Zee Hindustan Kannada App: ಈ ಒಂದು ಆ್ಯಪ್ ಮೂಲಕ ಇಡೀ ಜಗತ್ತಿನ ದರ್ಶನ ನಿಮ್ಮ ಮುಂದೆ

ದಿನನಿತ್ಯ ಲಕ್ಷಾಂತರ ಘಟನೆಗಳು ನಮ್ಮ ಕಣ್ಣ ಮುಂದೆ ಹಾದುಹೋಗುತ್ತವೆ, ಇಂತಹ ಅನೇಕ ಘಟನೆಗಳನ್ನು ಓದುಗರಿಗೆ ತಿಳಿಸಲು ಸಾಕಷ್ಟು ಆಪ್ ಗಳು ಕೂಡ ಲಭ್ಯ ಇವೆ.ಆದರೆ ಅಂತಹ ಘಟನೆ ಹೇಗೆ ಸಂಭವಿಸಿತು ಎಂದೂ ನಿಮಗೆ ಯಾರೂ ನಿಮಗೆ ಹೇಳುತ್ತಿಲ್ಲವೇ? ಇಂತಹ ಹಲವು ಸುದ್ದಿಗಳ ಹಿಂದಿರುವ ಕಾರಣಗಳನ್ನು ತಿಳಿಸಲು ಜೀ ಹಿಂದೂಸ್ತಾನ್‌ ದ ಹೊಸ ಸುದ್ದಿ ಆ್ಯಪ್ ಬಂದಿದೆ. ಇದು ಕೇವಲ ಸುದ್ದಿಗಳನ್ನು ಮಾತ್ರ ತಿಳಿಸುವುದಿಲ್ಲ ಅದರ ಜೊತೆಗೆ ಸಂಪೂರ್ಣ ವಿಶ್ಲೇಷಣೆಯನ್ನು ಸಹ ನೀಡುತ್ತದೆ.

Last Updated : Sep 15, 2020, 06:43 PM IST
 Zee Hindustan Kannada App: ಈ ಒಂದು ಆ್ಯಪ್ ಮೂಲಕ ಇಡೀ ಜಗತ್ತಿನ ದರ್ಶನ ನಿಮ್ಮ ಮುಂದೆ  title=

ನವದೆಹಲಿ: ದಿನನಿತ್ಯ ಲಕ್ಷಾಂತರ ಘಟನೆಗಳು ನಮ್ಮ ಕಣ್ಣ ಮುಂದೆ ಹಾದುಹೋಗುತ್ತವೆ, ಇಂತಹ ಅನೇಕ ಘಟನೆಗಳನ್ನು ಓದುಗರಿಗೆ ತಿಳಿಸಲು ಸಾಕಷ್ಟು ಆಪ್ ಗಳು ಕೂಡ ಲಭ್ಯ ಇವೆ.ಆದರೆ ಅಂತಹ ಘಟನೆ ಹೇಗೆ ಸಂಭವಿಸಿತು ಎಂದೂ ನಿಮಗೆ ಯಾರೂ ನಿಮಗೆ ಹೇಳುತ್ತಿಲ್ಲವೇ? ಇಂತಹ ಹಲವು ಸುದ್ದಿಗಳ ಹಿಂದಿರುವ ಕಾರಣಗಳನ್ನು ತಿಳಿಸಲು ಜೀ ಹಿಂದೂಸ್ತಾನ್‌ ದ ಹೊಸ ಸುದ್ದಿ ಆ್ಯಪ್ ಬಂದಿದೆ. ಇದು ಕೇವಲ ಸುದ್ದಿಗಳನ್ನು ಮಾತ್ರ ತಿಳಿಸುವುದಿಲ್ಲ ಅದರ ಜೊತೆಗೆ ಸಂಪೂರ್ಣ ವಿಶ್ಲೇಷಣೆಯನ್ನು ಸಹ ನೀಡುತ್ತದೆ.

ಈ ಆಪ್ ಈಗ ಭಾರತದ 5 ಪ್ರಮುಖ ಭಾಷೆಗಳಲ್ಲಿ ಲಭ್ಯವಿದೆ:

ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವೈವಿಧ್ಯಮಯ ಸಂಸ್ಕೃತಿಗಳಿಂದ ತುಂಬಿದೆ. ಜೀ ಹಿಂದೂಸ್ತಾನ್ ಆ್ಯಪ್ ಅಂತಹ ಎಲ್ಲ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ವಿನಮ್ರ ಪ್ರಯತ್ನವಾಗಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಆ್ಯಪ್ ಲಭ್ಯವಿದೆ.ಈ ವಿಭಿನ್ನ ಭಾಷೆಗಳ ಮೂಲಕ ನೀವು ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಲ್ಲಾ ಸ್ಥಳೀಯ ಸುದ್ದಿಗಳ ಜೊತೆಗೆ ಇಡೀ ದೇಶ ಮತ್ತು ವಿದೇಶಗಳ ಪ್ರಮುಖ ಚಟುವಟಿಕೆಗಳ ಮೇಲೆ ಕಣ್ಣಾಡಿಸಬಹುದು.

