World Food Safety Day 2023 : ವಿಶ್ವ ಆಹಾರ ಸುರಕ್ಷತಾ ದಿನ ಆಚರಣೆಯ ಉದ್ದೇಶ, ಇತಿಹಾಸ ತಿಳಿಯಿರಿ

World Food Safety Day 2023 :ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರತಿ ವರ್ಷ ಜೂನ್ 7 ರಂದು ಆಚರಿಸಲಾಗುತ್ತದೆ.  ವಿಶ್ವ ಆಹಾರ ಸುರಕ್ಷತಾ ದಿನದ ಹಿನ್ನೆಲೆಯಲ್ಲಿ ಈ ದಿನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Jun 7, 2023, 01:32 PM IST
  • ಇಂದು ವಿಶ್ವ ಆಹಾರ ಸುರಕ್ಷತಾ ದಿನ
  • ವಿಶ್ವ ಆಹಾರ ಮತ್ತು ಸುರಕ್ಷತಾ ದಿನದ ಇತಿಹಾಸ ಏನು ಗೊತ್ತಾ
  • ಈ ದಿನ ಆಚರಣೆಯ ಹಿಂದಿನ ಉದ್ದೇಶ ಏನು ?
World Food Safety Day 2023 : ವಿಶ್ವ ಆಹಾರ ಸುರಕ್ಷತಾ ದಿನ ಆಚರಣೆಯ ಉದ್ದೇಶ, ಇತಿಹಾಸ ತಿಳಿಯಿರಿ  title=

World Food Safety Day 2023 : ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರತಿ ವರ್ಷ ಜೂನ್ 7 ರಂದು ಆಚರಿಸಲಾಗುತ್ತದೆ. 2019 ರಲ್ಲಿ, ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಸಹಯೋಗದೊಂದಿಗೆ ಮೊದಲ ಬಾರಿಗೆ ಆಚರಿಸಲಾಯಿತು. ಈ ದಿನ ಆಚರಣೆ ಮೂಲಕ ಉತ್ತಮ ಆಹಾರ ಪದ್ಧತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ನಿರ್ಧರಿಸಲಾಯಿತು. ಪ್ರತಿ ವರ್ಷ ಈ ದಿನಕ್ಕೆ ವಿಭಿನ್ನ ಥೀಮ್ ಅನ್ನು ಹೊಂದಿಸಲಾಗುತ್ತದೆ. ವಿಶ್ವ ಆಹಾರ ಸುರಕ್ಷತಾ ದಿನದ ಹಿನ್ನೆಲೆಯಲ್ಲಿ ಈ ದಿನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇಲ್ಲಿದೆ. 

ವಿಶ್ವ ಆಹಾರ ಮತ್ತು ಸುರಕ್ಷತಾ ದಿನದ ಇತಿಹಾಸ :
ಜುಲೈ 2017 ರಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (FAO) ಸಮ್ಮೇಳನದ 40 ನೇ ಅಧಿವೇಶನದಲ್ಲಿ, ವಿಶ್ವ ಆಹಾರ ಮತ್ತು ಸುರಕ್ಷತಾ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. WHO ಇದಕ್ಕೆ  ತನ್ನ ಬೆಂಬಲ ಸೂಚಿಸಿತು. ನಂತರ ಈ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇರಿಸಲಾಯಿತು. 20 ಡಿಸೆಂಬರ್ 2018 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಈ ಪ್ರಸ್ತಾಪಕ್ಕೆ ಮುದ್ರೆಯೊತ್ತಿತು.  ಈ ಮೂಲಕ  ಜೂನ್ 7 ರಂದು ವಿಶ್ವ ಆಹಾರ ಮತ್ತು ಸುರಕ್ಷತೆ ದಿನ ಆಚರಿಸುವ ಬಗ್ಗೆ  ಘೋಷಣೆ ಮಾಡಲಾಯಿತು. WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಸಹಯೋಗದೊಂದಿಗೆ 7 ಜೂನ್ 2019 ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಈ ದಿನಾಂಕದಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ : ಅಪಾಯಕಾರಿ ರೂಪ ಪಡೆಯಲಿರುವ 'ಬಿಪರ್ಜೋಯ್ ಚಂಡಮಾರುತ" ಎರಡು ದಿನ ಬಿಡದೇ ಸುರಿಯುವುದು ಮಳೆ

ವಿಶ್ವ ಆಹಾರ ಸುರಕ್ಷತಾ ದಿನಾಚರಣೆಯ ಉದ್ದೇಶ : 
WHO ಪ್ರಕಾರ, ಕಲುಷಿತ ಆಹಾರದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದೊಡ್ಡ  ಅಪಾಯ ಉಂಟಾಗುತ್ತಿದ್ದು, ಅವರ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಆಹಾರದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಈ ಉದ್ದೇಶದಿಂದ, ಪ್ರತಿ ವರ್ಷ WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ ಒಟ್ಟಾಗಿ ಈ ದಿನವನ್ನು ಆಚರಿಸುತ್ತವೆ.

2023 ರ ಥೀಮ್ ಏನು ? : 
ಪ್ರತಿ ವರ್ಷ ಈ ದಿನವನ್ನು ಆಚರಿಸಲು ಒಂದು ಥೀಮ್ ಅನ್ನು ಹೊಂದಿಸಲಾಗುತ್ತದೆ. ವಿಶ್ವ ಆಹಾರ ಮತ್ತು ಸುರಕ್ಷತಾ ದಿನದ 2023 ರ  ಥೀಮ್ Food standards save lives ಎನ್ನುವುದು.  ಈ  ಥೀಮ್ ಮೂಲಕ ಆಹಾರಕ್ಕಾಗಿ ಹೊಂದಿಸಲಾದ ಮಾನದಂಡಗಳ ಪ್ರಾಮುಖ್ಯತೆಯನ್ನು ಜನರು ಅರ್ಥಮಾಡಿಕೊಳ್ಳಬೇಕು. 'ಸುರಕ್ಷಿತ ಆಹಾರ, ಉತ್ತಮ ಆರೋಗ್ಯ ಎನ್ನುವುದು  2022 ರ ಥೀಮ್ ಆಗಿತ್ತು. ಈ ವಿಷಯದ ಮೂಲಕ, ಉತ್ತಮ ಆರೋಗ್ಯಕ್ಕಾಗಿ ಶುದ್ಧ ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಜನರಿಗೆ ವಿವರಿಸಿ ಹೇಳಲಾಗಿತ್ತು. 

ಇದನ್ನೂ ಓದಿ Balasore Train Accident: 40 ಜನರ ಶರೀರದ ಮೇಲೆ ಒಂದೂ ಗಾಯದ ಗುರುತಿಲ್ಲ... ಆದರೂ ಅವರು ಮೃತಪಟ್ಟಿದ್ದಾರೆ... ಅದ್ಹೇಗೆ ಸಾಧ್ಯ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News