Karnataka Assembly Election 2023: ಚಿಕ್ಕೋಡಿ ಕುರುಕ್ಷೇತ್ರದಲ್ಲಿ ಹೇಗಿದೆ ಪಕ್ಷಗಳ ಬಲಾಬಲ?

Written by - Zee Kannada News Desk | Last Updated : May 5, 2023, 08:56 AM IST
  • ಎಂಟು ಕ್ಷೇತ್ರಗಳಲ್ಲಿ ಭಾರೀ ಪೈಪೋಟಿ, ರಾಜಕೀಯ ಜಿದ್ದಾಜಿದ್ದಿ
  • ಪಕ್ಷಕ್ಕಿಂತ ವ್ಯಕ್ತಿ, ಮನೆತನಕ್ಕೆ ಹೆಚ್ಚಿನ ಗೌರವ, ಮತ ಕೂಡ
  • 4ನೇ ಬಾರಿಗೆ ಅದೃಷ್ಟ ಪರೀಕ್ಷೆ ನಡೆಸಿರುವ ಸತೀಶ್ ಜಾರಕಿಹೊಳಿ
Karnataka Assembly Election 2023: ಚಿಕ್ಕೋಡಿ ಕುರುಕ್ಷೇತ್ರದಲ್ಲಿ ಹೇಗಿದೆ ಪಕ್ಷಗಳ ಬಲಾಬಲ? title=

ಚಿಕ್ಕೋಡಿ ಕುರುಕ್ಷೇತ್ರ

ರಾಜ್ಯದಲ್ಲೇ ಬೆಂಗಳೂರು ಬಿಟ್ಟರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಈ ಬಾರಿ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿರುವ ಕೆಲವು ವಿಧಾನಸಭಾ ಕ್ಷೇತ್ರಗಳು ರಾಜ್ಯದ ಹಾಗೂ ದೇಶದ ಗಮನವನವನ್ನು ಸೆಳೆಯುತ್ತಿವೆ.  ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿರುವ ಶಶಿಕಲಾ ಜೊಲ್ಲೆ ಹಾಗೂ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆ ಹೇಳಿದ ಯಮಕನಮರಡಿ ಕ್ಷೇತ್ರದ ಸತೀಶ್ ಜಾರಕಿಹೊಳಿ, ಅಥಣಿ ವಿಧಾನಸಭಾ ಕ್ಷೇತ್ರದ ಲಕ್ಷ್ಮಣ್ ಸವದಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರದ ಶ್ರೀಮಂತ ಪಾಟೀಲ್ ಕ್ಷೇತ್ರಗಳು ಸದ್ಯ ಈಗ ರಾಜ್ಯದ ಗಮನವನ್ನು ಸೆಳೆಯುತ್ತಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ  

ದೇಶದ ಗಮನ ಸೆಳೆದ ಕ್ಷೇತ್ರಗಳು  
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳು
ಅಥಣಿ, ರಾಯಬಾಗ, ಕಾಗವಾಡ, ಕುಡಚಿ, ಚಿಕ್ಕೋಡಿ
ನಿಪ್ಪಾಣಿ, ಯಮಕನಮರಡಿ, ಹುಕ್ಕೇರಿ ಕ್ಷೇತ್ರಗಳ ವ್ಯಾಪ್ತಿ

- ಜಿಲ್ಲೆಯಲ್ಲಿರುವ ಕ್ಷೇತ್ರಗಳ ಸಂಖ್ಯೆ ಎಷ್ಟು..?

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದೆ.
ಅಥಣಿ, ರಾಯಬಾಗ, ಕಾಗವಾಡ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಯಮಕರಮಡಿ, ಹುಕ್ಕೇರಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
- ಸದ್ಯ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಇದೆ..?
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಬಿಜೆಪಿ ಶಾಸಕರಿದ್ದರೆ ಇನ್ನುಳಿದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಶಾಸಕ ಸ್ಥಾನಗಳನ್ನು ಹೊಂದಿದೆ.

ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕ..?

