಜನರಿಗೆ ಸ್ಫೂರ್ತಿ ನೀಡುವ ಏನನ್ನಾದರೂ ಮಾಡಲು ಬಯಸುತ್ತೇನೆ ಎಂದು ಅನುಪಮಾ ಹೇಳಿದ್ದಾರೆ.

Written by - Zee Kannada News Desk | Last Updated : May 3, 2022, 06:38 PM IST
  • ಅಸ್ತಮಾದಿಂದ ಬಳಲುತ್ತಿದ್ದರೂ 50ನೇ ವಯಸ್ಸಿನಲ್ಲಿ ಸ್ಫೂರ್ತಿದಾಯಕ ಸಾಧನೆ
  • ಪರ್ವತವೇರಿ, ಸಮುದ್ರದಾಳಕ್ಕೆ ಧುಮುಕಿದ ಸಾಧಕಿಯ ರೋಚಕ ಕಥೆ
  • ಅಸ್ತಮಾವನ್ನು ಸೋಲಿಸಿ ಅನೇಕರಿಗೆ ಧೈರ್ಯ ತುಂಬುತ್ತಿರುವ ಅನುಪಮಾ
ಅಸ್ತಮಾದಿಂದ ಬಳಲುತ್ತಿದ್ದರೂ 50ನೇ ವಯಸ್ಸಿನಲ್ಲಿ ಪರ್ವತವೇರಿ, ಸಮುದ್ರದಾಳಕ್ಕೆ ಧುಮುಕಿದ ರೋಚಕ ಕಥೆ! title=
ಸಾಧಕಿಯ ರೋಚಕ ಕಥೆ

ನವದೆಹಲಿ: ಸಾಧಿಸಿದರೆ ಸಬಳವನ್ನೂ ನುಂಗಬಹುದು… ನಿಜ ತಾನೇ? ಇದು ಸಾಧಕರ ಕಥೆ. ತಾನು ಏನಾಗಬೇಕು ಎಂಬ ಗುರಿ ಸ್ಪಷ್ಟವಾಗಿದ್ದರೆ, ಛಲ ಜೊತೆಗಿದ್ದರೆ ಈ ಜಗತ್ತಿನಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ ಎನ್ನುವುದನ್ನು ಅಸ್ತಮಾದಿಂದ ಬಳಲುತ್ತಿದ್ದರೂ 50ನೇ ವಯಸ್ಸಿನಲ್ಲಿ ಪರ್ವತವೇರಿ, ಸಮುದ್ರದಾಳಕ್ಕೆ ಧುಮುಕಿದ ಅನುಪಮಾ ಅವರ ರೋಚಕ ಕಥೆಯೇ ನಿದರ್ಶನವಾಗಿದೆ.

