ಸೋಮಣ್ಣ ಬೆಂಗಳೂರು ಬಿಟ್ಟು ವರುಣಾಗೆ ಏಕೆ ಬಂದಿದ್ದು: ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ-ಸೋಮಣ್ಣ ತೀವ್ರ ವಾಗ್ಧಾಳಿ

Karnataka assembly Election: ಮೋದಿ ಕರ್ನಾಟಕಕ್ಕೆ ಬಂದರೇ  ಕಾಂಗ್ರೆಸ್ ಅವರ ಗುಂಡಿಗೆಯಲ್ಲಿ ಭಯ ಶುರುವಾಗಲಿದೆ. ನಾನು ಗೋಲಿ, ಬುಗುರಿ ಆಡಿ ಬೆಳೆದಿದ್ದು ಸಿದ್ದರಾಮನಹುಂಡಿಯಲ್ಲಿ, ವರುಣಾಗೆ ಯಾಕೆ ಸೋಮಣ್ಣ ಬಂದ್ರು ಎಂದು ಕೇಳುತ್ತಿದ್ದಾರೆ. ಅವರ ಎದೆಯಲ್ಲಿ ನಡುಕ ಶುರುವಾಗಿದೆ, ಅವರಿಗೆ ಭಯ ಬರಿಸಬೇಕಿತ್ತು, ಬರಿಸಿದ್ದಾಗಿದೆ ನಮಗೆ ಖುಷಿ ಇದೆ ಎಂದು ವ್ಯಂಗ್ಯ ಮಾಡಿದರು.  

Written by - Yashaswini V | Last Updated : Apr 19, 2023, 01:48 PM IST
  • ಸೋಮಣ್ಣ ಹಳೇ ಮೈಸೂರಿಗೆ ಬಂದ ನಂತರ ವಾತಾವರಣ ಬದಲಾಗಿದೆ
  • ಚಾಮರಾಜನಗರದ ನಾಲ್ಕಕ್ಕೆ ನಾಲ್ಕು ಗೆಲ್ತೀವಿ
  • ಮೈಸೂರಿನಲ್ಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ- ಸಂಸದ ಪ್ರತಾಪ್ ಸಿಂಹ
ಸೋಮಣ್ಣ ಬೆಂಗಳೂರು ಬಿಟ್ಟು ವರುಣಾಗೆ ಏಕೆ ಬಂದಿದ್ದು: ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ-ಸೋಮಣ್ಣ ತೀವ್ರ ವಾಗ್ಧಾಳಿ  title=

Karnataka assembly Election 2023: ಬೆಂಗಳೂರು ಬಿಟ್ಟು ವರುಣಾಗೆ ಏಕೆ ಬಂದಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಅಭ್ಯರ್ಥಿ ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದರು.

ಗೆಲ್ಲಿಸಿಕೊಡಿ ನಂತರ ವರುಣಾದಲ್ಲಿರಬೇಕು, ಚಾಮರಾಜನಗರದಲ್ಲಿರಬೇಕು ಅಂತಾ ತೀರ್ಮಾನ ಮಾಡೋಣ!
ಚಾಮರಾಜನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪ್ರತಾಪ್ ಸಿಂಹ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಹೈಕಮಾಂಡ್ ನಮ್ಮ ಅಭಿಪ್ರಾಯ ಕೇಳಿತ್ತು.ವರುಣಾಗೆ ಸಿದ್ದರಾಮಯ್ಯ ವಾಪಾಸ್ ಬರ್ತಿದ್ದಾರೆ. ಆ ಉತ್ಸಾಹ ತಣ್ಣಗಾಗಿಸಲು ಯಾರನ್ನೂ ಕಳಿಸಬೇಕು ಅನ್ನೋ ಚರ್ಚೆಯಿತ್ತು. ಆಗ ನಾವೂ ಹೇಳಿದ್ದು ಸೋಮಣ್ಣ ಹೆಸರು. ಚಾಮರಾಜನಗರ, ವರುಣಾ ಎರಡಕ್ಕೂ ಕೂಡ ಅವರನ್ನು ಕಳಿಸಿದ್ದಾರೆ. ಮೇ 13 ರಂದು ನೀವೂ ವಿ. ಸೋಮ್ಮಣ್ಣ ಅವರನ್ನು ಗೆಲ್ಲಿಸಿಕೊಡಿ. ನಾವೂ ಸೋಮಣ್ಣ ರನ್ನು ವರುಣಾದಲ್ಲಿ ಗೆಲ್ಲಿಸ್ತೀವಿ. ನಂತರ ಅವರು ವರುಣಾದಲ್ಲಿರಬೇಕು, ಚಾಮರಾಜನಗರದಲ್ಲಿರಬೇಕು ಅಂತಾ ತೀರ್ಮಾನ ಮಾಡೋಣ ಎಂದು ಮನವಿ ಮಾಡಿದರು.