- ಅಥಣಿ- ಮಹೇಶ್ ಕುಮಠಳ್ಳಿ, ಬಿಜೆಪಿ  (2019 ಬೈ ಎಲೆಕ್ಷನ್‌)
- ಕಾಗವಾಡ- ಶ್ರೀಮಂತ ಪಾಟೀಲ್, ಬಿಜೆಪಿ  (2019 ಬೈ ಎಲೆಕ್ಷನ್‌)
- ರಾಯಬಾಗ- ದುರ್ಯೋಧನ ಐಹೊಳೆ, ಬಿಜೆಪಿ  (2018 ಎಲೆಕ್ಷನ್‌)
- ಕುಡಚಿ- ಪಿ.ರಾಜೀವ್, ಬಿಜೆಪಿ  (2018 ಎಲೆಕ್ಷನ್‌)
- ಚಿಕ್ಕೋಡಿ- ಗಣೇಶ ಹುಕ್ಕೇರಿ, ಕಾಂಗ್ರೆಸ್  (2018 ಎಲೆಕ್ಷನ್‌)
- ನಿಪ್ಪಾಣಿ- ಶಶಿಕಲಾ ಜೊಲ್ಲೆ, ಬಿಜೆಪಿ ‌  (2018 ಎಲೆಕ್ಷನ್‌)
- ಯಮಕನಮರಡಿ- ಸತೀಶ್ ಜಾರಕಿಹೊಳಿ, ಕಾಂಗ್ರೆಸ್  (2018 ಎಲೆಕ್ಷನ್‌)
- ಹುಕ್ಕೇರಿ- ದಿ.ಉಮೇಶ್ ಕತ್ತಿ, ಬಿಜೆಪಿ   (2018 ಎಲೆಕ್ಷನ್‌)

ಕೊನೇ ಚುನಾವಣಾ ಫಲಿತಾಂಶ - ಯಾವ ಪಕ್ಷ ಗೆದ್ದಿತ್ತು - ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರು.. - 2ನೇ ಸ್ಥಾನದಲ್ಲಿದ್ದ ಅಭ್ಯರ್ಥಿ ಯಾವ ಪಕ್ಷ..?

2018 ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಠಳ್ಳಿ 82091 ಪಡೆದು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ವಿರುದ್ಧ 2331 ಮತಗಳ ಅಂತರದಿಂದ ಗೆಲುವು.
2018 ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮಂತ ಪಾಟೀಲ್ 83060 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ರಾಜು ಕಾಗೆ ವಿರುದ್ಧ 32942 ಮತಗಳ ಅಂತರದಿಂದ ಗೆಲುವು.
2018 ರಾಯಬಾಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ 67502 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಮಾಳಿಗೆ ವಿರುದ್ಧ 16548 ಮತಗಳ ಅಂತರದಿಂದ ಗೆಲುವು.
2018 ಕುಡಚಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ ರಾಜೀವ್ 67781 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಅಮಿತ್ ಮಾಳಿಗೆ ವಿರುದ್ಧ 15008 ಮತಗಳ ಅಂತರದಿಂದ ಗೆಲುವು.
2018 ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ 91467 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ 10569 ಮತಗ ಅಂತರದಿಂದ ಗೆಲುವು.
2018 ನಿಪ್ಪಾಣಿ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ 87006 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ್ ವಿರುದ್ಧ 8506 ಮತಗಳ ಅಂತರದಿಂದ ಗೆಲುವು.
2018 ಹುಕ್ಕೇರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ದಿವಂಗತ ಉಮೇಶ್ ಕತ್ತಿ 83588 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಬಿ ಪಾಟೀಲ್ ವಿರುದ್ಧ  15385 ಮತಗಳ ಅಂತರದಿಂದ ಗೆಲುವು.
2018 ಯಮಕರಮಡಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 73512 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ವಿರುದ್ಧ 2850 ಮತಗಳಿಂದ ಗೆಲುವು.

ನಿಪ್ಪಾಣಿ ಕುರುಕ್ಷೇತ್ರ

 ಮತ-ಜಾತಿ ಲೆಕ್ಕಾಚಾರ 
ಒಟ್ಟು ಮತದಾರರ ಸಂಖ್ಯೆ 209099
ಪುರುಷ ಮತದಾರರು : 106134
ಮಹಿಳಾ ಮತದಾರರು : 102342
ಲಿಂಗಾಯತ : 39000
ಮುಸ್ಲಿಂ : 25249
ಕುರುಬರು : 21000
ಜೈನ : 22000
SC-ST : 21500
ಮರಾಠಾ : 49460
ಬ್ರಾಹ್ಮಣ : 3200
ಇತರೆ : 5000
ಲಿಂಗಾಯತ, ಮರಾಠ ಮತದಾರರೇ ನಿರ್ಣಾಯಕ

 2023 ರ ಸ್ಪರ್ಧಾಳುಗಳು 

ಬಿಜೆಪಿ - ಶಶಿಕಲಾ ಜೊಲ್ಲೆ
ಕಾಂಗ್ರೆಸ್ - ಕಾಕಾಸಾಹೇಬ ಪಾಟೀಲ್
NCP -ಉತ್ತಮ್ ಪಾಟೀಲ್

ಕಣದಲ್ಲಿರೋ ಅಭ್ಯರ್ಥಿ ಗೆಲುವು.. ಸೋಲಿಗೆ ಕಾರಣವಾಗಬಹುದಾದ ಅಂಶಗಳೇನು.. ಅಭ್ಯರ್ಥಿಯ ಫ್ಲಸ್‌, ಮೈನಸ್‌ ಏನು..?

