PPF ಖಾತೆಯಲ್ಲಿ ಕೇವಲ 1% ಬಡ್ಡಿದರದಲ್ಲಿ ಸಿಗಲಿದೆ ಸಾಲ

ಪಿಪಿಎಫ್ ಖಾತೆಯನ್ನು ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ತೆರೆಯಬಹುದು.  

Last Updated : May 29, 2020, 12:50 PM IST
PPF ಖಾತೆಯಲ್ಲಿ ಕೇವಲ 1% ಬಡ್ಡಿದರದಲ್ಲಿ ಸಿಗಲಿದೆ ಸಾಲ title=

ನವದೆಹಲಿ: ಕರೋನಾವೈರಸ್ ಮಟ್ಟಹಾಕುವ ಸಲುವಾಗಿ ದೇಶಾದ್ಯಂತ ಜಾರಿಗೆ ತಂದಿರುವ ಲಾಕ್​ಡೌನ್ ನಿಂದಾಗಿ ಜನರು ಹಲವು ರೀತಿಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಹಲವರು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಮಗೂ ಹಣಕಾಸಿನ ಅವಶ್ಯಕತೆ ಇದ್ದರೆ ನೀವು   ಪಿಪಿಎಫ್ (PPF) ಖಾತೆಯಿಂದ ಕೇವಲ 1% ಬಡ್ಡಿಗೆ ಸಾಲ ತೆಗೆದುಕೊಳ್ಳಬಹುದು. 

ಅತ್ಯಂತ ಕಡಿಮೆ ಬಡ್ಡಿದರ :
ಪಿಪಿಎಫ್ ಖಾತೆಯ ದೊಡ್ಡ ವೈಶಿಷ್ಟ್ಯವೆಂದರೆ ಅದರಲ್ಲಿ ಠೇವಣಿ ಇರಿಸಿದ ಮೊತ್ತದ ಆಧಾರದ ಮೇಲೆ ನೀವು ಸಾಲ ತೆಗೆದುಕೊಳ್ಳಬಹುದು. ಈ ಸಾಲದ ಮೇಲೆ ನೀವು ಪಾವತಿಸಬೇಕಾದ ಬಡ್ಡಿ ವೈಯಕ್ತಿಕ ಸಾಲ, ಚಿನ್ನದ ಸಾಲ ಮತ್ತು ಇತರ ರೀತಿಯ ಸಾಲಕ್ಕಿಂತ ಕಡಿಮೆ. 

ಮುಖ್ಯ ಹಣಕಾಸು ಯೋಜಕ ಮಣಿಕರ್ನ್ ಸಿಂಘಾಲ್ ಅವರ ಪ್ರಕಾರ ಪಿಪಿಎಫ್‌ನಲ್ಲಿ ಠೇವಣಿ ಇರಿಸಿದ ಮೊತ್ತಕ್ಕೆ ಕೇವಲ ಒಂದು ಶೇಕಡಾ ಬಡ್ಡಿ ಮಾತ್ರ ಪಾವತಿಸಬೇಕಾಗುತ್ತದೆ. ಆದಾಗ್ಯೂ ಇಲ್ಲಿ ನೆನಪಿನಲ್ಲಿಡಬೇಕಾದ ಒಂದು ವಿಷಯವೆಂದರೆ ಸಾಲವು ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತದ ಆಧಾರದ ಮೇಲೆ ಮಾತ್ರ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ನಿಮ್ಮ ಆದಾಯದ ಆಧಾರದ ಮೇಲೆ ಸಾಲವನ್ನು ನೀಡುತ್ತವೆ.