ವಿಶ್ವ ಅಸ್ತಮಾ ದಿನ(World Asthma Day)ದ ಪ್ರಯುಕ್ತ ಸಾಧಕಿ, LetsEduvate B2B ಮಾರ್ಕೆಟಿಂಗ್‍ನ ತರಬೇತಿ ಮುಖ್ಯಸ್ಥೆ ಅನುಪಮಾ ಅವರ ಸಾಧನೆಯ ರೋಚಕ ಕಥೆಯನ್ನು ಇಲ್ಲಿ ನೀಡಲಾಗಿದೆ. ಹೋರಾಟದ ಬದುಕಿನ ಬಗ್ಗೆ ಅವರ ಮಾತುಗಳಲ್ಲಿಯೇ ತಿಳಿದುಕೊಳ್ಳಿರಿ. ‘ಅಸ್ತಮಾ ರೋಗದಿಂದ ಬಳಲುತ್ತಿದ್ದ ಸಮಯ ನನ್ನ ಜೀವನದ ಅತ್ಯಂತ ಕಠಿಣ ಹಂತವಾಗಿತ್ತು. ಸ್ಟೀರಾಯ್ಡ್‌ಗಳು ಮತ್ತು ಹತ್ತಾರು ಔಷಧಿಗಳಿಲ್ಲದೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವ ಎಲ್ಲ ಭರವಸೆಗಳನ್ನು ನಾನು ಕೈಬಿಟ್ಟಿದ್ದೆ. ಆದರೆ, ಅದೃಷ್ಟವಶಾತ್ ಕಾಲ ಕಳೆದಂತೆ ಉತ್ತಮ ಜೀವನಶೈಲಿ ರೂಢಿಸಿಕೊಂಡ ನಂತರ ನನ್ನ ಸ್ಥಿತಿ ಸುಧಾರಿಸಿತು. ಪದವಿ ಪಡೆದ ನಂತರ 1988ರಲ್ಲಿ ಮೊದಲ ಬಾರಿಗೆ ಅಸ್ತಮಾ ಕಾಣಿಸಿಕೊಂಡಿತ್ತು. ಔಷಧಿಗಳಿಂದಾಗಿ 1 ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾದವು. ಆದರೂ 1993ರಲ್ಲಿ ಮದುವೆಯಾದ ನಂತರ ಮಾಲಿನ್ಯದ ಕಾರಣದಿಂದ ಅಸ್ತಮಾ ಮರುಕಳಿಸಿ ನನ್ನನ್ನು ಮತ್ತೆ ಕಾಡಿತು. 50 ಮೀಟರ್ ನಡೆದರೆ ಸಾಕು ಉಸಿರುಗಟ್ಟಿ, ವಿಪರೀತ ಸುಸ್ತಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ನನ್ನ ಜೀವನದ ಪಯಣದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಬಲವಾದ ಸ್ಟೀರಾಯ್ಡ್ ಡೋಸ್‌ಗಳಿಂದ ನನ್ನ ದೇಹದ ತೂಕ 20 ಕೆಜಿಯಷ್ಟು ಹೆಚ್ಚಾಗಿತ್ತು. ಕುಟುಂಬದ ಎಲ್ಲರಿಗೂ ನನ್ನನ್ನು ಆ ಸ್ಥಿತಿಯಲ್ಲಿ ನೋಡುವುದು ಕಷ್ಟಕರವಾಗಿತ್ತು. ಅದರಲ್ಲೂ ವಿಶೇಷವಾಗಿ ನನ್ನ ಮಗಳು ನನಗೆ ಉಬ್ಬಸ ದಾಳಿಯಾದಾಗೆಲ್ಲ ಭಯಪಡುತ್ತಿದ್ದಳು. ನಾನು 2014ರಲ್ಲಿ ತರಬೇತಿ ವಿಭಾಗದ ನಿರ್ವಹಕಿಯಾಗಿ ಆರ್ಕಿಡ್ಸ್ - ದಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಸೇರಿದೆ. ಇದು ನನ್ನ ಕನಸಿನ ಕೆಲಸವಾಗಿತ್ತು.ಆದರೆ, ನನ್ನ ಆರೋಗ್ಯ ಸಮಸ್ಯೆಗಳ ಕಾರಣ ಕೇವಲ 6 ತಿಂಗಳಲ್ಲಿ ಕೆಲಸ ಬಿಡಬೇಕಾಯಿತು.

ಇದನ್ನೂ ಓದಿ: IAS Success Story: ಕೊನೆ ಯತ್ನದವರೆಗೂ ಛಲಬಿಡದೆ ಐಎಎಸ್ ಅಧಿಕಾರಿಯಾದ ನಮಿತಾ ಶರ್ಮಾ

Anxiety ಮತ್ತು ಒತ್ತಡದ ಕಾರಣದಿಂದ ನನಗೆ ಅಸ್ತಮಾ ಇರುವುದಾಗಿ ಕುಟುಂಬದ ವೈದ್ಯರು ಹೇಳಿದರು. ಹೀಗಾಗಿ ನಾನು ಯೋಗವನ್ನು ಪುನರಾರಂಭಿಸಿದೆ. ನನ್ನ ಸ್ಟೀರಾಯ್ಡ್ ಅಗತ್ಯವು ತೀವ್ರವಾಗಿ ಕಡಿಮೆಯಾದ ಕಾರಣ ತೀರಾ ಅಪರೂಪಕ್ಕೊಮ್ಮೆ ಇನ್ಹೇಲರ್‌ಗಳನ್ನು ಬಳಸುತ್ತಿದ್ದೆ. ಇದರಿಂದ ನನ್ನ ಬದುಕು ಬದಲಾಗುವ ಹಂತಕ್ಕೆ ಬಂದು ತಲುಪಿತು.

ಅಸ್ತಮಾ ರೋಗ ತೀವ್ರವಾಗಿ ನನ್ನನ್ನು ಕಾಡುತ್ತಿದ್ದಾಗ ಹೇಗಾದರೂ ಸರಿ ಇದರಿಂದ ಮುಕ್ತಿ ಹೊಂದಬೇಕೆಂದು ತೀರ್ಮಾನಿಸಿದೆ. ಭಾರತೀಯ ಸೇನಾ ಅಧಿಕಾರಿಯ ಮಗಳು ಮತ್ತು ಪತ್ನಿಯಾಗಿರುವ ನಾನು ನನ್ನ ಸಮಸ್ಯೆಯನ್ನು ಪರಿಹರಿಸಲು ಶಪಥ ಮಾಡಿದೆ. ಪ್ರತಿದಿನ ಪ್ರಾಣಾಯಾಮ ಹಾಗೂ ಈಜುವ ಮೂಲಕ ಕೇವಲ 6 ತಿಂಗಳಲ್ಲಿ ನನ್ನ ಶ್ವಾಸಕೋಶದ ಮೇಲಿನ ಅಸ್ತಮಾ ಹಿಡಿತ ಕಡಿಮೆಯಾಯಿತು. 2015ರಲ್ಲಿ ನಾನು ನನ್ನ ಮೊದಲ ಹಾಫ್-ಮ್ಯಾರಥಾನ್ ಓಡಿದೆ. ನಂತರ ಹಿಂತಿರುಗಿ ನೋಡಲೇ ಇಲ್ಲ. ನನ್ನ ಸವಾಲುಗಳೇ ನನ್ನ ಸಾಧನೆಗಳಾದವು ಅಂತಾ ಅನುಪಮಾ ಹೇಳಿಕೊಂಡಿದ್ದಾರೆ.