ನಿಪ್ಪಾಣಿ ಕುರುಕ್ಷೇತ್ರ

ಬಿಜೆಪಿಗೆ ಪ್ಲಸ್
ಕ್ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅಭಿವ್ಱದ್ಧಿ ಕೆಲಸಗಳು.
ಕ್ಕ್ಷೇತ್ರದಲ್ಲಿ ಆಕ್ಟೀವ್ ಆಗಿರುವ ಶಾಸಕರು.
ಸರ್ಕಾರದ ಪರವಾಗಿ ಕ್ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳ ಆಯೋಜನೆ.

ಬಿಜೆಪಿಗೆ ಮೈನಸ್

ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಿಸಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿದ್ದಾಗ ಮೊಟ್ಟೆ ಡೀಲ್ ನಿಂದಾಗಿ ಪಕ್ಷಕ್ಕೆ ಡ್ಯಾಮೇಜ್.
ಕುಟುಂಬ ರಾಜಕಾರಣ. ಮರಾಠಾ ಮತಗಳು ನಿರ್ಣಾಯಕ.))

----------
------------

ಚಿಕ್ಕೋಡಿ ಕುರುಕ್ಷೇತ್ರ 
ಮತ-ಜಾತಿ ಲೆಕ್ಕಾಚಾರ   
ಒಟ್ಟು ಮತದಾರರ ಸಂಖ್ಯೆ: 223834
ಪುರುಷ ಮತದಾರರು : 112437
ಮಹಿಳಾ ಮತದಾರರು : 111388
ಲಿಂಗಾಯತ : 41423
ಬ್ರಾಹ್ಮಣ : 10210
SC-ST : 30121
ಕುರುಬರು : 17765
ಮುಸ್ಲಿಂ : 36710
ಮರಾಠ : 15165
ಕುಂಬಾರ : 5716
ಮಡಿವಾಳ : 2079
ವಿಶ್ವಕರ್ಮ : 3027
ಜೈನ : 29038
ಇತರೆ : 11165
ಲಿಂಗಾಯತ ಮತ್ತು ಮುಸ್ಲಿಂ ಮತದಾರರು ನಿರ್ಣಾಯಕ

2023ರ ಸ್ಪರ್ಧಾಳುಗಳು

ಕಾಂಗ್ರೆಸ್ - ಗಣೇಶ ಹುಕ್ಕೇರಿ
ಬಿಜೆಪಿ - ರಮೇಶ್ ಕತ್ತಿ  
ಜೆಡಿಎಸ್ - ಸುಹಾಸ್ ವಾಳಕೆ

ಚಿಕ್ಕೋಡಿ ವಿಧಾನಸಭಾ ಕ್ಷೇತ್ರ

ಬಿಜೆಪಿಗೆ ಪ್ಲಸ್

ಚಿಕ್ಕೋಡಿಯಲ್ಲಿ ಜೊಲ್ಲೆ ಕುಟುಂಬ ಕ್ಕ್ಷೇತ್ರದಲ್ಲಿ ರಾಜಕಾರಣದಲ್ಲಿ ಸಕ್ರೀಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಜನರಿಗೆ ಮನವರಿಕೆ.
ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದರಿಂದ ಸಹಜವಾಗಿಯೆ ಬಿಜೆಪಿಗೆ ಅನುಕೂಲ.

ಬಿಜೆಪಿಗೆ ಮೈನಸ್

ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದಾಗಿ ಬೇಸತ್ತ ಜನತೆ.
ಚಿಕ್ಕೋಡಿಯಲ್ಲಿ ಮಹಾಂತೇಶ ಕವಟಗಿಮಠ ಕುಟುಂಬದ ಪ್ರಭಾವವಿದೆ.
ಸದಲಗಾ ಭಾಗದಲ್ಲಿ ಪ್ರಕಾಶ ಹುಕ್ಕೇರಿ ಪ್ರಭಾವ ಬಹಳವಿದೆ.
ಹೀಗಾಗಿ ಬಿಜೆಪಿಗೆ ಬರುವ ಮತಗಳು ಇಬ್ಭಾಗವಾಗುವ ಸಾದ್ಯತೆ.))

