CM Bommai : ಬಿಜೆಪಿ ಅಲೆಯನ್ನು ತಡೆಯಲು ಕಾಂಗ್ರೆಸ್ ಗೆ ಸವಾಲು ಹಾಕುತ್ತೇನೆ – ಸಿಎಂ ಬೊಮ್ಮಾಯಿ

Karnataka assembly elections: ಐತಿಹಾಸಿಕ ನಗರ ಮೈಸೂರಿಗೆ ಟೂರಿಸಂ ಸರ್ಕೀಟ್ ಮಾಡಿ ಮೈಸೂರನ್ನು ಅಂತರಾಷ್ಟ್ರೀಯ ಭೂಪಟದಲ್ಲಿ ತೆಗೆದುಕೊಂಡು ಹೋಗಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಇದು ಈಡೇರಬೇಕಾದ್ರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

Written by - Zee Kannada News Desk | Last Updated : May 1, 2023, 06:34 PM IST
  • ಮೈಸೂರಿನಲ್ಲಿ ನಾಗೇಂದ್ರ ಪರ ಸಿಎಂ ಪ್ರಚಾರ
  • ಕರ್ನಾಟಕದಲ್ಲಿ ಮತ್ತೆ ಕಮಲ ಬರಲಿದೆ ಎಂದ ಬೊಮ್ಮಾಯಿ
  • ಮೈಸೂರು ದಸರಾಗೆ ವಿಶೇಷ ಅನುದಾನ
CM Bommai : ಬಿಜೆಪಿ ಅಲೆಯನ್ನು ತಡೆಯಲು ಕಾಂಗ್ರೆಸ್ ಗೆ ಸವಾಲು ಹಾಕುತ್ತೇನೆ – ಸಿಎಂ ಬೊಮ್ಮಾಯಿ title=

ಮೈಸೂರು: ಐತಿಹಾಸಿಕ ನಗರ ಮೈಸೂರಿಗೆ ಟೂರಿಸಂ ಸರ್ಕೀಟ್ ಮಾಡಿ ಮೈಸೂರನ್ನು ಅಂತರಾಷ್ಟ್ರೀಯ ಭೂಪಟದಲ್ಲಿ ತೆಗೆದುಕೊಂಡು ಹೋಗಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಇದು ಈಡೇರಬೇಕಾದ್ರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ನಾಗೇಂದ್ರ ಅವರು 5 ವರ್ಷದಲ್ಲಿ ಶಾಸಕರಾಗಿ ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಮೈಸೂರು ನಗರ ಅಭಿವೃದ್ಧಿಗೆ 1 ಸಾವಿರ ಕೋಟಿ ಅನುದಾನವನ್ನು ಕೊಟ್ಟಿದ್ದೀನಿ. ಮೈಸೂರು ದಸರಾಗೆ ವಿಶೇಷ ಅನುದಾನ ಕೊಟ್ಟು ಇಡೀ ದೇಶ ನೋಡುವಂತಹ ವೈಭವವನ್ನು ಕೊಡಲು ನಮ್ಮ ಸರ್ಕಾರ ಯಶಸ್ವಿಯಾಗಿದೆ. ಮೈಸೂರನ್ನು ಅಂತರಾಷ್ಟ್ರೀಯ ಮಟ್ಟದ ನಗರ ಮಾಡಬೇಕೆಂದು ಬಿಜೆಪಿ ಕನಸು.

ಇದನ್ನೂ ಓದಿ: Election Campaign:ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿರುವ ಪ್ರಿಯಾಂಕಾ ಗಾಂಧಿ!

ಸ್ಮಾರ್ಟ್ ಸಿಟಿ ಯೋಜನೆಯಡಿ 1 ಸಾವಿರ ಕೋಟಿ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಕೊಟ್ಟಿದ್ದಾರೆ. ನಿಮ್ಮ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸುವ ಶಕ್ತಿ ನಾಗೇಂದ್ರ ಅವರಲ್ಲಿ ಮಾತ್ರ ಇದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಕಾಂಗ್ರೆಸ್ ದು ಚುನಾವಣೆ ಸ್ಟಂಟ್
 ರಾಜ್ಯವನ್ನು ಅಭಿವೃದ್ಧಿಯ ಸಮೃದ್ಧಿಯತ್ತ ತೆಗೆದುಕೊಂಡು ಹೋಗಬೇಕಾದರೆ ಬಿಜೆಪಿಗೆ ಮತ ನೀಡಿ. ಈ ಬಾರಿ ನಾಂಗೇಂದ್ರ ಅವರನ್ನು 50 ಸಾವಿರಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಇದನ್ನೂ ಓದಿ: Election Campaign:ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿರುವ ಪ್ರಿಯಾಂಕಾ ಗಾಂಧಿ!

ಕಾಂಗ್ರೆಸ್ ಗೆ ಸವಾಲು ಹಾಕುತ್ತೇನೆ
ಇಡೀ ಕರ್ನಾಟಕದಲ್ಲಿ ಬಿಜೆಪಿ ಅಲೆ ಇದೆ. ಈ ಬಿಜೆಪಿ ಅಲೆಯನ್ನು ಕಾಂಗ್ರೆಸ್ ತಡೆಯಲು ನಾನು ಸವಾಲು ಹಾಕುತ್ತೇನೆ. ಕರ್ನಾಟಕದಲ್ಲಿ ಮತ್ತೆ ಕಮಲ ಅರಳುತ್ತದೆ.ಇದರಲ್ಲಿ ಮೈಸೂರಿಗೆ ಅಗ್ರಸ್ಥಾನ ಇರುತ್ತದೆ. ಅಗತ್ಯವಿರುವ ಎಲ್ಲ ಅನುದಾನವನ್ನೂ ನಾವು ಕೊಡುತ್ತೇವೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News