ಪಿಪಿಎಫ್ ಖಾತೆಯಿಂದ ಸಾಲ ತೆಗೆದುಕೊಳ್ಳಲು ನಿಯಮಗಳು ಮತ್ತು ಷರತ್ತುಗಳನ್ನು ಸಹ ಅನುಸರಿಸಬೇಕಾಗುತ್ತದೆ. ಮೊದಲ ನಿಯಮವೆಂದರೆ ಪಿಪಿಎಫ್ ಖಾತೆಗೆ ಕನಿಷ್ಠ ಮೂರು ವರ್ಷ ವಯಸ್ಸಾಗಿರಬೇಕು. ಎರಡನೆಯ ನಿಯಮವೆಂದರೆ ಸಾಲವು ಖಾತೆಯ ಮೂರು ವರ್ಷದಿಂದ ಆರು ವರ್ಷಗಳ ನಡುವೆ ಮಾತ್ರ ಲಭ್ಯವಿರುತ್ತದೆ. ನೀವು ಡಿಸೆಂಬರ್ 2017ರಲ್ಲಿ ಪಿಪಿಎಫ್ ಖಾತೆಯನ್ನು ತೆರೆದಿದ್ದರೆ ನೀವು ಅದನ್ನು 2019 ರಿಂದ 2022 ರವರೆಗೆ ಮಾತ್ರ ತೆಗೆದುಕೊಳ್ಳಬಹುದು.

ಠೇವಣಿಯ 25 ಪ್ರತಿಶತವನ್ನು ಮಾತ್ರ ಸಾಲ:
ಇದಲ್ಲದೆ ಮೂರನೆಯ ನಿಯಮವೆಂದರೆ ನೀವು ಖಾತೆಯಲ್ಲಿ ಠೇವಣಿ ಇರಿಸಿದ ಒಟ್ಟು ಮೊತ್ತದ ಕೇವಲ 25 ಪ್ರತಿಶತವನ್ನು ಮಾತ್ರ ಸಾಲವಾಗಿ ಪಡೆಯುತ್ತೀರಿ. ನೀವು ಮೂರನೇ ವರ್ಷದಲ್ಲಿ ಸಾಲ ತೆಗೆದುಕೊಂಡಿದ್ದರೆ ಅದನ್ನು ಎರಡು ವರ್ಷಗಳ ನಂತರ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದಕ್ಕಾಗಿ ಮಾರ್ಚ್ ಕೊನೆಯ ದಿನವನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ನೀವು ಏಪ್ರಿಲ್‌ನಿಂದ ಯಾವುದೇ ತಿಂಗಳು ಸಾಲಕ್ಕೆ ಅರ್ಜಿ ಸಲ್ಲಿಸಿದರೂ ಮಾರ್ಚ್ 31 ರವರೆಗೆ ಠೇವಣಿ ಇರಿಸಿದ ಮೊತ್ತವನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ.

ಪಿಪಿಎಫ್ ಖಾತೆಯಲ್ಲಿ ಸಾಲ ತೆಗೆದುಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ ಈ ಸಾಲದ ದೊಡ್ಡ ಆಕರ್ಷಣೆಯೆಂದರೆ ಬಡ್ಡಿ ಕಡಿತ. ನಿಯಮದ ಪ್ರಕಾರ ನೀವು ಪಿಪಿಎಫ್ ಖಾತೆಗೆ 8 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯುತ್ತಿದ್ದರೆ, ನೀವು ತೆಗೆದುಕೊಂಡ ಸಾಲದ ಮೇಲೆ ನೀವು ಶೇಕಡಾ 9 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಂದರೆ ನಿಮ್ಮ ಉಳಿತಾಯದ ಬಡ್ಡಿಗಿಂತ 1 ಶೇಕಡಾ ಹೆಚ್ಚು. ಈ ಹಿಂದೆ ಅದು ಶೇಕಡಾ 2 ರಷ್ಟು ಹೆಚ್ಚಿತ್ತು. ಅಂದರೆ ನೀವು ಕೇವಲ 1 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಖಾತೆಯಲ್ಲಿರುವ ಬಾಕಿ ಮೊತ್ತಕ್ಕೆ ನೀವು ಪ್ರಸ್ತುತ ಇರುವ ಬಡ್ಡಿಯನ್ನು ಪಡೆಯುತ್ತೀರಿ.
 

Trending News