------
------------

ಕಾಗವಾಡ   
ಮತ-ಜಾತಿವಾರು ಲೆಕ್ಕ  
ಒಟ್ಟು ಮತದಾರರು : 195008
ಪುರುಷ ಮತದಾರರು :99574
ಮಹಿಳಾ ಮತದಾರರು : 95430
ಲಿಂಗಾಯತ : 65337
ಬ್ರಾಹ್ಮಣ : 6250
SC-ST : 20505
ಮುಸ್ಲಿಂ : 10864
ಜೈನ : 21514
ಮರಾಠಾ : 35438
ಉಪ್ಪಾರ : 3729
ಕುರುಬರು : 1867
ಇತರರು : 580
ಲಿಂಗಾಯತ ಮತ್ತು ಮರಾಠ ಮತದಾರರು ನಿರ್ಣಾಯಕ

2023ರ ಸ್ಪರ್ಧಾಳುಗಳು  

ಬಿಜೆಪಿ - ಶ್ರೀಮಂತ ಪಾಟೀಲ್
ಕಾಂಗ್ರೆಸ್  - ರಾಜು ಕಾಗೆ
ಜೆಡಿಎಸ್  - ಮಲ್ಲಿಕಾರ್ಜುನ ಗುಂಜಗಾವಿ

ಬಿಜೆಪಿಗೆ ಪ್ಲಸ್

-ಕ್ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ್ ಸಚಿವರಾಗಿ ಶಾಸಕರಾಗಿ ಕೆಲಸ ಮಾಡಿದ ಅನುಭವ.
-ಬಿಜೆಪಿ ಭದ್ರಕೋಟೆ.
-ಸೌಮ್ಯ ಸ್ವಭಾವದ ವ್ಯಕ್ತಿತ್ವ.

ಬಿಜೆಪಿಗೆ ಮೈನಸ್

-ಕ್ಕ್ಷೇತ್ರದಲ್ಲಿ ಅಷ್ಟೊಂದು ಆಕ್ಟೀವ್ ಆಗಿರದ ಶ್ರೀಮಂತ ಪಾಟೀಲ್.
-ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.
-ಕೇಂದ್ರ ಸರಕಾರದ ಬೆಲೆ ಏರಿಕೆಯಿಂದಾಗಿ ಬೇಸತ್ತಿರುವ ಜನತೆ.

ಕಾಂಗ್ರೇಸಗೆ ಪ್ಲಸ್
-ಬಿಜೆಪಿ ನಾಯಕರ ಸರ್ವಾಧಿಕಾರಿ ದೋರಣೆಯಿಂದ ಬೇಸತ್ತ ಕ್ಕ್ಷೇತ್ರದ ಜನತೆ.
-ಬಿಜೆಪಿ ಸರ್ಕಾರದ ಆಡಳಿತ ವೈಪಲ್ಯ.
-ಕ್ಕ್ಷೇತ್ರದ ಕೆಲಕಡೆಗಳಲ್ಲಿ ಬಿಜೆಪಿ ಶಾಸಕರ ವಿರುದ್ಧ ಅಸಮಾಧಾನ.
-ನೆರೆಹಾವಳಿ ಸಂದರ್ಭದಲ್ಲಿ ಜನರಿಗೆ ಸಹಕಾರಿ.

ಕಾಂಗ್ರೇಸಗೆ ಮೈನಸ್
-ಕ್ಷೇತ್ರದಲ್ಲಿ ನಾಯಕತ್ವದ ಕೊರತೆ.
-ಕ್ಷೇತ್ರದಲ್ಲಿ ಕಾಂಗ್ರೇಸ್ ನಾಯಕರ ವರ್ಚಸ್ಸು ಅಷ್ಟೊಂದಾಗಿ ಇಲ್ಲದಿರುವುದು.
-ಕ್ಷೇತ್ರದಲ್ಲಿ ಕೆಲವು ಮುಖಂಡರು ಕೈಕೊಟ್ಟರೇ ಕಾಂಗ್ರೇಸ್ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ.))
--------
----------

ಅಥಣಿ  ಕುರುಕ್ಷೇತ್ರ 

ಮತ-ಜಾತಿವಾರು ಲೆಕ್ಕ  
ಒಟ್ಟು ಮತದಾರರು : 223088
ಪುರುಷ ಮತದಾರರು : 114201
ಮಹಿಳಾ ಮತದಾರರು : 108881
ಲಿಂಗಾಯತ : 68472
ಎಸ್.ಸಿ. : 30604
ಎಸ್.ಟಿ. : 3500
ಕುರುಬರು : 22820
ಮುಸ್ಲಿಂ : 19820
ಜೈನ : 15420
ಮರಾಠಾ : 16511
ಬ್ರಾಹ್ಮಣ : 6450
ಉಪ್ಪಾರ : 2300
ಇತರೆ : 4438
ಲಿಂಗಾಯತ, ಮುಸ್ಲಿಂ, ಕುರುಬ ಮತದಾರರು ನಿರ್ಣಾಯಕ