ಮೋದಿ ಕರ್ನಾಟಕಕ್ಕೆ ಬಂದರೇ  ಕಾಂಗ್ರೆಸ್ ಅವರ ಗುಂಡಿಗೆಯಲ್ಲಿ ಭಯ ಶುರುವಾಗಲಿದೆ. ನಾನು ಗೋಲಿ, ಬುಗುರಿ ಆಡಿ ಬೆಳೆದಿದ್ದು ಸಿದ್ದರಾಮನಹುಂಡಿಯಲ್ಲಿ, ವರುಣಾಗೆ ಯಾಕೆ ಸೋಮಣ್ಣ ಬಂದ್ರು ಎಂದು ಕೇಳುತ್ತಿದ್ದಾರೆ. ಅವರ ಎದೆಯಲ್ಲಿ ನಡುಕ ಶುರುವಾಗಿದೆ, ಅವರಿಗೆ ಭಯ ಬರಿಸಬೇಕಿತ್ತು, ಬರಿಸಿದ್ದಾಗಿದೆ ನಮಗೆ ಖುಷಿ ಇದೆ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ- ಇಂದು ಸೋಮಣ್ಣ ನಾಮಿನೇಷನ್: ಟೆಂಪಲ್ ರನ್, ಬೃಹತ್ ಸಮಾವೇಶ

ಬೆಂಗಳೂರಿನಿಂದ ಸೋಮಣ್ಣ ವರುಣಾಗೆ ಯಾಕೆ ಬಂದ್ರು ಅಂತಾ ಕೇಳ್ತಾರೆ, ಇಂದಿರಾಗಾಂಧಿ  ಏಕೆ ಚಿಕ್ಕಮಗಳೂರಿಗೆ ಬಂದ್ರು, ಅವರೇನು ಅಲ್ಲಿ ಗೋಲಿ-ಬುಗುರಿ ಆಡಿದ್ರಾ, ಇಟಲಿಯಲ್ಲಿ ಹುಟ್ಟಿದ್ದ ಸೋನಿಯಾಗಾಂಧಿ ಬಳ್ಳಾರಿಗೆ ಬಂದ್ರು, ಡೆಲ್ಲಿಯಲ್ಲಿ ಹುಟ್ಟಿದ್ದ  ರಾಹುಲ್ ಗಾಂಧಿ ವೈನಾಡಿನಲ್ಲಿ ನಿಂತಿದ್ದರು, ತಾವು ಯಾಕೆ ಬಾದಾಮಿಗೆ ಹೋದ್ರಿ, ಕೋಲಾರ ಹುಡುಕ್ತಾ ಇದ್ರಿ ಎಂದು ಲೇವಡಿ ಮಾಡಿದರು.

ಬಿಜೆಪಿ ಮುಖಂಡ ಬಸವೇಗೌಡ ಅವರು ಮನೆಗೆ ಹೋಗಿ ಬಾಗಿಲು ಕಾದಿದ್ದೀರಿ..!
ಅಪ್ಪ, ಮಗ ಇಬ್ಬರೂ ಕೂಡ ಬಾಗಿಲು ಕಾದಿದ್ದೀರಿ, ನಿಮಗೆ ಈ ಪರಿಸ್ಥಿತಿ ಬರಬಾರದಿತ್ತು, ಸೋಮಣ್ಣ ಹಳೇ ಮೈಸೂರಿಗೆ ಬಂದ ನಂತರ ವಾತಾವರಣ ಬದಲಾಗಿದೆ, ಚಾಮರಾಜನಗರದ ನಾಲ್ಕಕ್ಕೆ ನಾಲ್ಕು ಗೆಲ್ತೀವಿ, ಮೈಸೂರಿನಲ್ಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮಾದಪ್ಪ, ಚಾಮುಂಡೇಶ್ವರಿ ಇಬ್ಬರ ಸೇವೆಯನ್ನೂ ಸೋಮಣ್ಣ ಮಾಡಿದ್ದಾರೆ. ಆದ್ರಿಂದ ಎರಡೂ ಕಡೆ ಗೆಲ್ಲಿಸಿಕೊಳ್ಳುವ ಕೆಲಸ ಮಾಡೋಣ ಎಂದು ಇದೇ ವೇಳೆ ಪ್ರತಾಪ್ ಸಿಂಹ ಜನರಿಗೆ ಕರೆ ನೀಡಿದರು. 

ಇದನ್ನೂ ಓದಿ- ಬಿಜೆಪಿ ಹರಕೆಯ ಕುರಿ vs ವರುಣಾದ ಮನೆ ಮಗನ ನಡುವಿನ ಚುನಾವಣೆ: ಸಿದ್ದರಾಮಯ್ಯ

ಸಚಿವ ಸೋಮಣ್ಣ ಮಾತನಾಡಿ, ಇಂದಿರಾಗಾಂಧಿಗೂ, ರಾಹುಲ್ ಗಾಂಧಿಗೂ ಕರ್ನಾಟಕಕಕ್ಕೂ ಕೇರಳಕ್ಕೂ ಏನು ಸಂಬಂಧ ಅದೇ ರೀತಿ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಸಿದ್ದು ವಿರುದ್ಧ ಆಕ್ರೋಶ ಹೊರಹಾಕಿದರು.

ನಿನ್ನೇ ಒಂದೇ ದಿನ ವರುಣಾದ 24 ಗ್ರಾಮಗಳನ್ನು ಸುತ್ತಿದ್ದೇನೆ, ಜನರು ಬದಲಾವಣೆ ಬಯಸಿದ್ದಾರೆ. ಅದೇ ರೀತಿ, ಚಾಮರಾಜನಗರದ ಜನರು ಕೂಡ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು. 3 ಬಾರಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದೀರಿ. ನನಗೆ 5 ವರ್ಷ ಅವಕಾಶ ಕೊಡಿ, ರಾಜ್ಯದಲ್ಲೇ ನಂ 1 ತಾಲೂಕು ಮಾಡುವೆ ಎಂದು ಕೋರಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News