ಓದುಗರಿಗೆ ಅನುಕೂಲಕ್ಕೆ ತಕ್ಕಂತೆ ಡೌನ್ಲೋಡ್:

ಜೀ ಹಿಂದೂಸ್ತಾನ್ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಅದನ್ನು ಡೌನ್‌ಲೋಡ್ ಮಾಡಬಹುದು.

ಆಂಡ್ರಾಯ್ಡ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಜೀ ಹಿಂದೂಸ್ತಾನ್ ಕನ್ನಡ ಆ್ಯಪ್ ನ್ನು ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್  ಮಾಡಿ

-https://play.google.com/store/apps/details?id=com.zeenews.hindustan&hl=e...

ಐಒಎಸ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಜೀ ಹಿಂದೂಸ್ತಾನ್‌ ವಿಶೇಷ ಆ್ಯಪ್ ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

-https://apps.apple.com/mm/app/zee-hindustan/id1527717234

ನಿಮ್ಮ ಕೈಯಲ್ಲಿರುವುದು ಕೇವಲ ಜೀ ಹಿಂದೂಸ್ತಾನ್ ಆ್ಯಪ್ ಅಲ್ಲ, ಈಗ ಟಿವಿ ಕೂಡ ನಿಮ್ಮ ಕೈಯಲ್ಲಿ

ಹಿಂದೂಸ್ತಾನ್ ಕೇವಲ ಸುದ್ದಿಯನ್ನು ಪ್ರಕಟಿಸುವ ಆ್ಯಪ್ ಅಲ್ಲ, ಆದರೆ ಅದು ಸಂಪೂರ್ಣ ಟಿವಿ ಚಾನೆಲ್ ಆಗಿದೆ.ಇದರಲ್ಲಿ, ಲೈವ್ ಬುಲೆಟಿನ್ಗಳು ಮತ್ತು ಜೀ ಹಿಂದೂಸ್ತಾನ್ ಟಿವಿಯ ವಿಶೇಷ ಟಿವಿ ಕಾರ್ಯಕ್ರಮಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ನೀವು ಟಿವಿಯಲ್ಲಿ ವೀಕ್ಷಿಸಲು ಮರೆತಿದ್ದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಅದನ್ನು ಅಪ್ಲಿಕೇಶನ್‌ನಲ್ಲಿ ಎಲ್ಲಿ ಬೇಕಾದರೂ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಜೀ ಹಿಂದೂಸ್ತಾನ್ ಆ್ಯಪ್ ನ ವೈಶಿಷ್ಟ್ಯ:

ಜೀ ಹಿಂದೂಸ್ತಾನ್ ದೇಶ ಮತ್ತು ಜಗತ್ತಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದ ಬಗ್ಗೆ ವಿಶೇಷ ಪ್ರಸಾರವನ್ನು ಒದಗಿಸುತ್ತದೆ.ಯಾವುದೇ ಒಂದು ಸುದ್ದಿಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿವೆ.ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಜೀ ಹಿಂದೂಸ್ತಾನ್ ಕನ್ನಡ ಆ್ಯಪ್ ನಲ್ಲಿ ಸಿಗುತ್ತದೆ.ಅದು ರಾಜಕೀಯದ ಬಣ್ಣವಾಗಲಿ ಅಥವಾ ರಾಷ್ಟ್ರೀಯತೆಯ ದೊಡ್ಡ ಧ್ವನಿಯಾಗಲಿ, ಜಾಗತಿಕ ಕೋಲಾಹಲವಾಗಲಿ ಅಥವಾ ಗ್ಯಾಜೆಟ್‌ಗಳು ಮತ್ತು ಗ್ಲಾಮರ್‌ನ ಪ್ರಜ್ವಲಿಸುವ ಜಗತ್ತು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ, ಧರ್ಮ ಮತ್ತು ಜ್ಯೋತಿಷ್ಯ, ಹೀಗೆ ಇನ್ನೂ ಹಲವಾರು ಕುತೂಹಲಗಳ ಆಗರವನ್ನು ಹಿಂದೂಸ್ತಾನ್ ನ್ಯೂಸ್ ಆ್ಯಪ್ ಹೊಂದಿದೆ.

 

Trending News