2023ರ ಸ್ಪರ್ಧಾಳುಗಳು

 ಬಿಜೆಪಿ - ಮಹೇಶ್ ಕುಮಠಳ್ಳಿ  
ಕಾಂಗ್ರೆಸ್ - ಲಕ್ಷ್ಮಣ್ ಸವದಿ
ಜೆಡಿಎಸ್ - ಶಶಿಕಾಂತ ಪಡಸಲಗಿ
AAP - ಸಂಪತ ಕುಮಾರ್ ಶೆಟ್ಟಿ
KRPP - ಬಸವರಾಜ್ ಬಿಸನಕೊಪ್ಪ

ಅಥಣಿ ವಿಧಾನಸಭಾ ಕ್ಷೇತ್ರ

ಬಿಜೆಪಿಗೆ ಪ್ಲಸ್.

-ಕ್ಷೇತ್ರದಲ್ಲಿ ಘಟಾನುಘಟಿ ನಾಯಕರುಗಳಿದ್ದಾರೆ.
-ಕ್ಷೇತ್ರದಲ್ಲಿ ಅರ್ ಎಸ್ ಎಸ್ ನಲ್ಲಿ ಪ್ರಭಾವಿ ನಾಯಕರುಗಳಿರುವುದರಿಂದ ಬಿಜೆಪಿಗೆ ವರದಾನ.
-ಹಲವು ಅಭಿವೃದ್ಧಿ ಕಾರ್ಯಗಳು.
-ಆಗಾಗ ಕ್ಕ್ಷೇತ್ರಕ್ಕೆ ಭೇಟಿ ನೀಡುವ ರಾಜ್ಯ ನಾಯಕರು.
-ಲಿಂಗಾಯತ ಸಮುದಾಯ ಬಿಜೆಪಿ ನಾಯಕರ ಬೆನ್ನಿಗೆ ನಿಂತಿದೆ.
-ಮಹೇಶ್ ಕುಮಠಳ್ಳಿ ಸೌಮ್ಯ ಸ್ವಭಾವ.

ಬಿಜೆಪಿಗೆ ಮೈನಸ್

-ಪ್ರಬಲ ಹಿಂದುಳಿದ ವರ್ಗಗಳಿಂದ ಕಾಂಗ್ರೇಸಗೆ ಆದ್ಯತೆ.
-ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿ ಗೆ ಹಿನ್ನಡೆ.

 ಕಾಂಗ್ರೇಸಗೆ ಪ್ಲಸ್

-ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಆನೆ ಬಲ
-ಕಾಂಗ್ರೇಸ್ ಸ್ಥಳೀಯ ಮಟ್ಚದಿಂದ ಬೆಳೆಯಬೇಕಾಗದೆ.
-ರಾಜ್ಯ ನಾಯಕರು ಭೇಟಿ ನೀಡುತ್ತಿರುತ್ತಾರೆ.

ಕಾಂಗ್ರೇಸಗೆ ಮೈನಸ್

-ಸ್ಥಳೀಯ ಕಾಂಗ್ರೆಸ್ ನಾಯಕರುಗಳೆಲ್ಲರೂ ಎಂಎಲ್ಎ ಟಿಕೇಟ್ ಆಕಾಂಕ್ಕ್ಷಿಗಳಾಗಿದ್ದರು.
-ಸವದಿ ಆಗಮನದಿಂದ ಒಳಗಿಂದೊಳಗೆ ಅಸಮಾಧಾನ.
-ಸ್ಥಳೀಯ ನಾಯಕರುಗಳ ನಡುವೆಯೇ ಜಿದ್ದಾಜಿದ್ದಿ.

