ಯಡಿಯೂರಪ್ಪಗೆ ಅದೃಷ್ಟ ತಂದಿತ್ತು ಸಿಕೆಆರ್ 454! ಇದೀಗ ಪುತ್ರನಿಗೂ ನುಡಿಯುತ್ತಾ ಶುಭ ಶಕುನ

Karnataka Election 2023 : ಯಡಿಯೂರಪ್ಪರ ರಾಜಕೀಯ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿತ್ತು ಸಿಕೆಆರ್ 454.  ನಾಮಪತ್ರ ಸಲ್ಲಿಸುವಾಗಲೆಲ್ಲಾ ಈ ನಂಬರ್ ಶುಭಶಕುನವನ್ನೇ ನುಡಿಯುತ್ತಿತ್ತು.  ತಂದೆಯ ಪಾಲಿಗೆ ಅದೃಷ್ಟ ತಂದಿದ್ದ ಈ ನಂಬರ್ ಮಗನಿಗೂ ಲಕ್ಕಿಯಾಗಿ ಸಾಬೀತಾಗಲಿದೆಯಾ ? 

Written by - Ranjitha R K | Last Updated : Apr 19, 2023, 02:27 PM IST
  • ಈ ಬಾರಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ ಶಿಕಾರಿಪುರ.
  • ಕ್ಷೇತ್ರದಿಂದ ಬಿ.ಎಸ್.ವೈ ಪುತ್ರ ಬಿ.ವೈ ವಿಜಯೇಂದ್ರ ಕಣಕ್ಕೆ
  • ಇಂದು ವಿಜಯೇಂದ್ರ ನಾಮಪತ್ರ
ಯಡಿಯೂರಪ್ಪಗೆ ಅದೃಷ್ಟ ತಂದಿತ್ತು ಸಿಕೆಆರ್ 454! ಇದೀಗ ಪುತ್ರನಿಗೂ ನುಡಿಯುತ್ತಾ ಶುಭ ಶಕುನ  title=

ಶಿವಮೊಗ್ಗ : ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಲ್ಲದ ಈ ಚುನಾವಣೆಯನ್ನು ಕಾರ್ಯಕರ್ತರು ಅರಗಿಸಿಕೊಳ್ಳುವುದು ಕಷ್ಟ. ಆದರೂ ಬಿ.ಎಸ್.ವೈ ಕ್ಷೇತ್ರವನ್ನು ಪುತ್ರ ಬಿ.ವೈ ವಿಜಯೇಂದ್ರಗೆ ಧಾರೆ ಎರೆದಿದ್ದಾರೆ. ತಂದೆಯ ರಾಜಕೀಯ ರಥವನ್ನು ಮುನ್ನಡೆಸಲು ಬಿ.,ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ಅಂಬಾಸಿಡರ್  ಕಾರಿನಲ್ಲಿ ತೆರಳಿದ ವಿಜಯೇಂದ್ರ :  
ಬಿ.ವೈ ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಸುವ ಮುನ್ನ ತೋಟದ ಮನೆಯಲ್ಲಿ ಕುಟುಂಬ ಪರಿವಾರ ಅವರಿಗೆ ಆರತಿ ಎತ್ತಿ ಶುಭ ಹಾರೈಸಿತು. ಕುಟುಂಬದ ಸದಸ್ಯರು ನಾಮಪತ್ರ ಸಲ್ಲಿಸಲು ಹೊರಡುವಾಗ ದುಬಾರಿ ಕಾರಿನಲ್ಲೇ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮನೆಯ ಮುಂದಿನ ವರಾಂಡದಲ್ಲಿ ಬಿಳಿ ಬಣ್ಣದ ಅಂಬಾಸಿಡರ್ ಕಾರು ಎಲ್ಲರನ್ನೂ ಬರಮಾಡಿಕೊಳ್ಳಲು ಕಾದಿತ್ತು. ಯಡಿಯೂರಪ್ಪ ಪುತ್ರ ವಿಜಯೇಂದ್ರ, ರಾಘವೇಂದ್ರ ಹಾಗೂ ಅವರ ಪತ್ನಿ 30 ವರ್ಷ ಹಳೆಯ ಅಂಬಾಡಿಸರ್ ಕಾರಿನಲ್ಲಿ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದರು. 

ಇದನ್ನೂ ಓದಿ : ಸೋಮಣ್ಣ ಬೆಂಗಳೂರು ಬಿಟ್ಟು ವರುಣಾಗೆ ಏಕೆ ಬಂದಿದ್ದು: ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ-ಸೋಮಣ್ಣ ತೀವ್ರ ವಾಗ್ಧಾಳಿ

ಏನೀ ಕಾರಿನ ವಿಶೇಷ : 
ಈ ಅಂಬಾಸಿಡರ್ ಕಾರು ಯಡಿಯೂರಪ್ಪ ರಾಜಕೀಯ  ಬದುಕಿಗೆ ಹೊಸ ಮುನ್ನುಡಿ ಬರೆದಿದೆ. ಚುನಾವಣೆಯಲ್ಲಿ ಗೆಲವನ್ನು ತಂದುಕೊಟ್ಟ ಕಾರು ಅದು. ಆ ಕಾರಿನ ನಂಬರ್ ಸಿಕೆಆರ್ 454. ಇದು ಯಡಿಯೂರಪ್ಪನವರಿಗೆ ಲಕ್ಕಿ ನಂಬರ್. ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ನಂತರ ಈ ಕಾರನ್ನು ಖರೀದಿಸಿದ್ದರು.  

ಬಿಎಸ್ ವೈಗೆ ಅದೃಷ್ಟ ಈ ಕಾರು : 
ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮನೆಯಿಂದ ಹೊರಡುವಾಗ ಇದೇ ಅಂಬಾಸಿಡರ್ ಕಾರಿನಲ್ಲಿ  ಬಿಫಾರಂನೊಂದಿಗೆ ಚುನಾವಣಾ ಕಚೇರಿಗೆ ಬರುತ್ತಿದ್ದರು. ಇದೇ ಸಂಪ್ರದಾಯಕ್ಕೆ ಪುತ್ರ ಬಿ.ವೈ ವಿಜಯೇಂದ್ರ ಇಂದು ನಾಂದಿ ಹಾಡಿದ್ದಾರೆ. ತಂದೆಯಂತೆ ತಾನು ಕೂಡಾ ರಾಜಕೀಯ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂಬ ಮಹದಾಸೆ ವಿಜಯೇಂದ್ರ ಗೆ ಇದೆ. ಹೀಗಾಗಿ ಇಂದು ತಂದೆಯ ಲಕ್ಕಿ ಅಂಬಾಡಿಸಿಡರ್ ಕಾರಿನಲ್ಲಿ ಪಯಣಿಸಿ ಹುಚ್ಚರಾಯ ಸ್ವಾಮಿ ದೇವರ ಆಶಿರ್ವಾದ ಪಡೆದಿದ್ದಾರೆ. ನಂತರ ನಾಮಪತ್ರ ಸಲ್ಲಿಸಿದ್ದಾರೆ.  

ಇದನ್ನೂ ಓದಿ :  ಇಂದು ಸೋಮಣ್ಣ ನಾಮಿನೇಷನ್: ಟೆಂಪಲ್ ರನ್, ಬೃಹತ್ ಸಮಾವೇಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News