  

ನನ್ನ ಜೀವನದಲ್ಲಿ ನಾನು ಸಾಧಿಸುವುದರ ಜೊತೆಗೆ ನನ್ನಂತಹ ಅನೇಕ ಜನರಿಗೆ ಸ್ಫೂರ್ತಿ ನೀಡುವ ಏನನ್ನಾದರೂ ಮಾಡಲು ಬಯಸುತ್ತೇನೆ. 50ನೇ ವರ್ಷದ ಹುಟ್ಟುಹಬ್ಬಕ್ಕೆಂದು ನಾನು ಪರ್ವತಾರೋಹಣ ಮಾಡಲು ಹಾಗೂ ಸಮುದ್ರದ ಆಳಕ್ಕೆ ಧುಮುಕಲು ನಿರ್ಧರಿಸಿದೆ. ಮೊದಲಿನದಕ್ಕೆ  ನಾನು ಅನುಭವಿ ಚಾರಣಿಗರ ಗುಂಪನ್ನು ಸೇರಿಕೊಂಡೆ. ಅವರು ಹಿಮಾಲಯವನ್ನು ಏರುವ ಮೊದಲು ನನಗೆ ತರಬೇತಿ  ನೀಡಿದರು. 2ನೇಯದ್ದಕ್ಕಾಗಿ ನಾನು ಸ್ಕೂಬಾ ಡೈವಿಂಗ್ ಕೋರ್ಸ್‌ಗೆ ನೋಂದಾಯಿಕೊಂಡೆ. ಫೆಬ್ರವರಿ 27ರಂದು ನನ್ನ 50ನೇ ಹುಟ್ಟುಹಬ್ಬಕ್ಕಾಗಿ Deep-Sea Diving ಪ್ರಮಾಣಪತ್ರಕ್ಕಾಗಿ ಅಂಡಮಾನ್‌ಗೆ ಹೊರಟೆ. 1 ತಿಂಗಳ ನಂತರ ಮಾರ್ಚ್ 27ರಂದು ನಾನು ಹಿಮಾಲಯದ ಶಿಖರಗಳಲ್ಲಿ ಒಂದಾದ ಸಂದಕ್ಫು (3,636 ಮೀಟರ್) ಏರಿದೆ.

ಇದನ್ನೂ ಓದಿ: Madhya Pradesh: ಏಕಕಾಲದಲ್ಲಿ ಮೂವರನ್ನು ವರಿಸಿದ 42ರ ಭೂಪತಿ ಗಂಡು

ಈಗ ನಾನು ಆರ್ಕಿಡ್ಸ್‍ಗೆ ಮರಳಿದ್ದೇನೆ. ನಾನು ಇಷ್ಟಪಡುವ ಕೆಲಸಕ್ಕೆ ಮರಳಿದ್ದೇನೆ. ಕಳೆದ 1 ವರ್ಷದಿಂದ ನಾನು ತರಬೇತಿ ಕಾರ್ಯಾಗಾರಗಳನ್ನು ನೋಡಿಕೊಳ್ಳುತ್ತಿದ್ದೇನೆ. ಇದು ನನಗೆ ಸಾಕಷ್ಟು ತೃಪ್ತಿ ನೀಡಿದೆ. ದೇವ್ ಆನಂದ್ ಅವರ ಹಮ್ ದೋನೋ ಚಿತ್ರದ ‘ಮೈನ್ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ’ ಹಾಡು ನನ್ನ ಜೀವನದ ಉದ್ದೇಶವನ್ನು ತಿಳಿಸುತ್ತದೆ. ಎಲ್ಲವೂ ಕೂಡ ನಮ್ಮ ಮನಸಿನ ಮೇಲೆ ನಿಂತಿದೆ. 50+ ವರ್ಷದಲ್ಲಿ ನಾನು ಸಣ್ಣ ಜೀವನಶೈಲಿಯ ಬದಲಾವಣೆಯಿಂದ ಮತ್ತು ಬದ್ಧತೆಯಿಂದ ಆಸ್ತಮಾವನ್ನು ಸೋಲಿಸಲು ಸಾಧ್ಯವಾದರೆ, ಯಾರಾದರೂ ಏನೂ ಬೇಕಾದರೂ ಮಾಡಬಹುದು ಹಾಗೂ ಸಾಧಿಸಬಹುದು ಎಂದು ಅನುಪಮಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News