--------
--------------

ಕುಡಚಿ ಕುರುಕ್ಷೇತ್ರ 

ಮತ-ಜಾತಿವಾರು ಲೆಕ್ಕ  
ಒಟ್ಟು ಮತದಾರರು : 193153
ಪುರುಷ ಮತದಾರರು : 99043
ಮಹಿಳಾ ಮತದಾರರು : 94096
ಲಿಂಗಾಯತ : 56620
ಎಸ್.ಸಿ. : 27665
ಎಸ್.ಟಿ. : 3714
ಕುರುಬರು : 43270
ಮುಸ್ಲಿಂ : 40875
ಜೈನ : 7510
ಮರಾಠಾ : 3709
ಬ್ರಾಹ್ಮಣ : 1072
ಇತರರು : 8955
ಲಿಂಗಾಯತ, ಮುಸ್ಲಿಂ, ಕುರುಬ ಸಮುದಾಯ ಮತ ನಿರ್ಣಾಯಕ

2023ರ ಸ್ಪರ್ಧಾಳುಗಳು 

ಬಿಜೆಪಿ - ಪಿ. ರಾಜೀವ್
ಕಾಂಗ್ರೆಸ್ - ಮಹೇಂದ್ರ ತಮ್ಮಣ್ಣವರ್
KRPP - ಶ್ರೀಶೈಲ ಭಜಂತ್ರಿ

ಬಿಜೆಪಿಗೆ ಪ್ಲಸ್
-ಕ್ಷೇತ್ರದಲ್ಲಿ ಪಿ.ರಾಜೀವ್ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ.
-ಕ್ಷೇತ್ರದಲ್ಲಿ ವಯಕ್ತಿಕ ವರ್ಚಸ್ಸು ಹೊಂದಿರುವ ನಾಯಕ.
-ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳುವಳಿಕೆ.

ಬಿಜೆಪಿಗೆ ಮೈನಸ್
-ಕೇಂದ್ರ ಸರಕಾರದ ಕೆಲ ಜನವಿರೋಧಿ ಯೋಜನೆಗಳು.
-ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಕ್ಕ್ಷೇತ್ರಗಳಿಗೆ ಭೇಟಿ.

ಕಾಂಗ್ರೇಸ್ಗೆ ಪ್ಲಸ್
-ಮುಸ್ಲಿಂರು ಹಾಗೂಹಿಂದುಳಿದ ವರ್ಗಗಳ ಮತಗಳು ಜಾಸ್ತಿ ಇವೆ.
-ಹಾಲಿ ಶಾಸಕರು ಜನರ ಜತೆಗೆ ಅಷ್ಟೊಂದು ಸಂಪರ್ಕದಲ್ಲಿ ಇಲ್ಲ.

ಕಾಂಗ್ರೇಸಗೆ ಮೈನಸ್

-ಬಣ ರಾಜಕೀಯ.
-ಕಾಂಗ್ರೇಸ್ ಪಕ್ಷದಲ್ಲಿ ನಾಯಕತ್ವದ ಕೊರತೆ.
-ಪಿ.ರಾಜೀವ್ ವಿರುದ್ದ ಮತ ಪಡೆಯುವುದು ಅಷ್ಟೊಂದು ಸುಲಭವಲ್ಲ.))
---------
-------------

ರಾಯಬಾಗ ಕುರುಕ್ಷೇತ್ರ 
ಮತ-ಜಾತಿವಾರು ಲೆಕ್ಕ  
ಒಟ್ಟು ಮತದಾರರು : 191690
ಪುರುಷ ಮತದಾರರು : 99026
ಮಹಿಳಾ ಮತದಾರರು : 91978
ಲಿಂಗಾಯತ : 59235
ಎಸ್.ಸಿ. : 31000
ಎಸ್.ಟಿ. : 3600
ಕುರುಬರು : 53000
ಮುಸ್ಲಿಂ : 25090
ಜೈನ : 9001
ಮರಾಠಾ : 10200
ಉಪ್ಪಾರ : 8300
ಇತರರು : 4531
ಲಿಂಗಾಯತ, ಮುಸ್ಲಿಂ, ಕುರುಬ ಸಮುದಾಯ ಮತಗಳು ನಿರ್ಣಾಯಕ

2023 ಸ್ಪರ್ಧಾಳುಗಳು  

ಬಿಜೆಪಿ - ದುರ್ಯೋಧನ ಐಹೊಳೆ
ಕಾಂಗ್ರೆಸ್ - ಮಹಾವೀರ ಮೋಹಿತೆ
ಜೆಡಿಎಸ್ - ಪ್ರದೀಪ್ ಮಾಳಿಗೆ
ಸ್ವತಂತ್ರ  - ಶಂಭು ಕಲ್ಲೋಳಿಕರ

ಬಿಜೆಪಿಗೆ ಪ್ಲಸ್
-ಕಳೆದ ಮೂರು ಅವಧಿಗಳಿಂದಲೂ ಶಾಸಕರಾಗಿರುವ ದುರ್ಯೋದನ ಐಹೊಳೆ.
-ಕ್ಕ್ಷೇತ್ರದ ಜನರಿಗೆ ಪಕ್ಷದ ಮೇಲೆ ವಿಶಾವಸ.
-ಬಿಜೆಪಿ ನಾಯಕರ ಜನರೊಂದಿಗೆ ಉತ್ತಮ ಸಂಪರ್ಕ.

ಬಿಜೆಪಿಗೆ ಮೈನಸ್
-ಕೇಂದ್ರ ಸರ್ಕಾರಗ ಬೆಲೆ ಏರಿಕೆ ಬಿಸಿ.
-ಹಾಲಿ ನಾಯಕರ ಆಡಳಿತದಿಂದ ಬೇಸತ್ತಿರುವ ಜನತೆ.
-ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಅಲ್ಲಿನ ಜನ.

ಕಾಂಗ್ರೇಸಗೆ ಪ್ಲಸ್
-ಶಾಸಕರ ಆಡಳಿತಕ್ಕೆ ಬೇಸತ್ತಿರುವ ಕ್ಕ್ಷೇತ್ರದ ಜನತೆ.
-ಕ್ಷೇತ್ರದಲ್ಲಿ ಅಹಿಂದ ವರ್ಗಗಳ ಮತಗಳು ನಿರ್ಣಾಯಕ.
-ಕಾಂಗ್ರೇಸಗೆ ಮೈನಸ್
-ಸ್ಥಳೀಯ ಮಟ್ಚದಲ್ಲಿ ನಾಯಕತ್ವದ ಕೊರತೆ.
-ಕಾಂಗ್ರೇಸ್ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಕೊರತೆ.

-------
-------------

ಹುಕ್ಕೇರಿ ಕುರುಕ್ಷೇತ್ರ 

ಮತ-ಜಾತಿವಾರು ಲೆಕ್ಕ  
ಒಟ್ಟು ಮತದಾರರು : 192032
ಪುರುಷ ಮತದಾರರು : 95923
ಮಹಿಳಾ ಮತದಾರರು : 94978
ಲಿಂಗಾಯತ : 59904
ಎಸ್.ಸಿ. : 14050
ಎಸ್.ಟಿ. : 8000
ಕುರುಬರು : 14000
ಮುಸ್ಲಿಂ : 18000
ಬ್ರಾಹ್ಮಣ : 7600
ಮರಾಠಾ : 13875
ವಿಶ್ವಕರ್ಮ : 4000
ಜೈನ : 14970
ನೇಕಾರರು : 4600
ಉಪ್ಪಾರ : 3500
ಕುಂಬಾರ : 4000
ಮಡಿವಾಳ : 2500
ಇತರೆ :7200
ಲಿಂಗಾಯತ ಹಾಗೂ ಜೈನ್ ಧರ್ಮದ ಮತದಾರರು ನಿರ್ಣಾಯಕರು

2023ರ ಸ್ಪರ್ಧಾಳುಗಳು  
ಕಾಂಗ್ರೆಸ್ - ಎಬಿ ಪಾಟೀಲ್
ಬಿಜೆಪಿ - ನಿಖಿಲ್ ಕತ್ತಿ

ಬಿಜೆಪಿಗೆ ಪ್ಲಸ್
-ಕ್ಷೇತ್ರದಲ್ಲಿ ಕತ್ತಿ ಕುಟುಂಬದ ಹಿಡಿತ.
-ಕತ್ತಿ ಸಹೋದರರು ಪ್ರಭಾವಿ ರಾಜಕಾರಣಿಗಳು.
-ಕ್ಕ್ಷೇತ್ರದ ಅಭಿವೃದ್ಧಿ.
-ಬಿಜೆಪಿ ನಾಯಕರೀಗಳ ವರ್ಚಸ್ಸು.

ಬಿಜೆಪಿಗೆ ಮೈನಸ್
-ಸಚಿವ ಉಮೇಶ ಕತ್ತಿ ಅಕಾಲಿಕ ಮರಣ.
-ಕುಟುಂಬ ರಾಜಕಾರಣ.
-ಸಂಕೇಶ್ವರ ಸಕ್ಕರೆ ಕಾರ್ಖಾನೆ ಅವ್ಯವಹಾರ ಆರೋಪ.

ಕಾಂಗ್ರೇಸಗೆ ಪ್ಲಸ್
-ರಾಜ್ಯ ಹಾಗೆ ಕೇಂದ್ರ ಸರ್ಕಾರಗಳ ಬೆಲೆ ಏರಿಕೆ.
-ಕುಟುಂಬ ರಾಜಕಾರಣ
-ಜಿ.ಪಂ ದಿಂದ ವಿಧಾನಸಭಾವರೆಗೂ ಕತ್ತಿ ಕುಟುಂಬದಲ್ಲಿಯೇ ಅಧಿಕಾರ.
-ಪಂಚಮಸಾಲಿ ಸಮಾಜ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ.

ಕಾಂಗ್ರೇಸಗೆ ಮೈನಸ್
-ಕಾರ್ಯಕರ್ತರ ನಡುವೆ ಒಗ್ಗಟ್ಟಿನ ಕೊರತೆ.
-ಕತ್ತಿ ಕುಟುಂಬದ ವಿರುದ್ದ ಮತಬೇಟೆ ಕಷ್ಟಸಾಧ್ಯ.))
------
---------

ಯಮಕನಮರಡಿ ಕುರುಕ್ಷೇತ್ರ 
ಮತ-ಜಾತಿವಾರು ಲೆಕ್ಕ  
ಒಟ್ಟು ಮತದಾರರು : 163837
ಪುರುಷ ಮತದಾರರು : 82295
ಮಹಿಳಾ ಮತದಾರರು : 81542
ಲಿಂಗಾಯತ : 17601
ಬ್ರಾಹ್ಮಣ : 4450
SC-ST : 64250
ಕುರುಬರು : 5550
ಮುಸ್ಲಿಂ : 9485
ಜೈನ : 8700
ಮರಾಠಾ : 14623
ನೇಕಾರರು : 3625
ಇತರೆ : 6200
ಪರಿಶಿಷ್ಟ ಪಂಗಡ ಮತದಾರರರು ನಿರ್ಣಾಯಕರು

2023ರ ಸ್ಪರ್ಧಾಳುಗಳು   
ಕಾಂಗ್ರೆಸ್ - ಸತೀಶ್ ಜಾರಕಿಹೊಳಿ
ಬಿಜೆಪಿ - ಬಸವರಾಜ ಹುಂದ್ರಿ
ಜೆಡಿಎಸ್ - ಮಾರುತಿ ಅಷ್ಟಗಿ

ಬಿಜೆಪಿಗೆ ಪ್ಲಸ್
-ಮೋದಿ ಸರ್ಕಾರಕ ಯಶಸ್ವಿ ಯೋಜನೆಗಳು.
-ಮಾರುತಿ ಅಷ್ಟಗಿ ಸೋತರು ಸಹ ಕ್ಕ್ಷೈತ್ರದ ಜನರೊಂದಿಗೆ ನಿರಂತರ ಸಂಪರ್ಕ.
-ಬಿಜೆಪಿಯ ಘಟಾನುಘಟಿ ನಾಯಕರ ಉಸ್ತುವಾರಿಯಲ್ಲಿರೋ ಕ್ಕ್ಷೇತ್ರ.

ಬಿಜೆಪಿಗೆ ಮೈನಸ್
-ಬಣ ಬಡಿದಾಟ.
-ಮಾರುತಿ ಅಷ್ಟಗಿ ಟಿಕೇಟ್ ಕೈತಪಿದ್ದು.
-ಬಿಜೆಪಿಯಲ್ಲಿರೋ ಜಾರಕಿಹೊಳಿ ಕುಟುಂಬ ಕ್ಕ್ಷೇತ್ರದಾಂದ ಅಂತರ ಕಾಯ್ದುಕೊಂಡಿದೆ.
-ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಕೊರತೆ.

ಕಾಂಗ್ರೇಸಗೆ ಪ್ಲಸ್
-ಯಮಕನಮಕಡಿ ಕ್ಷೇತ್ರ ಕಾಂಗ್ರೇಸ್ ಭದ್ರಕೋಟೆ.
-ಸತೀಶ ಜಾರಕಿಹೊಳಿ ನಾಯಕತ್ವ.
-ಕ್ಕ್ಷೇತ್ರದ ಅಭಿವೃದ್ದಿ.
ಸತೀಶ ಜಾರಕಿಹೊಳಿ ರಾಜ್ಯಮಟ್ಟದ ನಾಯಕರು.

ಕಾಂಗ್ರೇಸಗೆ ಮೈನಸ್
-ಕ್ಷೇತ್ರದಲ್ಲಿ ಮೇಲೆ ಬಿಜೆಪಿ ನಾಯಕರ ಹದ್ದಿನ ಕಣ್ಣು.
-ಯಕನಮರಡಿಯಲ್ಲಿ ಶತಾಯಗತಾಯ ಅಧಿಕಾರಕ್ಕೇರಲು ಬಿಜೆಪಿ ತಯಾರು.
-ಇದರು ನಡುವೆ ಜೆಡಿಎಸ್ ಅಭ್ಯರ್ಥಿ ಮಾರುತಿ ಅಷ್ಟಗಿ ಸ್ವರ್ಧೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News